Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಹೊಲಕ್ಕೂ ಡ್ರೋನ್ ತಗೊಂಡು ಬರ್ತೀರಾ?’ ಪ್ರತಾಪ್​ನ ಕಾಲೆಳೆದ ತುಕಾಲಿ ಸಂತೋಷ್

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೇ.80ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿ ಅವರಿದ್ದಾರೆ. ಅವರನ್ನು ತುಕಾಲಿ ಸಂತೋಷ್ ಅವರು ಮಾತನಾಡಿಸಲು ಪ್ರಯತ್ನಿಸಿದರು.

‘ನಮ್ಮ ಹೊಲಕ್ಕೂ ಡ್ರೋನ್ ತಗೊಂಡು ಬರ್ತೀರಾ?’ ಪ್ರತಾಪ್​ನ ಕಾಲೆಳೆದ ತುಕಾಲಿ ಸಂತೋಷ್
ಸಂತೋಷ್-ಡ್ರೋನ್ ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 10, 2023 | 8:21 AM

ಡ್ರೋನ್ ಪ್ರತಾಪ್ (Drone Prathap) ಬಗ್ಗೆ ಹುಟ್ಟಿಕೊಂಡ ಟ್ರೋಲ್​ಗಳು ಒಂದೆರಡಲ್ಲ. ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದಕ್ಕೆ ಕಾರಣ ಹಲವು. ಅವರು ಹಲವು ವಿಚಾರಗಳಲ್ಲಿ ಸುಳ್ಳು ಹೇಳಿದ್ದರು ಎಂಬುದು ಬಳಿಕ ತಿಳಿದು ಬಂದಿತ್ತು. ಅವರು ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಕರೆದುಕೊಂಡರು. ಈಗ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಲ್ಲಿ ಪ್ರತಾಪ್ ಅವರನ್ನು ಸಂತೋಷ್ ಕಾಲೆಳೆದಂತೆ ಕಂಡುಬಂತು. ಆ ಬಳಿಕ ಅದರ ಹಿಂದಿನ ನಿಜವಾದ ಉದ್ದೇಶ ತಿಳಿಯಿತು.

ಡ್ರೋನ್ ಪ್ರತಾಪ್ ಅವರು ತಮ್ಮದೇ ಆದ ಆಫೀಸ್ ಆರಂಭಿಸಿದ್ದಾರೆ. ಅಲ್ಲಿ ಡ್ರೋನ್​ಗಳನ್ನು ಇಟ್ಟಿದ್ದಾರೆ. ಕೃಷಿ ಭೂಮಿಗೆ ಔಷಧ ಸಿಂಪಡನೆ ಮಾಡಲೂ ಅವರ ಬಳಿ ಡ್ರೋನ್ ಸಿಗಲಿದೆಯಂತೆ. ಈ ವಿಚಾರವನ್ನು ಅವರು ಯೂಟ್ಯೂಬ್ ಚಾನೆಲ್​ಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೇ.80ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿ ಅವರಿದ್ದಾರೆ. ಅವರನ್ನು ತುಕಾಲಿ ಸಂತೋಷ್ ಅವರು ಮಾತನಾಡಿಸಲು ಪ್ರಯತ್ನಿಸಿದರು.

‘ಲೈಫ್ ಹೇಗೆ ಅನಿಸ್ತಿದೆ? ಇತ್ತೀಚೆಗೆ ಬೇರೆ ದೇಶಕ್ಕೆ ಹೋಗಿದ್ರಾ’ ಎಂದು ಪ್ರತಾಪ್​ಗೆ ಸಂತೋಷ್ ಕೇಳಿದರು. ಇದಕ್ಕೆ ಇಲ್ಲ ಎನ್ನುವ ಉತ್ತರ ಅವರ ಕಡೆಯಿಂದ ಬಂತು. ‘ಶಿವಮೊಗ್ಗದಲ್ಲಿ ಡ್ರೋನ್ ಬಿಡ್ತಾ ಇದ್ರಿ’ ಎಂದು ಸಂತೋಷ್ ಹೇಳಿದ ಮಾತಿಗೆ ಅಲ್ಲಿ ಸುತ್ತಮುತ್ತ ಇದ್ದವರು ನಕ್ಕರು. ‘ಡ್ರೋನ್​ನಲ್ಲಿ ಎಷ್ಟು ಲೀಟರ್ ಹಿಡಿಯುತ್ತೆ’ ಎಂದು ಅವರು ಪ್ರಶ್ನೆಯನ್ನು ಮುಂದುವರಿಸಿದರು. ‘11 ಲೀಟರ್​ದು ಇದೆ, 17 ಲೀಟರ್​ದು ಇದೆ ಹಾಗೂ 32 ಲೀಟರ್​ದು ಇದೆ’ ಎಂದು ಗಂಭೀರವಾಗಿ ಉತ್ತರಿಸಿದರು ಪ್ರತಾಪ್.

‘ನಮ್ಮ ಹೊಲಕ್ಕೆ ಡ್ರೋನ್ ತಗೊಂಡು ಬರ್ತೀರಾ’ ಎಂಬ ಸಂತೋಷ್ ಪ್ರಶ್ನೆಗೆ, ಡ್ರೋನ್ ಕಳುಹಿಸಿ ಕೊಡ್ತೀನಿ ಎನ್ನುವ ಉತ್ತರ ಪ್ರತಾಪ್ ಕಡೆಯಿಂದ ಬಂತು. ‘ನೀವೆ ಬನ್ನಿ, ಪರಿಚಯ ಆಗುತ್ತದೆ’ ಎಂದರು ಸಂತೋಷ್. ಆಗಲೂ ಸುತ್ತ ಇದ್ದವರು ನಕ್ಕರು. ‘ಅಯ್ಯೋ, ನಾನು ಗಂಭೀರವಾಗಿಯೇ ಇದ್ದನ್ನು ಹೇಳುತ್ತಿದ್ದೇನೆ. ಅವರು ಮಡಿಕೇರಿ, ಶಿವಮೊಗ್ಗ, ತೀರ್ಥಹಳ್ಳಿಗೆಲ್ಲ ಹೋಗಿದ್ದರು’ ಎಂದು ಸಂತೋಷ್ ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಸ್ಥಿತಿ ಅತಂತ್ರ: ಆರು ಜನರ ಹಣೆ ಬರಹ ನಿರ್ಧರಿಸಲಿರುವ ಬಿಗ್​ಬಾಸ್ ಮರುದಿನ ಡ್ರೋನ್ ಪ್ರತಾಪ್​ಗೆ ಬುದ್ಧಿವಾದ ಹೇಳುವ ಕೆಲಸವನ್ನು ಸಂತೋಷ್ ಮಾಡಿದರು. ‘ಜನರ ಜೊತೆ ಬೆರೆಯಿರಿ. ಪ್ರತಾಪ್ ಸೂಪರ್ ಆಗಿರಬೇಕು. ನೀವು ಬ್ಯೂಟಿಫುಲ್ ಪರ್ಸನ್. ನನ್ನ ಸ್ಟುಡೆಂಟ್ ನೀವು’ ಎಂದು ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Tue, 10 October 23

ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ