ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್​ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದ ಸಹಜ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಒಬ್ಬರಿಗೊಬ್ಬರು ಬೈಯ್ದಾಡಿಕೊಳ್ಳುವುದು ಸಹಜ. ಆದರೆ ಅಶ್ಲೀಲ ಪದಗಳ ಬಳಕೆ ಸರಿಯಲ್ಲ. ಈ ವಿಚಾರದಲ್ಲಿ ಗೋಲ್ಡ್ ಸುರೇಶ್ ಅವರಿಗೆ ತುಂಬಾ ನೋವಾಗಿದೆ. ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್ ಆಡಿದ ಮಾತುಗಳಿಂದ ಸುರೇಶ್ ನೊಂದುಕೊಂಡಿದ್ದಾರೆ. ಹಾಗಾಗಿ ಆಟ ನಿಲ್ಲಿಸಲು ನಿರ್ಧರಿಸಿದರು.

ಅಶ್ಲೀಲ ಮಾತು ಕೇಳಲಾಗದೇ ಬಿಗ್ ಬಾಸ್​ನಿಂದ ಹೊರಗೆ ಬರಲು ಸುರೇಶ್ ನಿರ್ಧಾರ
ಗೋಲ್ಡ್ ಸುರೇಶ್​
Follow us
ಮದನ್​ ಕುಮಾರ್​
|

Updated on: Nov 21, 2024 | 10:25 PM

ಹೊರ ಜಗತ್ತಿನಲ್ಲಿ ಎಲ್ಲರಿಗೂ ಒಂದು ಗೌರವ ಇರುತ್ತದೆ. ಅನೇಕ ವರ್ಷಗಳ ಕಾಲ ಕಷ್ಟಪಟ್ಟು ಆ ಗೌರವವನ್ನು ಸಂಪಾದಿಸಲಾಗಿರುತ್ತದೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಯಾರೋ ಬಂದು ಅಸಭ್ಯವಾಗಿ ಬೈಯ್ದರೆ ಆ ಗೌರವಕ್ಕೆ ಧಕ್ಕೆ ಆಗುತ್ತದೆ. ಗೋಲ್ಡ್​ ಸುರೇಶ್ ಅವರ ಪರಿಸ್ಥಿತಿ ಹೀಗೆಯೇ ಆಗಿದೆ. ಕಷ್ಟಪಟ್ಟು ಬೆಳೆದ ವ್ಯಕ್ತಿ ಎಂಬ ಕಾರಣಕ್ಕೆ ಹೊರಗೆ ಅವರಿಗೆ ಎಲ್ಲರೂ ಗೌರವ ಕೊಡುತ್ತಾರೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಅವರನ್ನು ‘ವೇಸ್ಟ್​ ನನ್​ ಮಗ’ ಎಂದು ರಜತ್​ ಬೈಯ್ದಿದ್ದಾರೆ. ಅಲ್ಲದೇ, ಕೆಲವು ಅವಾಚ್ಯ ಪದಗಳಿಂದಲೂ ನಿಂದಿಸಿದ್ದಾರೆ.

ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಕಿರಿಕ್ ಆಯಿತು. ಇಬ್ಬರೂ ಪರಸ್ಪರ ಬೈಯ್ದುಕೊಂಡರು. ಆದರೆ ರಜತ್ ಅವರ ಗಡಿ ಮೀರಿ, ಅವಾಚ್ಯ ಪದಗಳನ್ನು ಬಳಸಿದರು. ಇದರಿಂದ ಸುರೇಶ್​ ಅವರು ಕೆರಳಿದರು. ಕ್ಯಾಮೆರಾ ಎದುರು ಬಂದು ಬಿಗ್​ ಬಾಸ್​ಗೆ ಈ ಬಗ್ಗೆ ಸುರೇಶ್ ದೂರು ನೀಡಿದರು. ‘ಇಂಥ ಅಶ್ಲೀಲ ಮಾತುಗಳನ್ನು ಹೇಳಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಹೊರಗೆ ಹೋಗುತ್ತೇನೆ’ ಎಂದು ಸುರೇಶ್ ಹಠ ಮಾಡಿದರು.

ಗೋಲ್ಡ್ ಸುರೇಶ್​ ಅವರು ಅರ್ಧಕ್ಕೆ ಟಾಸ್ಕ್​ ನಿಲ್ಲಿಸಿದರು. ‘ನಾನು ಆಡುವುದಿಲ್ಲ’ ಎಂದು ಖಡಕ್​ ಆಗಿ ನಿರ್ಧಾರ ತೆಗೆದುಕೊಂಡರು. ಅಲ್ಲದೇ, ತಮ್ಮ ಬಟ್ಟೆಗಳನ್ನು ಪ್ಯಾಕ್​ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದರು. ಕೆಟ್ಟ ಪದಗಳಿಂದ ಬೈಯ್ಯಿಸಿಕೊಂಡು ನೋವಾಗಿದ್ದರಿಂದ ಸುರೇಶ್ ಅವರು ಕಣ್ಣೀರು ಹಾಕಿದರು.

ಇದನ್ನೂ ಓದಿ: ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

52 ದಿನಗಳ ಕಾಲ ಕಷ್ಟಪಟ್ಟು ಆಡಿದ ಗೋಲ್ಡ್ ಸುರೇಶ್ ಅವರು ಈಗ ಅರ್ಧಕ್ಕೆ ಹೊರಟು ಹೋಗುತ್ತಾರೆ ಎಂದರೆ ಇಷ್ಟು ದಿನಗಳ ಶ್ರಮ ವ್ಯರ್ಥ ಆದಂತೆ ಆಗುತ್ತದೆ. ಹಾಗಾಗಿ ಇನ್ನುಳಿದ ಸದಸ್ಯರು ಸುರೇಶ್​ಗೆ ಬುದ್ಧಿ ಹೇಳಲು ಪ್ರಯತ್ನಿಸಿದರು. ರಜತ್​ಗೆ ಆಟದ ಮೂಲಕವೇ ಉತ್ತರ ನೀಡಿ, ಮತ್ತೆ ಉತ್ತಮ ಎನಿಸಿಕೊಳ್ಳಿ ಎಂದು ತ್ರಿವಿಕ್ರಮ್ ಹೇಳಿದರು. ಎಲ್ಲರೂ ಸಮಾಧಾನ ಮಾಡಿದ್ದರಿಂದ ಸುರೇಶ್​ ಅವರು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ನೋಡುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು