ಮಂಜು, ಗೌತಮಿ ಜೊತೆ ಜಗಳ ಮಾಡಿ ನಂತರ ರಾಜಿ ಮಾಡಿಕೊಂಡ ಶೋಭಾ ಶೆಟ್ಟಿ
ತಂಡದ ಕ್ಯಾಪ್ಟನ್ ಆಗೋಕೆ ಶೋಭಾ ಅವರು ಅನರ್ಹರು ಎಂದು ಗೌತಮಿ ಹಾಗೂ ಮಂಜು ಹೇಳಿದ್ದರು. ಆ ಬಳಿಕ ಶೋಭಾ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, ಟಾಸ್ಕ್ ವಿಚಾರ ಬಂದಾಗ ಶೋಭಾ ಅವರು ಮಂಜು ಹಾಗೂ ಗೌತಮಿ ಬಳಿ ಬಂದು ರಾಜಿ ಮಾಡಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರು ಯಾರ ಜೊತೆ ಜಗಳ ಆಡುತ್ತಾರೆ, ಯಾವಾಗ ರಾಜಿ ಮಾಡಿಕೊಳ್ಳುತ್ತಾರೆ ಎಂದು ಊಹಿಸುವುದು ಕಷ್ಟ. ಮೊದಲು ಜಗಳ ಮಾಡಿಕೊಂಡವರು ನಂತರ ಒಂದಾದ ಉದಾಹರಣೆ ಇದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲೂ ಅದೇ ಆಗುತ್ತಿದೆ. ಶೋಭಾ ಶೆಟ್ಟಿ ಅವರು ಆರಂಭದಲ್ಲಿ ಮಂಜು ಹಾಗೂ ಗೌತಮಿ ಜೊತೆ ಜಗಳ ಮಾಡಿಕೊಂಡರು. ನಂತರ ಎಲ್ಲರೂ ಟಾಸ್ಕ್ಗಾಗಿ ರಾಜಿ ಮಾಡಿಕೊಂಡರು.
ತಂಡದ ಕ್ಯಾಪ್ಟನ್ ಆಗೋಕೆ ಶೋಭಾ ಅವರು ಅನರ್ಹರು ಎಂದು ಗೌತಮಿ ಹಾಗೂ ಮಂಜು ಹೇಳಿದ್ದರು. ಆ ಬಳಿಕ ಶೋಭಾ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, ಟಾಸ್ಕ್ ವಿಚಾರ ಬಂದಾಗ ಶೋಭಾ ಅವರು ಮಂಜು ಹಾಗೂ ಗೌತಮಿ ಬಳಿ ಬಂದು ರಾಜಿ ಮಾಡಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಣ ಓಡಾಡಲಿದೆ. ತಂಡದ ನಾಯಕನಿಗೆ 11 ಸಾವಿರ ರೂಪಾಯಿನ ಬಿಗ್ ಬಾಸ್ ಕಡೆಯಿಂದ ಕೊಡಲಾಗುತ್ತದೆ. ಅವರು ಇದರಲ್ಲಿ ಆರು ಆಟಗಾರರನ್ನು ಖರೀದಿ ಮಾಡಬೇಕು. ಯಾರಿಗೆ ಎಷ್ಟು ಹಣ ಎಂಬುದನ್ನು ನಾಯಕನೇ ನಿರ್ಧರಿಸಬೇಕು. ಅಷ್ಟಕ್ಕೆ ಮಾರಾಟ ಆಗಲು ಸ್ಪರ್ಧಿಗಳು ಒಪ್ಪಿದರೆ ಡೀಲ್ ಕುದುರಿದಂತೆ.
ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಾರೆ. ಸಂಚು ರೂಪಿಸಲು ಅವರು ದಿ ಬೆಸ್ಟ್. ಈ ಕಾರಣದಿಂದಲೇ ಶೋಭಾ ಅವರು ಮಂಜು ಹಿಂದೆ ಬಿದ್ದಿದ್ದಾರೆ. ‘ಮಂಜು ಅವರೇ ಟಾಸ್ಕ್ ವಿಚಾರ ಬೇರೆಯದೇ ಲೆಕ್ಕ. ಉಳಿದ ವಿಚಾರಗಳನ್ನು ಪಕ್ಕಕ್ಕೆ ಇಡಲೇಬೇಕು. ಹೀಗಾಗಿ, ನೀವು ನನ್ನ ತಂಡಕ್ಕೆ ಬನ್ನಿ’ ಎಂದು ಕೋರಿದರು ಶೋಭಾ.
ಇದನ್ನೂ ಓದಿ: ಮೊದಲ ಆಟದಲ್ಲೇ ಭವ್ಯಾ ಎದುರು ಸೋತು ಅಳುತ್ತಾ ಕುಳಿತ ಶೋಭಾ ಶೆಟ್ಟಿ
ಕೊನೆಗೂ ಮಂಜು ಹಾಗೂ ಗೌತಮಿ ಅವರು ಶೋಭಾ ತಂಡಕ್ಕೆ ಸೇರಿದರು. ಈ ಮೂಲಕ ಹಳೆಯದನ್ನು ಮರೆತು ಇವರು ಒಂದಾಗಿದ್ದಾರೆ. ಮೊದಲ ಆಟದಲ್ಲಿ ಶೋಭಾ ಶೆಟ್ಟಿ ತಂಡ ಭವ್ಯಾ ಗೌಡ ಟೀಂ ಎದುರು ಸೋತು ಹೋಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




