ಬಿಗ್ ಬಾಸ್ ಕನ್ನಡ: ವಿನ್ ಆದ ಸ್ಪರ್ಧಿಗೆ ಸಂಪೂರ್ಣವಾಗಿ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್ ಆಗುತ್ತೆ?

| Updated By: ರಾಜೇಶ್ ದುಗ್ಗುಮನೆ

Updated on: Jan 29, 2024 | 10:30 AM

Bigg Boss Winner Remuneration: ಮೂರನೇ ರನ್ನರ್ ಅಪ್​ ವಿನಯ್​ಗೆ ಐದು ಲಕ್ಷ ರೂ., ಎರಡನೇ ರನ್ನರ್​ಅಪ್​ ಸಂಗೀತಾ ಶೃಂಗೇರಿ ಏಳು ಲಕ್ಷ ರೂ., ಮೊದಲ ರನ್ನರ್ ಅಪ್ ಡ್ರೋನ್ ಪ್ರತಾಪ್​ಗೆ 10 ಲಕ್ಷ ರೂ. ಸಿಕ್ಕಿದೆ. ಗೆದ್ದ ಸ್ಪರ್ಧಿ ಕಾರ್ತಿಕ್ ಮಹೇಶ್​ಗೆ ಸಿಕ್ಕಿದ್ದು 50 ಲಕ್ಷ ರೂಪಾಯಿ.

ಬಿಗ್ ಬಾಸ್ ಕನ್ನಡ: ವಿನ್ ಆದ ಸ್ಪರ್ಧಿಗೆ ಸಂಪೂರ್ಣವಾಗಿ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್ ಆಗುತ್ತೆ?
ಕಾರ್ತಿಕ್
Follow us on

ಕಿಚ್ಚ ಸುದೀಪ್ (Kichcha Sudeep) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಗ್ರ್ಯಾಂಡ್ ಫಿನಾಲೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್ ಕಪ್ ಎತ್ತಿದ್ದಾರೆ. ಮಧ್ಯರಾತ್ರಿ ವೇಳೆಗೆ ಈ ಬಗ್ಗೆ ಅನೌನ್ಸ್ ಮಾಡಲಾಯಿತು. ಅವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ಬ್ರೆಜಾ ಕಾರು ಕೂಡ ಸಿಕ್ಕಿದೆ. ಬೌನ್ಸ್ ಎಲಿಕ್ಟ್ರಿಕ್ ಸ್ಕೂಟರ್ ಅವರಿಗೆ ಗಿಫ್ಟ್ ಆಗಿ ಬಂದಿದೆ. ಗೆದ್ದ ಸ್ಪರ್ಧಿಗಳಿಗೆ ಸಂಪೂರ್ಣವಾಗಿ 50 ಲಕ್ಷ ರೂಪಾಯಿ ಸಿಗುವುದಿಲ್ಲ. ಹಾಗಾದರೆ, ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್ ಟ್ಯಾಕ್ಸ್ ಕಟ್ ಆಗುತ್ತದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಈ ಬಾರಿ ಬಿಗ್ ಬಾಸ್ ಒಂದು ಸರ್​ಪ್ರೈಸ್ ನೀಡಿದ್ದಾರೆ. ಫಿನಾಲೆಯಲ್ಲಿ ಐದು ಜನರ ಬದಲು ಆರು ಜನರನ್ನು ಇಡಲಾಗಿತ್ತು. ಟಾಪ್ ಆರೂ ಜನರಿಗೆ ಹಣ ಸಿಕ್ಕಿದೆ. ಐದನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ನಾಲ್ಕನೇ ರನ್ನರ್ ಅಪ್​​ ವರ್ತೂರು ಸಂತೋಷ್​ಗೂ ಎರಡು ಲಕ್ಷ ರೂಪಾಯಿ ಸಿಕ್ಕಿದೆ. ಮೂರನೇ ರನ್ನರ್ ಅಪ್​ ವಿನಯ್​ಗೆ ಐದು ಲಕ್ಷ ರೂಪಾಯಿ, ಎರಡನೇ ರನ್ನರ್​ಅಪ್​ ಸಂಗೀತಾ ಶೃಂಗೇರಿ ಏಳು ಲಕ್ಷ ರೂಪಾಯಿ, ಮೊದಲ ರನ್ನರ್ ಅಪ್ ಡ್ರೋನ್ ಪ್ರತಾಪ್​ಗೆ 10 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಗೆದ್ದ ಸ್ಪರ್ಧಿ ಕಾರ್ತಿಕ್ ಮಹೇಶ್​ಗೆ ಸಿಕ್ಕಿದ್ದು 50 ಲಕ್ಷ ರೂಪಾಯಿ.

ಕರ್ನಾಟಕದಲ್ಲಿ ನಗದು ಬಹುಮಾನ ಟ್ಯಾಕ್ಸ್ ಬರೋಬ್ಬರಿ ಶೇ. 31.2 ಪರ್ಸಂಟ್ ಇದೆ. ಅಂದರೆ, ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿಯಲ್ಲಿ 34.40 ಲಕ್ಷ ರೂಪಾಯಿ ಮಾತ್ರ ಹಣ ಸಿಗಲಿದೆ. ಉಳಿದ 14.60 ಲಕ್ಷ ರೂಪಾಯಿ ಸರ್ಕಾರಕ್ಕೆ ಸೇರಲಿದೆ. 10 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿರುವ ಅಮೌಂಟ್​ಗೆ ಮಾತ್ರ ಇದು ಅಪ್ಲೈ ಆಗಲಿದೆ.

ಇದನ್ನೂ ಓದಿ: ಸುದೀಪ್​ಗೆ ವಿಶೇಷ ಗಿಫ್ಟ್ ಕೊಟ್ಟ ಬಿಗ್ ಬಾಸ್; ಭಾವುಕರಾದ ಕಿಚ್ಚ

ಈ ಬಾರಿಯ ಬಿಗ್ ಬಾಸ್ ಸಖತ್ ಎಂಟರ್​ಟೇನಿಂಗ್ ಆಗಿತ್ತು. 18 ಸ್ಪರ್ಧಿಗಳು ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. 112 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಕಾರ್ತಿಕ್ ಮಹೇಶ್ ಗೆದ್ದು ಬೀಗಿದ್ದಾರೆ. ಅವರಿಗೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಬೌನ್ಸ್ ಸ್ಕೂಟರ್ ಕೂಡ ಸಿಕ್ಕಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಬಾರಿಯ ಬಿಗ್ ಬಾಸ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:05 am, Mon, 29 January 24