ಎಸ್​ಎಸ್​ಎಲ್​ಸಿಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಮಹತಿ ಭಟ್

| Updated By: ರಾಜೇಶ್ ದುಗ್ಗುಮನೆ

Updated on: May 20, 2022 | 2:35 PM

ಮೇ 19ರಂದು ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಸಾಕಷ್ಟು ಮಂದಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮಹತಿ ವಿಷ್ಣು ಭಟ್ ಕೂಡ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದ್ದಾರೆ

ಎಸ್​ಎಸ್​ಎಲ್​ಸಿಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಮಹತಿ ಭಟ್
ಮಹತಿ
Follow us on

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾದ ‘ಡ್ರಾಮಾ ಜ್ಯೂನಿಯರ್ಸ್​’ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ಮಹತಿ ವೈಷ್ಣವಿ ಭಟ್ (Mahati Vaishnavi Bhat). ಈ ರಿಯಾಲಿಟಿ ಶೋನಿಂದ ಅವರ ಖ್ಯಾತಿ ಹೆಚ್ಚಿತು. ಸದ್ಯ, ಧಾರಾವಾಹಿ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಹಾಗಂತ ಅವರು ಶಿಕ್ಷಣದ ಕಡೆಗೆ ಗಮನ ಹರಿಸುವುದನ್ನು ನಿಲ್ಲಿಸಿಲ್ಲ. ಈ ನಟಿ ಈಗ ಎಸ್​ಎಸ್​ಎಲ್​ಸಿ ಪಾಸ್​ ಆಗಿದ್ದಾರೆ. ಅದೂ ಶೇ.99 ಅಂಕ ಗಳಿಸಿ ಅನ್ನೋದು ವಿಶೇಷ. ಈ ಬಗ್ಗೆ ಮಹತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಸಾಕಷ್ಟು ವೈರಲ್ ಆಗಿದೆ. ಅವರಿಗೆ ಎಲ್ಲ ಕಡೆಯಿಂದ ಶುಭಾಶಯ ಹರಿದು ಬರುತ್ತಿದೆ.

ಮೇ 19ರಂದು ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಸಾಕಷ್ಟು ಮಂದಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮಹತಿ ಭಟ್ ಕೂಡ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದ್ದಾರೆ. ಅವರು 625ಕ್ಕೆ ಬರೋಬ್ಬರಿ 619 ಅಂಕ ಪಡೆದಿದ್ದಾರೆ. ಈ ಮೂಲಕ ಅವರ ಫಲಿತಾಂಶ ಶೆ. 99.04 ಆಗಿದೆ. ಇದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಖುಷಿ ನೀಡಿದೆ.

ಇದನ್ನೂ ಓದಿ
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
‘ಸೈಬರ್ ಲೋಕದಲ್ಲಿ ಹೆಣ್ಮಕ್ಕಳ ಖಾಸಗಿತನಕ್ಕೆ ಸೇಫ್ಟಿ ಇಲ್ಲ ಎಂದರೆ..’: ‘ಟಕ್ಕರ್​’ ಬಗ್ಗೆ ರಂಜನಿ ರಾಘವನ್​ ಮಾತು
ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?
Kannadathiಎಂಡಿ ಸೀಟ್ ಪಡೆಯಲು ಹೋದ ಕನ್ನಡತಿ ಸಾನಿಯಾಗೆ ಒಟ್ಟೊಟ್ಟಿಗೆ ಬಂತು 4 ಸಂಕಷ್ಟಗಳು!

ಇದನ್ನೂ ಓದಿ: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು

ಯಾವ ವಿಷಯಕ್ಕೆ ಎಷ್ಟು ಅಂಕ ಬಂದಿದೆ ಎಂಬುದನ್ನು ಮಹತಿ ಮಾಹಿತಿ ನೀಡಿದ್ದಾರೆ. ಕನ್ನಡದಲ್ಲಿ 124, ಇಂಗ್ಲಿಷ್ 100, ಹಿಂದಿಯಲ್ಲಿ 99, ವಿಜ್ಞಾನದಲ್ಲಿ 97, ಗಣಿತದಲ್ಲಿ 100, ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾರೆ. ಈ ಮೂಲಕ ಅವರು ಸಾಧನೆ ಮಾಡಿದ್ದಾರೆ. ಧಾರಾವಾಹಿ ಕೆಲಸಗಳ ಮಧ್ಯೆ ಅವರು ಇಷ್ಟು ಅಂಕ ಗಳಿಸಿದ್ದಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮಹತಿ, ‘ಫಲಿತಾಂಶ ಬಂದಿದೆ. ನಿಜಕ್ಕೂ  ಸಂತೋಷವಾಗಿದೆ. ಶೇ. 99.04 ಆಗಿದೆ. ಅಮ್ಮ, ಅಪ್ಪ, ಅಣ್ಣ, ಅಮ್ಮಮ್ಮ, ತಾತಯ್ಯ ನಿಮ್ಮ ಬೆಂಬಲಕ್ಕೆ ಧನ್ಯವಾದ. ನನ್ನನ್ನು ಬೆಂಬಲಿಸಿದ ಶಿಕ್ಷಕರಿಗೆ ಧನ್ಯವಾದ. ‘ಗಟ್ಟಿಮೇಳ’ ತಂಡ ಮತ್ತು ಜೀ ಅವರು ನೀಡಿದ ಬೆಂಬಲಕ್ಕಾಗಿ ತುಂಬ ಧನ್ಯವಾದಗಳು. ಲವ್​ ಯು ಆಲ್​. ನೀವು ಇಲ್ಲದೆ ಇದು ಅಸಾಧ್ಯ. ನನ್ನ ಇನ್​ಸ್ಟಾ ಕುಟುಂಬಕ್ಕೆ ವಿಶೇಷ ಥ್ಯಾಂಕ್ಸ್’​ ಎಂದಿದ್ದಾರೆ.

ಇದನ್ನೂ ಓದಿ: ಎರಡು ರಿಯಾಲಿಟಿ ಶೋಗಳಿಗೆ ಆಡಿಷನ್​ ಕರೆದ ಜೀ ಕನ್ನಡ; ಇದರಲ್ಲಿ ಪಾಲ್ಗೊಳ್ಳೋದು ಹೇಗೆ?

ಜೀ ಕನ್ನಡ ವಾಹಿನಿಯಲ್ಲಿ 2016ರಲ್ಲಿ ಪ್ರಸಾರವಾದ ‘ಡ್ರಾಮಾ ಜ್ಯೂನಿಯರ್ಸ್’ ಮೊದಲ ಸೀಸನ್‌ನಲ್ಲಿ ಮಹತಿ ವೈಷ್ಣವಿ ಭಟ್ ಸ್ಪರ್ಧಿಸಿದ್ದರು. ಸದ್ಯ, ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಅಮೂಲ್ಯಳ ಕಿರಿಯ ಸಹೋದರಿ ಅಂಜಲಿ ಪಾತ್ರದಲ್ಲಿ ಮಹತಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:32 pm, Fri, 20 May 22