ಡ್ರೋನ್ ಪ್ರತಾಪ್ (Drone Pratap) ಅವರು ಸಾಕಷ್ಟು ಚರ್ಚೆಗೆ ಒಳಗಾದವರು. ತಾವೇ ಡ್ರೋನ್ ತಯಾರಿಸಿದ್ದಾಗಿ ಅವರು ಹೇಳಿದ್ದರು. ಇದನ್ನು ಅನೇಕರು ನಂಬಿದ್ದರು. ಅವರಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ಜಗ್ಗೇಶ್ ಸೇರಿ ಅನೇಕರು ಡ್ರೋನ್ ಪ್ರತಾಪ್ ಅವರನ್ನು ಹೊಗಳಿದರು. ಯುವ ವಿಜ್ಞಾನಿ ಎಂದೆಲ್ಲ ಅವರನ್ನು ಕರೆಯಲಾಯಿತು. ಆದರೆ, ಅವರು ಹೇಳಿದ್ದು ಸುಳ್ಳು ಎಂಬುದು ಆ ಬಳಿಕ ಗೊತ್ತಾಯಿತು. ಈಗ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಲ್ಲಿಯೂ ಅವರನ್ನು ಡೋಂಗಿ ಎಂದು ಕರೆಯಲಾಗಿದೆ.
ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಟ್ರೋಲ್ಗೆ ಒಳಗಾಗುತ್ತಾರೆ. ಈಗ ಅವರು ತಮ್ಮದೇ ಆಫೀಸ್ ಆರಂಭಿಸಿದ್ದಾರೆ. ಔಷಧ ಸಿಂಪಡನೆಗೆ ಡ್ರೋನ್ನ ಅವರು ಬಾಡಿಗೆ ನೀಡುತ್ತಾರೆ. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂದಿದೆ. ತುಕಾಲಿ ಸಂತೋಷ್ ಅವರು ಪ್ರತಾಪ್ನ ಕೆಣಕಿದ್ದಾರೆ.
ಪ್ರತಾಪ್ ಅವರ ಡ್ರೋನ್ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಆಡಿಕೊಂಡಿದ್ದಾರೆ. ‘ಡ್ರೋನ್ನ ಇವರೇ ತಯಾರಿಸುವುದಲ್ಲ. ಬೇರೆ ಕಡೆಯಿಂದ ತಂದು ಇವರು ಬಾಡಿಗೆ ಕೊಡೋದು ಅಷ್ಟೇ’ ಎಂದು ಹೇಳಿಕೊಂಡು ನಕ್ಕರು ತುಕಾಲಿ ಸಂತೋಷ್. ಇದನ್ನು ಕೇಳಿ ಪ್ರತಾಪ್ಗೆ ಸಿಟ್ಟೇ ಬಂತು. ‘ಬಿಸ್ನೆಸ್ ಬಗ್ಗೆ ಮಾತನಾಡೋದಾದರೆ ಕಚೇರಿಗೆ ಬನ್ನಿ, ಇಲ್ಲಿ ಆ ಬಗ್ಗೆ ಮಾತನಾಡಬೇಡಿ’ ಎಂದು ಸಿಟ್ಟಲ್ಲೇ ಹೇಳಿದರು.
ಇದನ್ನೂ ಓದಿ: ‘ನಮ್ಮ ಹೊಲಕ್ಕೂ ಡ್ರೋನ್ ತಗೊಂಡು ಬರ್ತೀರಾ?’ ಪ್ರತಾಪ್ನ ಕಾಲೆಳೆದ ತುಕಾಲಿ ಸಂತೋಷ್
‘ಇದು ಜೆನ್ಯೂನ್ ಕ್ವಶ್ಚನ್ ಆಗಿತ್ತು’ ಎಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದರು ಸ್ನೇಹಿತ್. ಆಗ ಪ್ರತಾಪ್ ಅವರು ಸಿಟ್ಟಿನಿಂದಲೇ ಉತ್ತರಿಸಿದರು. ಈ ವೇಳೆ ‘ನೀನು ಡೋಂಗಿ’ ಎಂದು ಹೇಳಿದರು ಸ್ನೇಹಿತ್. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಜೋರಾಗಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಇಂದು (ಅಕ್ಟೋಬರ್ 11) ಸಂಪೂರ್ಣ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಈ ರಿಯಾಲಿಟಿ ಶೋನ ನೋಡೋಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Wed, 11 October 23