‘ನೀವು ನನ್ನ ಜವಾಬ್ದಾರಿ’; ಸಂಜುಗೆ ಹೊಸ ಆಶ್ವಾಸನೆ ನೀಡಿದ ಅನು ಸಿರಿಮನೆ

| Updated By: ರಾಜೇಶ್ ದುಗ್ಗುಮನೆ

Updated on: Nov 08, 2022 | 10:17 AM

ಸಂಜು ಹಾಗೂ ಅನು ಭೇಟಿ ಆಗಿದ್ದಾರೆ. ಈ ಭೇಟಿಯಿಂದ ಸಂಜುಗೆ ಸಾಷಕಷ್ಟು ಖುಷಿಯಾಗಿದೆ. ಅನು ಮೇಲೆ ಇರುವ ಭಾವನೆಗಳು ನಿಜ ಎಂದು ಸಂಜುಗೆ ಅನಿಸಿದೆ.

‘ನೀವು ನನ್ನ ಜವಾಬ್ದಾರಿ’; ಸಂಜುಗೆ ಹೊಸ ಆಶ್ವಾಸನೆ ನೀಡಿದ ಅನು ಸಿರಿಮನೆ
ಸಂಜು-ಮೇಘಾ
Follow us on

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30


ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನುಗೆ ಸಂಜು 24 ಗಂಟೆ ಚಾಲೆಂಜ್ ನೀಡಿದ್ದ. ನಾವಿಬ್ಬರೂ 24 ಗಂಟೆಯಲ್ಲಿ ಭೇಟಿ ಆಗುತ್ತೇವೆ ಎಂಬ ಮಾತನ್ನು ಹೇಳಿದ್ದ. ಇದಕ್ಕೆ ಅನು ಸಿಟ್ಟಾಗಿದ್ದಳು. ಆರ್ಯವರ್ಧನ್​ನ ಜತೆ ಬಾಂಧವ್ಯ ಬೆಳೆಯುವಾಗ ಆತನಿಗೆ ಅನು ಕೂಡ ಇದೇ ಮಾದರಿಯ ಚಾಲೆಂಜ್ ನೀಡಿದ್ದಳು. ಇದರಿಂದ ಅನುಗೆ ಹಳೆಯ ನೆನಪು ಕಾಡಿದೆ. ಅಷ್ಟೇ ಅಲ್ಲ, ಪ್ರತಿ ಹಂತದಲ್ಲಿ ಸಂಜುನಲ್ಲಿ ಆಕೆಗೆ ಆರ್ಯವರ್ಧನ್​ ಕಾಣುತ್ತಿದ್ದಾನೆ.

ಅನು-ಸಂಜು ಭೇಟಿ

ಅನುನ 24 ಗಂಟೆಯಲ್ಲಿ ಸಂಜು ಭೇಟಿ ಮಾಡುತ್ತೇನೆ ಎಂದು ಹೇಳಿದ್ದ. ಒಂದೊಮ್ಮೆ ಈ ಭೇಟಿ ನಡೆದರೆ ಇಬ್ಬರ ನನ್ನ ಭಾವನೆ ನಿಜವಾದದ್ದು ಎಂಬ ಮಾತನ್ನು ಸಂಜು ಹೇಳಿದ್ದ. ಇಬ್ಬರೂ ದೇವಸ್ಥಾನದಲ್ಲಿ ಅಚಾನಕ್ಕಾಗಿ ಭೇಟಿ ಆಗಿದ್ದಾರೆ. ಅನು ಮನೆಯಲ್ಲೇ ಇರುವ ನಿರ್ಧಾರಕ್ಕೆ ಬಂದಿದ್ದಳು. ಆದರೆ, ರಾಜ ನಂದಿನಿ ವಿಲಾಸದವರು ಆರ್ಯವರ್ಧನ್​ ಹೆಸರಲ್ಲಿ ಊಟ ಹಾಕುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕಾಗಿ ಅನು ದೇವಸ್ಥಾನಕ್ಕೆ ತೆರಳಿದ್ದಳು. ಅದೇ ರೀತಿ ಸಂಜು ಕೂಡ ದೇವಸ್ಥಾನಕ್ಕೆ ಬಂದಿದ್ದ. ಆಗ ಇಬ್ಬರ ಭೇಟಿ ಆಗಿದೆ.

ಸಂಜುನ ಜವಾಬ್ದಾರಿ ತೆಗೆದುಕೊಂಡ ಅನು

ಸಂಜು ಹಾಗೂ ಅನು ಭೇಟಿ ಆಗಿದ್ದಾರೆ. ಈ ಭೇಟಿಯಿಂದ ಸಂಜುಗೆ ಸಾಕಷ್ಟು ಖುಷಿಯಾಗಿದೆ. ಅನು ಮೇಲೆ ಇರುವ ಭಾವನೆಗಳು ನಿಜ ಎಂದು ಸಂಜುಗೆ ಅನಿಸಿದೆ. ‘ಅನು ಅವರೇ ನಾನು ಹೇಳಿದಂತೆ ನಮ್ಮಿಬ್ಬರ ಭೇಟಿ ಆಗಿದೆ. ನಾವಿಬ್ಬರು ಭೇಟಿ ಆಗಬೇಕು ಎಂಬುದು ನಮ್ಮ ಉದ್ದೇಶ ಆಗಿರಲಿಲ್ಲ. ನನ್ನ ಭಾವನೆ ನಿಜವಾಗುತ್ತದೆ ಎಂದಷ್ಟೇ ನನಗೆ ಹೇಳಬೇಕಿತ್ತು. ಅದು ಈಗ ನಿಜವಾಗಿದೆ’ ಎಂದು ಸಂಜು ಹೇಳಿದ್ದಾನೆ. ಇದಕ್ಕೆ ಅನುಗೆ ಸಿಟ್ಟು ಬಂದಿದೆ.

‘ನಾನು ಇಲ್ಲಿಗೆ ಬಂದಿರೋದು ನನ್ನ ಪತಿಗೋಸ್ಕರ ಮಾತ್ರ. ನಾನು ಮತ್ಯಾವ ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ’ ಎಂದು ಅನು ಖಡಕ್ ಆಗಿಯೇ ಹೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಸಂಜು, ‘ನನಗೆ ಹಳೆಯದು ಯಾವುದೂ ನೆನಪಿಲ್ಲ. ಆದರೆ, ನಿಮ್ಮನ್ನು ಕಂಡರೆ ಏನೋ ಖುಷಿ. ನೀವೇ ನನ್ನನ್ನು ಕಾಪಾಡಬೇಕು’ ಎಂದು ಸಂಜು ಅಂಗಲಾಚಿದ್ದಾನೆ. ಇದಕ್ಕೆ ಅನು ಓಕೆ ಎಂದಿದ್ದಾಳೆ.

‘ನಾನು ನಿಮ್ಮನ್ನು ಕಾಪಾಡುತ್ತೇನೆ ಎಂದು ಹೇಳಿದ್ದೀನಲ್ಲ ಕಾಪಾಡುತ್ತೇನೆ ಬಿಡಿ’ ಎಂದು ಭರವಸೆ ನೀಡಿದ್ದಾಳೆ. ಸಂಜು ಹಾಗೂ ಆಕೆಯ ಪತ್ನಿ ಆರಾಧಾನ ಮಧ್ಯೆ ಏನೋ ಜಗಳ ಆಗಿದೆ ಅನ್ನೋದು ಅನು ಅನುಮಾನ. ಹೀಗಾಗಿ, ಅವರಿಬ್ಬರನ್ನು ಒಂದು ಮಾಡಲು ಆಕೆ ನಿರ್ಧರಿಸಿದ್ದಾಳೆ. ಈ ಕಾರಣಕ್ಕೆ ‘ನಿಮ್ಮನ್ನು ಕಾಪಾಡುವ ಜವಾಬ್ದಾರಿ ನನ್ನದು’ ಎಂದು ಅನು ಹೇಳಿದ್ದಾಳೆ. ಬಹುಶಃ ಆಕೆ ಆರಾಧನಾಳನ್ನು ರಾಜ ನಂದಿನಿ ವಿಲಾಸಕ್ಕೆ ಕರೆತರಬಹುದು.

ಸಂಜು ಪತ್ನಿ ಆರಾಧನಾ ಅಲ್ಲ

ವಿಶ್ವ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್​ಗೆ ಹಾಕಲಾಗಿದೆ. ಪೊಲೀಸ್ ತನಿಖೆಗೆ ಸಹಕಾರಿ ಆಗಲಿ ಎನ್ನುವ ಕಾರಣಕ್ಕೆ ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ, ಆರ್ಯವರ್ಧನ್​ ವಿಶ್ವ (ಸಂಜು) ಆಗಿ ರಾಜ ನಂದಿನಿ ವಿಲಾಸಕ್ಕೆ ಕರೆತರಲಾಗಿದೆ. ಹೀಗಾಗಿ, ಆರಾಧನಾ ವಿಶ್ವನ ಪತ್ನಿ ಎಂದು ಅನು ಕರೆತರಬಹುದು. ಇದರಿಂದ ಆತನಿಗೆ ಮತ್ತಷ್ಟು ಸಮಸ್ಯೆ ಆಗುವುದಂತೂ ಖಚಿತ.

ಅನುಗೆ ಬರ್ತ್​ಡೇ ವಿಶ್

ಅನುಗೆ ಬರ್ತ್​ಡೇ ವಿಶ್ ಮಾಡಿದ್ದಾನೆ ಸಂಜು. ಆತನಿಗೆ ಇದೆಲ್ಲ ಹೇಗೆ ಗೊತ್ತಾಯಿತು ಎಂಬ ಅನುಮಾನ ಆಕೆಯನ್ನು ಕಾಡಿದೆ. ಈ ಮೆಸೇಜ್​ಗೆ ಅನು ಉತ್ತರಿಸಿದ್ದಾಳೆ. ಇದರಿಂದ ಆರ್ಯವರ್ಧನ್ ಖುಷಿಪಟ್ಟಿದ್ದಾನೆ.

ಶ್ರೀಲಕ್ಷ್ಮಿ ಎಚ್.

Published On - 10:13 am, Tue, 8 November 22