AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್​’ ಟಿವಿ ಸೀಸನ್​ಗೆ ಹೊಸ ಟ್ವಿಸ್ಟ್; ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡ್ತಾರೆ

‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಬಗ್ಗೆ ಈ ಮೊದಲೇ ಪ್ರೋಮೋಗಳು ಹರಿದಾಡಿದ್ದವು. ಈಗ ಮೊದಲ ಪ್ರೋಮೋ ರಿಲೀಸ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ನಿರೂಪಕನಾಗಿ ಮರಳಿದ್ದಾರೆ.

‘ಬಿಗ್ ಬಾಸ್​’ ಟಿವಿ ಸೀಸನ್​ಗೆ ಹೊಸ ಟ್ವಿಸ್ಟ್; ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡ್ತಾರೆ
ಬಿಗ್ ಬಾಸ್
TV9 Web
| Edited By: |

Updated on: Sep 12, 2022 | 2:46 PM

Share

ಕೊವಿಡ್ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗಿದೆ. ಈ ಕಾರಣಕ್ಕೆ ಚಿತ್ರರಂಗ ಹಾಗೂ ಕಿರುತೆರೆಗೆ ಹೊಸ ಕಳೆ ಬಂದಿದೆ. ದೊಡ್ಡ ದೊಡ್ಡ ಬಜೆಟ್​ನ ಸಿನಿಮಾಗಳು ರಿಲೀಸ್ ಆಗಿ ಅಬ್ಬರಿಸುತ್ತಿವೆ. ಕಿರುತೆರೆಯ ರಿಯಾಲಿಟಿ ಶೋಗಳಿಗೆ ಅದ್ದೂರಿತನ ಮರಳಿದೆ. ಅಂತೆಯೇ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್​’ (Bigg Boss) ಬೇರೆಬೇರೆ ಭಾಷೆಗಳಲ್ಲಿ ಆರಂಭ ಆಗುತ್ತಿದೆ. ಕನ್ನಡದ ಟಿವಿ ಸೀಸನ್​ಗೆ ಕ್ಷಣಗಣನೆ ಆರಂಭ ಆಗಿದೆ. ‘ಹಿಂದಿ ಬಿಗ್ ಬಾಸ್​ 16’ನ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಲ್ಮಾನ್ ಖಾನ್ (Salman Khan) ಅವರು ಪ್ರತಿಬಾರಿಯಂತೆ ಈ ಬಾರಿ ಶೋ ನಡೆಸಿಕೊಡಲಿದ್ದಾರೆ. ಈ ಶೋಗೆ ದೊಡ್ಡ ಟ್ವಿಸ್ಟ್ ಕೂಡ ಇದೆ.

‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಬಗ್ಗೆ ಈ ಮೊದಲೇ ಪ್ರೋಮೋಗಳು ಹರಿದಾಡಿದ್ದವು. ಈಗ ಮೊದಲ ಪ್ರೋಮೋ ರಿಲೀಸ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ನಿರೂಪಕನಾಗಿ ಮರಳಿದ್ದಾರೆ. ‘ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡಲಿದ್ದಾರೆ’ ಎಂಬ ಲೈನ್ ಪ್ರೋಮೋದಲ್ಲಿ ಹೈಲೈಟ್ ಆಗಿದೆ.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಸುದೀಪ್
Image
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಸಲ್ಮಾನ್ ಖಾನ್ ಇರುವ ಪ್ರೋಮೋವನ್ನು ಕಲರ್ಸ್ ಟಿವಿ ಹಂಚಿಕೊಂಡಿದೆ. ‘15 ವರ್ಷಗಳಲ್ಲಿ ಎಲ್ಲರೂ ತಮ್ಮತಮ್ಮ ಆಟ ಆಡಿದ್ದಾರೆ. ಆದರೆ, ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇದು ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಬಾರಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ.  ಬಿಗ್ ಬಾಸ್ ಕೂಡ ಆಟ ಆಡುತ್ತಾರೆ ಎನ್ನುವ ಲೈನ್​​ನ ನಿಜವಾದ ಅರ್ಥ ತಿಳಿಯಲು ಬಿಗ್ ಬಾಸ್ ಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ಖ್ಯಾತ ನಿರ್ದೇಶಕ, ನಿರ್ಮಾಪಕ ಸಾವನ್ ಕುಮಾರ್ ನಿಧನ; ಕಂಬನಿ ಮಿಡಿದ ಸಲ್ಮಾನ್ ಖಾನ್

ಪ್ರತಿ ವರ್ಷ ಬಿಗ್ ಬಾಸ್ ಆರಂಭವಾದಾಗ ಮನೆಯ ಲುಕ್ ಬದಲಾಯಿಸಲಾಗುತ್ತದೆ. ಕಳೆದ ಬಾರಿ ಇಡೀ ಮನೆಗೆ ಕಾಡಿನ ಥೀಮ್ ನೀಡಲಾಗಿತ್ತು. ಈ ಬಾರಿ ಬಿಗ್​ ಬಾಸ್​ಗೆ ಯಾವ ರೀತಿಯ ಲುಕ್ ಕೊಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಅದ್ದೂರಿಯಾಗಿ ಇರಲಿದೆ ಎಂದು ವರದಿ ಆಗಿದೆ. ಮನೆಯ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಕೂಡ ಆಗಿವೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ