ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರಜನಿ ನೀಡಿದ ಪಾಯಸದಲ್ಲಿ ವಿಷ ಇತ್ತು. ಇದನ್ನು ಕುಡಿದ ಸಂಜು ಆಸ್ಪತ್ರೆ ಸೇರಿದ್ದಾನೆ. ಅನು ಸಿರಿಮನೆಗೋಸ್ಕರ ಈ ಪಾಯಸವನ್ನು ನೀಡಲಾಗಿತ್ತು. ಇದರಲ್ಲಿ ವಿಷ ಬೆರೆಸಿದ ವಿಚಾರ ಸಂಜುಗೆ ತಿಳಿದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಸಂಜು ತಾನೇ ಆ ಪಾಯಸ ಕುಡಿದಿದ್ದ. ನಂತರ ಆಸ್ಪತ್ರೆ ಸೇರಿದ್ದ. ಇದು ಆತ್ಮಹತ್ಯೆ ಪ್ರಯತ್ನ ಇರಬಹುದು ಎಂಬ ವೈದ್ಯರ ಹೇಳಿಕೆಯಿಂದ ಆತನ ಪತ್ನಿ ಆರಾಧನಾ ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾಳೆ. ಆತನನ್ನು ಹೇಗಾದರೂ ಮಾಡಿ ಅಮೆರಿಕಕ್ಕೆ ಕರೆದುಕೊಂಡು ಹೋಗಬೇಕು ಎನ್ನವ ಪ್ಲ್ಯಾನ್ನಲ್ಲಿ ಇದ್ದಾಳೆ.
ಕುಂಕುಮ ಹಚ್ಚಿದ ಅನು
ವಿಷ ದೇಹಕ್ಕೆ ಏರಿರುವುದರಿಂದ ಸಂಜು ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಆತನಿಗೆ ವೈದ್ಯರಿಂದ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ. ಅನುಗೆ ಈ ವಿಚಾರದಲ್ಲಿ ಪಶ್ಚಾತ್ತಾಪ ಕಾಡುತ್ತಿದೆ. ತನ್ನನ್ನು ಸೇವ್ ಮಾಡಲು ಬಂದ ಸಂಜುಗೆ ಈ ರೀತಿ ಆಯಿತಲ್ಲ ಎಂದು ಆಕೆ ಬೇಸರ ಮಾಡಿಕೊಂಡಿದ್ದಾಳೆ. ಆಸ್ಪತ್ರೆ ಹೊರ ಭಾಗದಲ್ಲಿ ಗಣಪತಿಯ ಮೂರ್ತಿಯನ್ನು ಇಡಲಾಗಿತ್ತು. ಗಣಪತಿ ಎದುರಲ್ಲಿ ಇಟ್ಟ ಕುಂಕುಮವನ್ನು ತಂದು ಸಂಜುಗೆ ಹಚ್ಚಲು ಯೋಚಿಸಿದ್ದಳು ಅನು. ಆದರೆ, ಇದಕ್ಕೆ ಆರಾಧನಾ ಅವಕಾಶ ನೀಡುವುದಿಲ್ಲ ಎಂದಳು. ಕೊನೆಗೆ ಅವಳು ಒಪ್ಪಿದಳು. ಆದರೆ, ಈ ಕುಂಕುಮವನ್ನು ಅನು ಬಳಿಯೇ ಹಚ್ಚುವಂತೆ ಹೇಳಿದಳು.
ರಜನಿಗೆ ಬೇಸರ
ರಜನಿಗೆ ತುಂಬಾನೇ ಆತಂಕ ಕಾಡಿದೆ. ಯಾಕಾದರೂ ವಿಷ ಹಾಕಿದೆನೋ ಎನ್ನುವ ಪಶ್ಚಾತ್ತಾಪ ಆಕೆಯನ್ನು ಕಾಡುತ್ತಿದೆ. ‘ಬೇರೆ ಯಾರೋ ವಿಷ ಕುಡಿದಿದ್ದಕ್ಕೆ ನನಗೆ ಇಷ್ಟೊಂದು ಭಯ ಆಗುತ್ತಿದೆ. ಇನ್ನು, ಅನು ದೇಹದಲ್ಲೇ ವಿಷ ಸೇರಿದ್ದರೆ ಏನಾಗುತ್ತಿತ್ತು? ಎಂತಹ ತಪ್ಪು ಮಾಡಿದೆ’ ಎಂದು ರಜನಿಗೆ ಅನಿಸಿದೆ. ರಜನಿ ನಡೆದುಕೊಂಡ ರೀತಿಗೆ ಮಗಳು ರಮ್ಯಾ ಬೇಸರ ಮಾಡಿಕೊಂಡಿದ್ದಾಳೆ. ಅಮ್ಮನನ್ನು ಕ್ಷಮಿಸಲೇಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ.
ಪ್ರಿಯದರ್ಶಿನಿಗೆ ಅನುಮಾನ
ಸಂಜುಗೆ ವಿಷ ಹಾಕಿರುವ ಬಗ್ಗೆ ಪ್ರಿಯದರ್ಶಿನಿಗೆ ಅನುಮಾನ ಮೂಡಿದೆ. ಆರ್ಯವರ್ಧನ್ನೇ ಸಂಜು ಎಂಬ ವಿಚಾರವನ್ನು ಝೇಂಡೆ ಎದುರು ಪ್ರಿಯದರ್ಶಿನಿ ರಿವೀಲ್ ಮಾಡಿದ್ದಳು. ಆಗ ಝೇಂಡೆ ಇಲ್ಲ ಸಲ್ಲದ ವಿಚಾರ ಹೇಳಿದ್ದ. ‘ಆರ್ಯನಿಗೆ ಅನುಳಿಂದ ತೊಂದರೆ ಇದೆ. ಆಕೆ ಈತನನ್ನು ಕೊಲ್ಲಲು ಪ್ರಯತ್ನಿಸಿದ್ದಳು’ ಎಂದು ಸುಳ್ಳು ಹೇಳಿದ್ದ. ಇದನ್ನು ನಂಬಿದ್ದಾಳೆ ಪ್ರಿಯದರ್ಶಿನಿ. ಅವಳ ಪ್ರಕಾರ, ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಅನುಗೆ ತಿಳಿದಿದೆ ಹಾಗೂ ಅವಳೇ ಕೊಲ್ಲಲು ಪ್ರಯತ್ನಿಸಿದ್ದಾಳೆ. ಈ ಬಗ್ಗೆ ಪ್ರಿಯದರ್ಶಿನಿಗೆ ಆತಂಕ ಕಾಡಿದೆ.
ಝೇಂಡೆ-ಅನು ಮುಖಾಮುಖಿ
ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಝೇಂಡೆಗೆ ತಿಳಿದಿದೆ. ಈಗ ಸಂಜು ದೇಹಕ್ಕೆ ವಿಷ ಏರಿದೆ ಎಂಬ ವಿಚಾರ ತಿಳಿದು ಝೇಂಡೆಗೆ ಆತಂಕ ಶುರುವಾಗಿದೆ. ಜೀವದ ಗೆಳೆಯನನ್ನು ಉಳಿಸಬೇಕು ಎಂಬ ಕಾರಣಕ್ಕೆ ಆತ ಆಸ್ಪತ್ರೆಗೆ ಬಂದಿದ್ದಾನೆ. ಆಸ್ಪತ್ರೆಯಲ್ಲಿ ಝೇಂಡೆಗೆ ಅನು ಎದುರು ಸಿಕ್ಕಿದ್ದಾಳೆ.
ಝೇಂಡೆಗೆ ಅನು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾಳೆ. ನೀವು ಇಲ್ಲಿಗೆ ಏಕೆ ಬಂದಿದ್ದೀರಿ ಎಂಬಿತ್ಯಾದಿ ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ಝೇಂಡೆ ಸಿಟ್ಟಾಗಿದ್ದಾನೆ. ‘ನನ್ನನ್ನು ನಿಲ್ಲಿಸಿ ಪ್ರಶ್ನೆ ಮಾಡುವ ಹಕ್ಕು ಯಾವಳಿಗೂ ಇಲ್ಲ’ ಎಂದಿದ್ದಾನೆ. ಇದಕ್ಕೆ ಅನು ‘ನಿಮ್ಮನ್ನು ನೋಡಿದರೆ ಅಸಹ್ಯವಾಗುತ್ತದೆ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾಳೆ. ಇದರಿಂದ ಝೇಂಡೆ ಸಿಟ್ಟಾಗಿದ್ದಾನೆ. ‘ನಾನು ಯಾವಾಗಲೂ ಇಷ್ಟೇ ಸಾಫ್ಟ್ ಆಗಿ ಮಾತನಾಡಲ್ಲ’ ಎಂದು ಅನು ಎಚ್ಚರಿಸಿದ್ದಾಳೆ. ಅನು ನಡೆದುಕೊಂಡ ರೀತಿಗೆ ಝೇಂಡೆ ತುಂಬಾನೇ ಕೋಪಗೊಂಡಿದ್ದಾನೆ. ‘ನಿನ್ನ ಜತೆ ಇರುವವನು ನಿನ್ನ ಗಂಡ ಅನ್ನೋದು ನಿನಗೇ ಗೊತ್ತಿಲ್ಲ. ಅದೇ ಅಸ್ತ್ರವನ್ನು ಬಳಕೆ ಮಾಡಿಕೊಂಡು ನಿನ್ನನ್ನು ಆಟ ಆಡಿಸ್ತೀನಿ’ ಎಂದು ಝೇಂಡೆ ಶಪಥ ಮಾಡಿದ್ದಾನೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.