Vinay Gowda: ಕಪ್ ಎತ್ತದೆ ಹೊರ ಹೋದ ವಿನಯ್ ಗೌಡ ಬಗ್ಗೆ ಫ್ಯಾನ್ಸ್ ರಿಯಾಕ್ಟ್ ಮಾಡಿದ್ದು ಹೇಗೆ?
ವಿನಯ್ ಗೌಡ ಅವರು ಆರಂಭದಿಂದಲೂ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರು. ಸುದೀಪ್ ಪಕ್ಕ ನಿಲ್ಲುವ ಸ್ಪರ್ಧಿಗಳ ಪೈಕಿ ತಾವೂ ಒಬ್ಬರು ಎಂದು ವಿನಯ್ ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ವಿನಯ್ ಗೌಡ ಅವರು ಮೂರನೇ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟರು.
ವಿನಯ್ ಗೌಡ (Vinay Gowda) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಟಾಪ್ 3ನಲ್ಲೂ ಇರಲಿಲ್ಲ. ಅವರ ಫ್ಯಾನ್ಸ್ಗೆ ಇದನ್ನು ಒಪ್ಪಿಕೊಳ್ಳೋಕೆ ಕಷ್ಟ ಆಗಿದೆ. ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಕಾರ್ತಿಕ್ ಕಪ್ ಎತ್ತಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಬಗೆಬಗೆಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಅನೇಕರು ವಿನಯ್ ಅವರನ್ನು ಬೆಂಬಲಿಸಿದ್ದಾರೆ. ಇದರಿಂದ ಅವರಿಗೆ ನಿಜಕ್ಕೂ ಖುಷಿ ಆಗಿದೆ.
ವಿನಯ್ ಗೌಡ ಅವರು ಆರಂಭದಿಂದಲೂ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರು. ಸುದೀಪ್ ಪಕ್ಕ ನಿಲ್ಲುವ ಸ್ಪರ್ಧಿಗಳ ಪೈಕಿ ತಾವೂ ಒಬ್ಬರು ಎಂದು ವಿನಯ್ ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ವಿನಯ್ ಗೌಡ ಅವರು ಮೂರನೇ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟರು. ವಿನಯ್ ಅವರು ಕೋಪ ಮಾಡಿಕೊಳ್ಳದೆ ಇದನ್ನು ಸ್ವೀಕರಿಸಿದ್ದಾರೆ. ಅವರ ಅಭಿಮಾನಿಗಳು ಕೂಡ ಇದನ್ನು ಒಪ್ಪಿದ್ದಾರೆ.
ವಿನಯ್ ಮೂರನೇ ರನ್ನರ್ ಅಪ್ ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ಇದೇ ಪೋಸ್ಟರ್ನ ವಿನಯ್ ಗೌಡ ಅವರು ಕೂಡ ತಮ್ಮ ವಾಲ್ನಲ್ಲಿ ಹಂಚಿಕೊಂಡಿದ್ದಾರೆ. ‘ನೀವು ನಿಜವಾದ ವಿನ್ನರ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಕಿಂಗ್ ಯಾವಾಗಲೂ ಕಿಂಗ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ನೀವೇ ಚಾಂಪಿಯನ್. ನಿಮ್ಮದು ಅದ್ಭುತ’ ಆಟ ಎಂದು ಕೆಲವರು ಹೇಳಿದ್ದಾರೆ.
ವಿನಯ್ ಗೌಡ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 1.74 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಅವರ ಹೊಸ ಪೋಸ್ಟ್ಗೆ 26 ಸಾವಿರ ಲೈಕ್ಸ್ ಹಾಗೂ ಸಾವಿರಕ್ಕೂ ಅಧಿಕ ಕಮೆಂಟ್ಸ್ ಬಂದಿವೆ. ವಿನಯ್ ಗೌಡ ಅವರಿಗೆ ದಿನ ಕಳೆದಂತೆ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಸಿನಿಮಾಗಳಿಂದ ಆಫರ್ ಬರೋ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ವಿನಯ್ ಎಲಿಮಿನೇಷನ್ ಫೇರ್ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?
ವಿನಯ್ ಅವರು ಆಡಿದ ರೀತಿಯನ್ನು ಕಿಚ್ಚ ಸುದೀಪ್ ಅವರು ಕೂಡ ಮೆಚ್ಚಿಕೊಂಡಿದ್ದಾರೆ. ‘ನಿಮ್ಮ ಮೆಚ್ಚಿಕೊಂಡವರಲ್ಲಿ ನಾನು ಒಬ್ಬನು’ ಎಂದು ವಿನಯ್ ಬಗ್ಗೆ ಖುಷಿಯಿಂದ ಹೇಳಿಕೊಂಡರು ಕಿಚ್ಚ ಸುದೀಪ್. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ಮತ್ತೊಂದು ಸೀಸನ್ ಜೊತೆ ಬರೋಕೆ ಕಲರ್ಸ್ ಕನ್ನಡ ವಾಹಿನಿ ರೆಡಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ