ಆಸ್ಪತ್ರೆಗೆ ಯಾರು ದಾಖಲಾಗಿದ್ದಾರೆ ಎಂದು ಗೊತ್ತಿಲ್ಲದೆ ರಿಷಿ ತನ್ನ ಸ್ನೇಹಿತ ಗೌತಮ್ ಜೊತೆ ಆಸ್ಪತ್ರೆಗೆ ಎಂಟ್ರಿ ಕೊಟ್ಟ. ಆಸ್ಪತ್ರೆಯೊಳಗೆ ಬರುತ್ತಿದ್ದಂತೆ ವಸೂಧರ ಮತ್ತು ಜಗತಿ ಇಬ್ಬರು ಜೋರಾಗಿ ಅಳುತ್ತಿದ್ದರು. ಗಾಬರಿಯಾದ ರಿಷಿ ಯಾರಿಗೆ ಏನಾಯಿತು ಎಂದು ಕೇಳಿದ. ವಸೂಧರ, ರಿಷಿ ಬಳಿ ಮಹೇಂದ್ರಗೆ ಹೃದಯಾಘಾತ (Heart Attack) ಆಗಿದೆ ಎನ್ನುವ ವಿಚಾರವನ್ನು ವಿವರಿಸಿದಳು. ವಿಷಯ ತಿಳಿದು ಶಾಕ್ ಆದ ರಿಷಿ ತಂದೆಗೆ ಏನಾಯಿತು ಎಂದು ನೋಡಲು ಓಡಿದ. ತನ್ನ ತಂದೆಯೇ ಆಸ್ಪತ್ರೆಗೆ ದಾಖಲಾಗಿದ್ದು ಎನ್ನುವ ಸತ್ಯ ಅರಗಿಸಿಕೊಳ್ಳಲಾಗದೆ ರಿಷಿ ಅಪ್ಪ ಎಂದು ಅಳತೊಡಗಿದ. ರಿಷಿ ನೋಡಿ ಜಗತಿ ಮತ್ತು ವಸೂಧರ ಇಬ್ಬರೂ ಗಾಬರಿಯಾದರು.
ಸ್ನೇಹಿತ ಗೌತಮ್ ಅಂಕಲ್‌ಗೆ ಏನು ಆಗಲ್ಲ ಎಂದು ರಿಷಿಯನ್ನು ಸಮಾಧಾನ ಪಡಿಸಿದ.ಆದರೆ ರಿಷಿ, ಈ ಜಗತ್ತಿನಲ್ಲಿ ನನಗೆ ಅಪ್ಪನೆ ಎಲ್ಲಾ, ನನಗೆ ಅಂತ ಅವರು ಮಾತ್ರ ಇರೋದು ಎಂದು ಮತ್ತೆ ಭಾವುಕನಾದ. ಬಳಿಕ ಒಬ್ಬನೆ ಕುಳಿತಿದ್ದ ರಿಷಿಗೆ ವಸೂಧರ ಪಕ್ಕದಲ್ಲೇ ಕುಳಿತು ಧೈರ್ಯ ತುಂಬುವ ಪ್ರಯತ್ನ ಮಾಡಿದಳು. ಆದರೆ ರಿಷಿ ಏನನ್ನೂ ಮಾತನಾಡದೇ ಸುಮ್ಮನೆ ಕುಳಿತಿದ್ದ. ಬಳಿಕ ರಿಷಿ ವಸೂಧರ ಬಳಿ ತನಗೆ ಯಾಕೆ ಜಗತಿ ಅಥವಾ ನೀನು ಫೋನ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ. ಎಷ್ಟು ಸರಿ ಫೋನ್ ಮಾಡಿದ್ರು ನೀವು ರಿಸೀವ್ ಮಾಡಿಲ್ಲ ಅಂತ ವಸೂಧರ ಹೇಳಿದಳು. ನಂತರ ರಿಷಿ ವಸೂಧರ ಕೈ ಹಿಡಿದು ಅಪ್ಪ ಬೇಗ ಗುಣಮುಖರಾಗಲಿ ಎಂದು ಬೇಡಿಕೊ ಅಂತ ಕೇಳಿಕೊಂಡ.
ಅಷ್ಟೊತ್ತಿಗಾಗಲೇ ಮಹೇಂದ್ರಗೆ ಎಚ್ಚರಿಕೆಯಾಗಿತ್ತು. ರಿಷಿ ಮತ್ತು ಜಗತಿ ಇಬ್ಬರೂ ಅಳುತ್ತಲೇ ಮಹೇಂದ್ರನನ್ನು ಮಾತನಾಡಿಸಿದರು. ತನಗೇನು ಆಗಿಲ್ಲ ಎಂದು ಮದೇಂದ್ರ ಹೇಳಿದರೂ ಸಹ ಇಬ್ಬರು ಜೋರಾಗಿ ಅಳಲು ಶುರುಮಾಡಿದರು. ಬಳಿಕ ನರ್ಸ್ ಬಂದು ಇಲ್ಲಿ ಗಲಾಟೆ ಮಾಡಬಾರದು ಎಂದು ಇಬ್ಬರಿಗೂ ಹೊರ ನಡೆಯುವಂತೆ ಹೇಳಿ ಕಳುಹಿಸಿದಳು.
ಬಳಿಕ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಲು ರಿಷಿ ವೈದ್ಯರ ಬಳಿ ಹೋದ. ಜಗತಿನೂ ಅಲ್ಲೇ ಕುಳಿತಿದ್ದಳು. ಮಹೇಂದ್ರ ತುಂಬಾ ಒತ್ತಡಕ್ಕೆ ಒಳಗಾದ ಹಾಗೆ ಕಾಣಿಸುತ್ತಾರೆ, ಯಾವುದೋ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಿದ್ದಾರೆ ಅನಿಸುತ್ತೆ, ಅವರ ಮನಸ್ಸನ್ನು ಮೊದಲು ತಿಳಿದುಕೊಳ್ಳಬೇಕು ಅಂತ ವೈದ್ಯರು ಹೇಳಿದರು. ಇತ್ತ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಮಹೇಂದ್ರ, ವಸೂಧರ ಬಳಿ ನಿಮ್ಮ ಎಂಡಿ ಏನ್ ಹೇಳಿದ್ರು ಅಂತ ವಿಚಾರಿಸುತ್ತಿದ್ದ. ನನ್ನ ನೋವಿಗಿಂತ ರಿಷಿ ನನ್ನನ್ನು ನೋಡಿ ಅನುಭವಿಸುವ ನೋವು ನನಗೆ ನೋಡಕ್ಕೆ ಆಗ್ತಿಲ್ಲ ಎಂದು ವಸೂಧರ ಬಳಿ ಹೇಳಿದ.
ರಿಷಿಗೆ ತಾಯಿ ಜಗತಿ ಕಂಡರೆ ಆಗಲ್ಲ, ಆದರೆ ತಂದೆ ಮಹೇಂದ್ರಗೆ ಪತ್ನಿನು ಬೇಕು ಮಗನೂ ಬೇಕು. ಜಗತಿ ತನ್ನ ಮಗ ರಿಷಿಯನ್ನು ಸರ್ ಅಂತನೇ ಕರೆಯೋದು. ಆಸ್ಪತ್ರೆಯಲ್ಲೂ ಜಗತಿ ಮಗನ ಬಳಿ ಬಂದು ಮಹೇಂದ್ರ ಬಗ್ಗೆ ಮಾತನಾಡಬೇಕು ಸರ್ ಅಂತ ಕೇಳಿಕೊಂಡಳು. ಆದರೆ ರಿಷಿ ಜಗತಿ ಮಾತನಾಡುವ ಮೊದಲೆ ಈ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿ ಮತ್ತಷ್ಟು ನೋವಾಗುವಂತೆ ಮಾತನಾಡಿದ. ನೀವು ದೂರ ಆದಮೇಲೆ ಅಪ್ಪ ಚೆನ್ನಾಗಿಯೇ ಇದ್ದರು. ನೀವು ಮತ್ತೆ ವಾಪಾಸ್ ಬಂದಮೇಲೆಯೇ ಅಪ್ಪ ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿ ಜಗತಿಯನ್ನು ಮತ್ತಷ್ಟು ದೂರ ಇಡಲು ಪ್ರಯತ್ನ ಮಾಡಿದ. ಏನೋ ಮಾತನಾಡಬೇಕೆಂದು ಹೋಗಿದ್ದ ಜಗತಿಗೆ ರಿಷಿಯ ಮಾತು ಮತ್ತಷ್ಟು ಆಘಾತ ನೀಡಿತು. ಆದರೆ ವೈದ್ಯರು ಹೇಳಿದ ಕಾರಣಕ್ಕಾದರೂ ತಂದೆಗಾಗಿ ರಿಷಿ ತಾಯಿಯನ್ನು ಮನೆ ಸೇರಿಸಿಕೊಳ್ಳುತ್ತಾನಾ? ಮಹೇಂದ್ರ ಮತ್ತು ಜಗತಿ ಒಟ್ಟಿಗೆ ಇರುವಂತೆ ಆಗಿತ್ತಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.