Honganasu: ಜಗತಿ ತನ್ನ ಪತ್ನಿ ಎಂದು ಎಲ್ಲರೆದುರು ಕೂಗಿ ಹೇಳಿದ ಮಹೇಂದ್ರ; ತಾಯಿ ವಿರುದ್ಧ ರಿಷಿ ಕೆಂಡಾಮಂಡಲ

Honganasu Serial Update: ‘ಜಗತಿ ಮೇಡಮ್ ನಿನ್ನ ತಾಯಿ ಅಂತ ಯಾಕೆ ಹೇಳಿಲ್ಲ? ನಿನ್ನ ಬಾಲ್ಯದ ಸ್ನೇಹಿತನಾಗಿ ಈ ವಿಚಾರ ನನ್ನಿಂದನೇ ಯಾಕೆ ಮುಚ್ಚಿಟ್ಟಿದೀಯಾ’ ಅಂತ ರಿಷಿಗೆ ಗೌತಮ್​ ಕೇಳಿದ.

Honganasu: ಜಗತಿ ತನ್ನ ಪತ್ನಿ ಎಂದು ಎಲ್ಲರೆದುರು ಕೂಗಿ ಹೇಳಿದ ಮಹೇಂದ್ರ; ತಾಯಿ ವಿರುದ್ಧ ರಿಷಿ ಕೆಂಡಾಮಂಡಲ
ಹೊಂಗನಸು ಸೀರಿಯಲ್
Updated By: ಮದನ್​ ಕುಮಾರ್​

Updated on: Oct 21, 2022 | 7:47 PM

ಕಾಲೇಜು ಕಾರ್ಯಕ್ರಮದಲ್ಲಿ ಪತ್ರಕರ್ತ ಜಗತಿಗೆ ಅವಮಾನ ಮಾಡಿದ. ಪತಿ, ಮಕ್ಕಳು ಮತ್ತು ಕುಟುಂಬದ ರಹಸ್ಯ ಕೆದಕಿದ. ಜಗತಿ ಕಣ್ಣೀರಿಡುತ್ತಾ ಕಾರ್ಯಕ್ರಮದಿಂದ ಹೊರನಡೆದಳು. ಎಲ್ಲರ ಮುಂದೆ ಜಗತಿಗೆ ಆದ ಅವಮಾನ ತಡೆಯಲಾಗದೆ ಮಹೇಂದ್ರ ಸತ್ಯ ಬಿಚ್ಚಿಟ್ಟ. ವೇದಿಕೆಯಿಂದ ಹೊರನಡೆದ ಜಗತಿಯನ್ನು ಕೈ ಹಿಡಿದು ಕರೆದುಕೊಂಡು ಬಂದ. ಪತ್ರಕರ್ತ ಕೇಳಿದ ಪ್ರತಿಯೊಂದು ಪ್ರಶ್ನೆಗೂ ಮಹೇಂದ್ರ ಉತ್ತರಿಸಿದ. ‘ಜಗತಿ ನನ್ನ ಹೆಂಡತಿ, ಆಕೆಗೂ ಕುಟುಂಬ ಇದೆ. ಹಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಆಕೆ ತಾಳಿಕಟ್ಟಿದ್ದೀನಿ’ ಎಂದು ಮಹೇಂದ್ರ ಹೇಳಿದ. ಅಷ್ಟೆಯಲ್ಲದೇ ತನಗೆ ಮತ್ತು ಜಗತಿಗೆ ಸಿಂಹದಂತ ಮಗನಿದ್ದಾನೆ ಅವನೇ ರಿಷಿ ಎಂದು ಎಲ್ಲರ ಮುಂದೆ ಬಾಯಿಬಿಟ್ಟ.

ಯಾವ ವಿಚಾರ ಗೊತ್ತಾಗಬಾರದು ಎಂದು ಇಷ್ಟು ವರ್ಷ ಸೈಲೆಂಟ್ ಆಗಿದ್ದನೋ ಈಗ ಎಲ್ಲಾ ರಹಸ್ಯ ಬಹಿರಂಗವಾಗಿದ್ದು ರಿಷಿಗೆ ಸಹಿಸಲು ಸಾಧ್ಯವಾಗಿಲ್ಲ. ಎಲ್ಲರ ಮುಂದೆ ಮಹೇಂದ್ರ ತನ್ನ ಪತ್ನಿ ಜಗತಿ ಬಗ್ಗೆ ಎಲ್ಲಾ ವಿಚಾರನೂ ವಿವರವಾಗಿ ಹೇಳಿದ. ಕೋಪ ತಡೆಯಲಾರದೆ ರಿಷಿ ವೇದಿಕೆಯಿಂದ ಹೊರಟು ಹೋದ.

ರಿಷಿಯನ್ನು ಹುಡುಕುತ್ತಾ ವಸುಧರಾ ಕೂಡ ಹೊರಟಳು. ಇತ್ತ ಗೌತಮ್ ಕೂಡ ರಿಷಿಯನ್ನು ಹುಡುಕತೊಡಗಿದ. ಎಷ್ಟು ಹುಡುಕಿದರೂ ರಿಷಿ ಇಬ್ಬರಿಗೂ ಕಾಣಿಸಲ್ಲ. ‘ರಿಷಿ ಸರ್ ತುಂಬಾ ಸೂಕ್ಷ್ಮ. ಎಲ್ಲಿದ್ದಾರೋ..’ ಎಂದು ವಸು ಗಾಬರಿಯಾದಳು. ‘ಎಲ್ಲಿದ್ದರೂ ಹುಡುಕೋಣ, ನಾನಿದ್ದೀನಿ’ ಎಂದು ಗೌತಮ್ ಧೈರ್ಯ ತುಂಬಿದ. ಆದರೆ ರಿಷಿ ಕಾಲೇಜು ಗ್ರೌಂಡ್‌ನಲ್ಲಿ ಕಾರನ್ನು ಜೋರಾಗಿ ಓಡಿಸುತ್ತಾ ಕೋಪ ತೋರಿಸುತ್ತಿದ್ದ. ಅಲ್ಲಿಗೆ ಎಂಟ್ರಿ ಕೊಟ್ಟ ವಸು ‘ಏನಿದು ಸರ್’ ಎಂದು ಕೇಳಿದಳು. ಮತ್ತಷ್ಟು ಕೋಪಗೊಂಡ ರಿಷಿ, ಜಗತಿ ವಿರುದ್ಧ ಕೂಗಾಡಿದ. ‘ಜಗತಿ ಅವಕಾಶ ವಾದಿ ಈ ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ಕಾರ್ಯಕ್ರಮವನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡರು’ ಎಂದು ರಿಷಿ ರೇಗುತ್ತಾ ಜಗತಿ ವಿರುದ್ಧ ಆರೋಪ ಮಾಡಿದ.

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ರಿಷಿಯನ್ನು ಹುಡುಕುತ್ತಾ ಗೌತಮ್ ಕೂಡ ಎಂಟ್ರಿ ಕೊಟ್ಟ. ಬಂದವನೇ ‘ಇಲ್ಲಿ ಏನೋ ಮಾಡುತ್ತಿದ್ದೀಯಾ, ವಸು ನೀನಾದರೂ ಹೇಳಬಾರದ’ ಎಂದ. ‘ಜಗತಿ ಮೇಡಮ್ ನಿನ್ನ ತಾಯಿ ಅಂತ ಯಾಕೆ ಹೇಳಿಲ್ಲ? ನಿನ್ನ ಬಾಲ್ಯದ ಸ್ನೇಹಿತನಾಗಿ ಈ ವಿಚಾರ ನನ್ನಿಂದನೇ ಯಾಕೆ ಮುಚ್ಚಿಟ್ಟಿದೀಯಾ’ ಅಂತ ರಿಷಿನ ಕೇಳಿದ. ಮೊದಲೇ ಕೋಪದಲ್ಲಿ ಉರಿಯುತ್ತಿದ್ದ ರಿಷಿಗೆ ಗೌತಮ್ ಮಾತು ತುಪ್ಪ ಸುರಿದಂತೆ ಆಯ್ತು. ಗೌತಮ್ ಮೇಲೆ ರೇಗಾಡಿದ. ಜಗತಿ ತನ್ನ ತಾಯಿ ಅಲ್ಲ ಅಂತ ಕೂಗಾಡಿದ. ರಿಷಿಯನ್ನು ಸಮಾಧಾನ ಮಾಡಲು, ಜಗತಿ ಮೇಡಮ್ ತಪ್ಪೇನಿಲ್ಲ ಎಂದು ಮನವರಿಕೆ ಮಾಡಿಕೊಡಲು ವಸು ಮತ್ತು ಗೌತಮ್‌ ಇಬ್ಬರಿಗೂ ಸಾಧ್ಯವಾಗಿಲ್ಲ.

ಇತ್ತ ಜೋರಾಗಿ ಅಳುತ್ತಿದ್ದ ಜಗತಿಯನ್ನು ಮಹೇಂದ್ರ ಸಮಾಧಾನ ಮಾಡಿದ. ಇದರಲ್ಲಿ ಯಾವುದೇ ತಪ್ಪಿಲ್ಲ, ಅವನು ಏನೇನೋ ಪ್ರಶ್ನೆ ಕೇಳುತ್ತಿದ್ರೆ ನಾನು ಸುಮ್ಮನೆ ಇರಲು ಸಾಧ್ಯವಿಲ್ಲ ನಾನು ಮಾಡಿದ್ದು ಸರಿ ಇದೆ ಎಂದು ಪತ್ನಿಗೆ ಹೇಳಿದ. ಆದರೆ ಜಗತಿ, ರಿಷಿ ಇದನ್ನು ಒಪ್ಪಲ್ಲ ಎಂದಳು. ನೀನು ಬಂದಮೇಲೆ ರಿಷಿ ಬಂದಿದ್ದು, ರಿಷಿ ಇಲ್ಲದೆ ನೀನು ಇರಬಹುದು, ಆದರೆ ನೀನಿಲ್ಲದೆ ರಿಷಿ ಇಲ್ಲ, ಯಾರು ಏನೇ ಹೇಳಿದರು ನಾನು ಮಾಡಿದ್ದು ಸರಿ ಎಂದು ಮಹೇಂದ್ರ ವಾದಿಸಿದ. ಜಗತಿ ಮಹೇಂದ್ರನನ್ನು ತಬ್ಬಿಕೊಂಡು ಜೋರಾಗಿ ಅತ್ತಳು. ರಿಷಿಯ ಕೋಪ ಇನ್ನು ತಣ್ಣಗಾಗಿಲ್ಲ. ತಂದೆಗಾಗಿ ರಿಷಿ ಜಗತಿ ಮೇಡ್‌ನನ್ನು ತಾಯಿ ಎಂದು ಸ್ವೀಕರಿಸುತ್ತಾನಾ ಅಥವಾ ತಂದೆಯ ವಿರುದ್ಧವೂ ಕೋಪ ಮಾಡಿಕೊಳ್ಳುತ್ತಾನಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.