ಫುಡ್ ಪಾಯ್ಸನ್ ವಿಚಾರ: ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೊಂದು, ಹೊರಗೆ ಹೇಳ್ತಿರೋದೇ ಇನ್ನೊಂದು

ಪ್ರತಾಪ್ ಎರಡು ದಿನ ಸರಿಯಾಗಿ ಊಟ ಮಾಡಿರಲಿಲ್ಲ. ಆ ಬಳಿಕ ಅವರು ಆಸ್ಪತ್ರೆ ಸೇರಿದರು. ‘ಪ್ರತಾಪ್ ಆತ್ಮಹತ್ಯೆಗೆ ಪ್ರಯತ್ನಿಸಿದರು’ ಎನ್ನುವ ಸುದ್ದಿ ಎಲ್ಲ ಕಡೆ ಹರಿದಾಡಿತು.

ಫುಡ್ ಪಾಯ್ಸನ್ ವಿಚಾರ: ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೊಂದು, ಹೊರಗೆ ಹೇಳ್ತಿರೋದೇ ಇನ್ನೊಂದು
ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Jan 31, 2024 | 8:14 AM

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಸಾಕಷ್ಟು ಸುದ್ದಿ ಆದರು. ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೆ ಅವರಿಗೆ ಸಾಕಷ್ಟು ಖುಷಿ ಇದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರತಾಪ್ ಅವರು ಆಸ್ಪತ್ರೆಗೂ ಹೋಗಿದ್ದರು. ಇದೆಲ್ಲವನ್ನು ಅವರು ಸಮರ್ಥವಾಗಿ ಎದುರಿಸಿದ್ದಾರೆ. ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಾಪ್ ಕಡೆಯಿಂದ ಬಿಗ್ ಬಾಸ್ ಮನೆಯಲ್ಲೇ ಸ್ಪಷ್ಟನೆ ಸಿಕ್ಕಿತ್ತು. ಈಗ ಅವರು ಮಾಧ್ಯಮಗಳಲ್ಲಿ ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ಕೊಟ್ಟ ಸ್ಪಷ್ಟನೆಗೂ ಈಗ ನೀಡುತ್ತಿರುವ ಸ್ಪಷ್ಟನೆಗೂ ಸಾಕಷ್ಟು ವ್ಯತ್ಯಾಸ ಇದೆ.

ಬಿಗ್ ಬಾಸ್ ಮನೆಗೆ ಗುರೂಜಿ ಒಬ್ಬರು ಬಂದಿದ್ದರು. ‘ನೀನು ಕುಟುಂಬದಿಂದ ದೂರವೇ ಇರಬೇಕು’ ಎಂದು ಪ್ರತಾಪ್​ಗೆ ಸೂಚಿಸಿದ್ದರು. ಇದಾದ ಬಳಿಕ ಪ್ರತಾಪ್ ಸೈಲೆಂಟ್ ಆದರು. ಅವರು ಎರಡು ದಿನ ಸರಿಯಾಗಿ ಊಟವನ್ನೇ ಮಾಡಿರಲಿಲ್ಲ. ಆ ಬಳಿಕ ಅವರು ಆಸ್ಪತ್ರೆ ಸೇರಿದರು. ‘ಪ್ರತಾಪ್ ಆತ್ಮಹತ್ಯೆಗೆ ಪ್ರಯತ್ನಿಸಿದರು’ ಎನ್ನುವ ಸುದ್ದಿ ಹರಿದಾಡಿತು. ಈ ವಿಚಾರವಾಗಿ ಪ್ರತಾಪ್ ದೊಡ್ಮನೆಯಲ್ಲೇ ಸ್ಪಷ್ಟನೆ ನೀಡಿದ್ದರು.

‘ಎರಡು ದಿನ ಉಪವಾಸ ಇದ್ದೆ. ಆಗ ಅಲ್ಲಿಯೇ ಇದ್ದ ಕೆಲವು ವಿಟಾಮಿನ್ ಮಾತ್ರೆಗಳನ್ನು ತಿಂದೆ. ಇದರಿಂದ ಹೊಟ್ಟೆ ಹಾಳಾಯಿತು’ ಎಂದು ಪ್ರತಾಪ್ ಹೇಳಿದ್ದರು. ಇದನ್ನು ಎಲ್ಲರೂ ನಂಬಿದ್ದರು. ಆದರೆ, ದೊಡ್ಮನೆಯಿಂದ ಹೊರ ಬಂದ ಬಳಿಕ ಪ್ರತಾಪ್ ಬೇರೆಯದೇ ಕಥೆ ಹೇಳಿದ್ದಾರೆ ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್​ಗೆ ಸಿನಿಮಾ-ಧಾರಾವಾಹಿ ಆಫರ್​ಗಳು ಬಂದಿವೆಯೇ? ಒಪ್ಪಿಕೊಂಡಿದ್ದಾರಾ?

‘ಸರಿಯಾಗಿ ಊಟ ಮಾಡುತ್ತಾ ಇರಲಿಲ್ಲ. ರೆಫ್ರಿಜರೇಟರ್​ನಲ್ಲಿರುವ ಯಾವುದೋ ಹಳೆಯ ಊಟ ತಿಂದೆ. ಇದರಿಂದ ಫುಡ್ ಪಾಯ್ಸನ್ ಆಯ್ತು. ಏನೋ ಕೆಲವರು ಈ ರೀತಿ ಹೇಳಿದ್ದಾರೆ. ಇದೆಲ್ಲಾ ಕೇಳಿದಾಗ ನಗು ಬರುತ್ತದೆ’ ಎಂದಿದ್ದಾರೆ ಪ್ರತಾಪ್. ಅವರ ಎರಡು ರೀತಿಯಲ್ಲಿ ಉತ್ತರ ನೀಡಿದ್ದು ಏಕೆ ಎನ್ನುವ ಪ್ರಶ್ನೆ ಕಾಡಿದೆ.

ಬಿಗ್ ಬಾಸ್ ಮನೆಗೆ ಹೋಗುವಾಗ ಪ್ರತಾಪ್​ ಬಗ್ಗೆ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಅವರು ಹೊರ ಬಂದ ಬಳಿಕ ಅವರ ಮೇಲಿದ್ದ ಅಭಿಪ್ರಾಯ ಸಂಪೂರ್ಣವಾಗಿ ಬದಲಾಗಿದೆ. ಅವರ ಮೇಲೆ ಕೆಲವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:27 am, Wed, 31 January 24

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು