ಸೌಂದರ್ಯಾ ಕಾಲು ಹಿಡಿದುಕೊಂಡ ಯಶಸ್; ಅಸಹ್ಯ ಎಂದ ಜಗದೀಶ್, ಪ್ರಶಾಂತ್

ಯಶಸ್ ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಈ ಮೊದಲು ಯಶಸ್ ಅವರನ್ನು ಮಂಜ ಟೀಕಿಸಿದ್ದರು. ಈಗ ಜಗದೀಶ್ ಹಾಗೂ ಪ್ರಶಾಂತ್ ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಯಶಸ್ ಮತ್ತು ಸೌಂದರ್ಯಾ ಶೆಟ್ಟಿ ನಡುವಿನ ಆಪ್ತತೆಯನ್ನು ಟೀಕಿಸಿದ್ದಾರೆ.

ಸೌಂದರ್ಯಾ ಕಾಲು ಹಿಡಿದುಕೊಂಡ ಯಶಸ್; ಅಸಹ್ಯ ಎಂದ ಜಗದೀಶ್, ಪ್ರಶಾಂತ್
Yashas, Jagadish
Image Credit source: Colors Kannada

Updated on: Oct 13, 2026 | 10:41 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಯಶಸ್ ಅವರು ಕೆಲವು ಸ್ಪರ್ಧಿಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಸೌಂದರ್ಯಾ ಶೆಟ್ಟಿ ಹಾಗೂ ಆಸಿಯಾ ಜೊತೆ ಯಶಸ್ ಅವರು ಹೆಚ್ಚು ಬೆರೆತಿದ್ದಾರೆ. ಆದರೆ ಅವರ ನಂಟಿನ ಬಗ್ಗೆ ಕೆಲವು ಸ್ಪರ್ಧಿಗಳಿಗೆ ಅಸಮಾಧಾನ ಇದೆ. ಈ ಮೊದಲು ಕೆಲವರು ಆ ಬಗ್ಗೆ ಮಾತನಾಡಿದ್ದರು. ಈಗ ಜಗದೀಶ್ ಮತ್ತು ಪ್ರಶಾಂತ್ ಕೂಡ ಯಶಸ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.

ಅಕ್ಟೋಬರ್ 13ರ ಸಂಚಿಕೆಯಲ್ಲಿ ಒಂದು ಘಟನೆ ನಡೆಯಿತು. ಕಾವ್ಯಾ, ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಅವರು ಕುಳಿತು ಮಾತನಾಡುತ್ತಿದ್ದರು. ತಮ್ಮ ಕಾಲು ಇಟ್ಟುಕೊಳ್ಳಲು ಜಾಗ ಇಲ್ಲ ಎಂದು ಸೌಂದರ್ಯಾ ಅವರು ಹೇಳಿದರು. ಆಗ ಅವರ ಕಾಲನ್ನು ಯಶಸ್ ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡರು. ಅದನ್ನು ಕಂಡು ಜಗದೀಶ್ ಹಾಗೂ ಪ್ರಶಾಂತ್ ಮಾತನಾಡಿಕೊಂಡರು.

‘ಅವಳ ಕಾಲು ಹಿಡಿದುಕೊಂಡಿದ್ದಾನೆ ನೋಡು. ಅಸಹ್ಯ ಎನಿಸುತ್ತದೆ. ಅಯ್ಯೋ ಕಥೆ’ ಎಂದು ಜಗದೀಶ್ ಅವರು ಗೊಣಗಿದರು. ‘ಏನಾಗಿದೆ ಯಶಸ್​ಗೆ? ಇದನ್ನೇ ಅವನು ಹೆಮ್ಮೆ ಎಂದುಕೊಂಡಿದ್ದಾನಾ? ಎರಡು ವಾರ ಆದಮೇಲೆ ಆಟ ತೋರಿಸುತ್ತಾನೆ ಅಂತಾನೆ ಅಷ್ಟೇ’ ಎಂದು ಪ್ರಶಾಂತ್ ಅವರು ಟೀಕೆ ಮಾಡಿದರು. ‘ಬರೀ ನೋಡು ಅಂತ ಹೇಳಿದೆ ಅಷ್ಟೇ. ಅವರ ಬಗ್ಗೆ ಮಾತನಾಡಬೇಡ. ಅಸಹ್ಯ ಆಗುತ್ತದೆ’ ಎಂದು ಜಗದೀಶ್ ಅವರು ಖಾರವಾಗಿ ನುಡಿದರು.

‘ನನಗೆ ಅನುಮಾನ ಆಗುತ್ತಿದೆ. ಆಸಿಯಾನ ಯಶಸ್ ಇಷ್ಟಪಡುತ್ತಿದ್ದಾನಾ ಅಥವಾ ಸೌಂದರ್ಯಾನ ಇಷ್ಟಪಡುತ್ತಿದ್ದಾನಾ’ ಎಂದು ಪ್ರಶಾಂತ್ ಅವರು ಅನುಮಾನ ವ್ಯಕ್ತಪಡಿಸಿದರು. ಆ ಬಗ್ಗೆ ಹೆಚ್ಚು ಮಾತನಾಡಲು ಜಗದೀಶ್ ಇಷ್ಟಪಡಲಿಲ್ಲ. ಒಟ್ಟಿನಲ್ಲಿ ಯಶಸ್ ಅವರು ಆಟದ ಮೇಲೆ ಹೆಚ್ಚು ಗಮನ ಹರಿಸುವುದರ ಬದಲು ಸೌಂದರ್ಯಾ ಜೊತೆ ಸಮಯ ಕಳೆಯುತ್ತಿರುವುದು ದೊಡ್ಮನೆಯಲ್ಲಿ ಚರ್ಚೆಯ ವಿಷಯ ಆಗುತ್ತಿದೆ.

ಇದನ್ನೂ ಓದಿ: ಈ ವಾರ ಇರಲ್ಲ ಎಲಿಮಿನೇಷನ್; ನಾಮಿನೇಷನ್ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ಈ ವಾರ ಎರಡು ತಂಡಗಳಲ್ಲಿ ಟಾಸ್ಕ್ ಆಡಬೇಕು ಎಂದು ನಿರ್ಧರಿಸಲಾಗಿದೆ. ಸ್ವತಂತ್ರವಾಗಿ ಆಡುವ ಸಾಮರ್ಥ್ಯ ಇರುವವರು ಯಾರು? ಇಲ್ಲದವರು ಯಾರು ಎಂದು ಕ್ಯಾಪ್ಟನ್ ಧನುಷ್ ತೀರ್ಮಾನಿಸಿದ್ದಾರೆ. ‘ಸೌಂದರ್ಯಾ ಅವರಿಗೆ ಒಬ್ಬಂಟಿಯಾಗಿ ಆಟ ಆಡುವ ಸಾಮರ್ಥ್ಯ ಇಲ್ಲ. ಯಶಸ್ ಅವರಿಗೆ ಹಲವು ಬಾರಿ ಅವಕಾಶ ಸಿಕ್ಕಿದೆ. ಆದರೆ ಅವರಿಗೆ ಯಾವಾಗಲೂ ಒಬ್ಬರ ಬೆಂಬಲ ಬೇಕಾಗುತ್ತದೆ. ಅವರಿಗೆ ಒಂಟಿಯಾಗಿ ಆಟ ಆಡುವ ಸಾಮರ್ಥ್ಯ ಇಲ್ಲ’ ಎಂದು ಧನುಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us