‘ನಿಮಗೊಂದೇ ಕನ್ನಡದ ಬಗ್ಗೆ ಕಾಳಜಿ ಇರೋದಾ’; ಪಾಠ ಮಾಡಲು ಬಂದ ರೂಪೇಶ್ ರಾಜಣ್ಣಗೆ ಪ್ರಶ್ನೆ ಮಾಡಿದ ಮಯೂರಿ

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ಜೋರಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗುತ್ತಿದೆ. ಇದನ್ನು ನೋಡಿ ಮನೆ ಮಂದಿಯವರಿಗೂ ಬೇಸರ ಆಗಿದೆ.

‘ನಿಮಗೊಂದೇ ಕನ್ನಡದ ಬಗ್ಗೆ ಕಾಳಜಿ ಇರೋದಾ’; ಪಾಠ ಮಾಡಲು ಬಂದ ರೂಪೇಶ್ ರಾಜಣ್ಣಗೆ ಪ್ರಶ್ನೆ ಮಾಡಿದ ಮಯೂರಿ
ಮಯೂರಿ-ರೂಪೇಶ್
TV9kannada Web Team

| Edited By: Rajesh Duggumane

Sep 28, 2022 | 9:58 PM

ರೂಪೇಶ್ ರಾಜಣ್ಣ (Roopesh Rajanna) ಅವರು ಕನ್ನಡ ಪರ ಹೋರಾಟ ಮಾಡಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ನಂತರ ಕನ್ನಡ ಪರ ಹೋರಾಟಕ್ಕೆ ಇಳಿದರು. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಈಗ ಬಿಗ್ ಬಾಸ್ (Bigg Boss) ಮನೆಯಲ್ಲಿ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಎಲ್ಲರಿಗೂ ಬುದ್ಧಿವಾದ ಹೇಳಲು ಹೋಗಿ ಬೈಸಿಕೊಂಡಿದ್ದಾರೆ ರೂಪೇಶ್ ರಾಜಣ್ಣ.

‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ಜೋರಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಕಿತ್ತಾಟ ಆರಂಭ ಆಗುತ್ತಿದೆ. ಇದನ್ನು ನೋಡಿ ಮನೆ ಮಂದಿಯವರಿಗೂ ಬೇಸರ ಆಗಿದೆ. ‘ಮನೆಯಲ್ಲಿ ಅನೇಕರು ನೀರು ಪೋಲು ಮಾಡುತ್ತಿದ್ದಾರೆ. ಲೋಟ ತೊಳೆಯುವಾಗ ನೀರು ಬಿಟ್ಟೇ ಇರುತ್ತಾರೆ. ಆ ರೀತಿ ಮಾಡಬೇಡಿ. ನಾವು ನೀರು ಉಳಿಸಬೇಕಿದೆ’ ಎಂಬ ಮಾತನ್ನು ಹೇಳಿದರು ರೂಪೇಶ್ ರಾಜಣ್ಣ. ಈ ನಿಯಮವನ್ನು ಪಾಲಿಸುತ್ತಿರುವ ಕೆಲವರು ಈ ಬಗ್ಗೆ ಸಿಟ್ಟಾದರು.

ಇದನ್ನು ರೂಪೇಶ್ ರಾಜಣ್ಣ ಅವರು ಹೇಳಿದ್ದು ಪ್ರಶಾಂತ್ ಸಂಬರ್ಗಿ ಅವರಿಗೆ ಆಗಿತ್ತು. ಈ ವಿಚಾರಕ್ಕೆ ಪ್ರಶಾಂತ್ ಕೂಡ ರಾಂಗ್ ಆದರು. ‘ಇದನ್ನೆಲ್ಲ ಏಳನೇ ಕ್ಲಾಸ್​ ಮಕ್ಕಳಿಗೆ ಹೇಳಿ ಕೊಡ್ತಾರೆ’ ಎಂಬ ಮಾತನ್ನು ಪ್ರಶಾಂತ್ ಹೇಳಿದರು. ‘ಪ್ರಶಾಂತ್ ಅವರೇ ಒಂದು ವಿಚಾರವಾದರೂ ಒಪ್ಪಿಕೊಳ್ಳಿ’ ಎಂದು ರೂಪೇಶ್ ರಾಜಣ್ಣ ಹೇಳಿದರು. ಇಬ್ಬರ ಮಧ್ಯೆ ಕಿತ್ತಾಟ ಮುಂದುವರಿದೇ ಇತ್ತು.

ಇದನ್ನೂ ಓದಿ: ‘ಕನ್ನಡ ಹೋರಾಟದ ವಿಚಾರ ಬಂದ್ರೆ ಸಂಬರ್ಗಿ ಉರ್ಕೋತಾರೆ’; ಪ್ರಶಾಂತ್-ರೂಪೇಶ್ ರಾಜಣ್ಣ ಮಧ್ಯೆ ನಡೆಯಿತು ಘೋರ ಜಗಳ

ಇದನ್ನೂ ಓದಿ

ಇದೇ ವಿಚಾರದಲ್ಲಿ ಮಯೂರಿ ಅವರು ರೂಪೇಶ್ ರಾಜಣ್ಣ ಅವರ ಬಳಿ ಮಾತನಾಡಿದರು. ‘ನೀವು ಯಾರು ತಪ್ಪು ಮಾಡುತ್ತಾರೋ ಅವರಿಗೆ ಮಾತ್ರ ಹೋಗಿ ಹೇಳಿ. ಇಲ್ಲಿ ಯಾರೂ ಪಾಠ ಕೇಳೋಕೆ ಬಂದಿಲ್ಲ. ನಾನು ಇಂಗ್ಲಿಷ್ ಹಾಡು ಹೇಳುತ್ತಿದ್ದಾಗ ಬಿಗ್ ಬಾಸ್ ನಮಗೆ ಎಚ್ಚರಿಸಿದರು. ಆ ಬಳಿಕ ನೀವು ಬಂದು ಹೇಳಿದಿರಿ. ಬಿಗ್ ಬಾಸ್ ಹೇಳಿದಮೇಲೆ ನೀವೇಕೆ ಬಂದು ಹೇಳಬೇಕು? ನಿಮಗೆ ಮಾತ್ರ ಕನ್ನಡದ ಬಗ್ಗೆ ಕಾಳಜಿ ಇರೋದಾ? ನಮಗೆ ಇಲ್ಲವಾ? ನಾನು ಉತ್ತರ ಕರ್ನಾಟಕ ಕನ್ನಡ ಮಾತನಾಡುತ್ತೀನಿ, ಹವ್ಯಕ ಕನ್ನಡ ಮಾತನಾಡುತ್ತೀನಿ. ಹೀಗೆ ಅನೇಕ ಮಾದರಿಯ ಕನ್ನಡ ನನಗೆ ಬರುತ್ತದೆ. ನಾನು ಕನ್ನಡದ ಮೇಲಿನ ಪ್ರೀತಿಯನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತ ಇರಬಹುದು ಅಷ್ಟೇ’ ಎಂದಿದ್ದಾರೆ ಮಯೂರಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada