ಅನು ಸಿರಿಮನೆ ಕೈ ಸೇರಿತು ಆರ್ಯವರ್ಧನ್ ಮರಣಪತ್ರ; ಸಂಜುಗೆ ಹೆಚ್ಚಿತು ಸಂಕಷ್ಟ
ಸಂಜು ನಾನೇ ಆರ್ಯವರ್ಧನ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇದನ್ನು ಕೇಳಿದ ಮನೆ ಮಂದಿಗೆ ಅನುಮಾನ ಹೆಚ್ಚಿತ್ತು. ಕೆಲವರಿಗೆ ಇದು ನಿಜ ಎಂದು ಅನಿಸಿತ್ತು. ಹೀಗಿರುವಾಗಲೇ ಆರ್ಯವರ್ಧನ್ ಅವರ ಮರಣಪತ್ರ ಸಿಕ್ಕಿದೆ. ಇ
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ತಿಳಿದಿರುವ ವೈದ್ಯರಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಆ ವೈದ್ಯರನ್ನು ಮೊದಲು ಸಂಜು ಅಪಹರಣ ಮಾಡಿದ್ದ. ಅವರಿಂದ ನಿಜ ವಿಚಾರ ತಿಳಿದುಕೊಂಡಿದ್ದ. ಆ ಬಳಿಕ ವೈದ್ಯರನ್ನು ಝೇಂಡೆ ಅಪಹರಿಸಿದ್ದ. ಸತ್ಯ ಹೇಳಿದರೆ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಕೇಳಿ ವೈದ್ಯರಿಗೆ ಶಾಕ್ ಆಗಿದೆ. ಸತ್ಯ ಹೇಳಿದರೆ ತನ್ನ ಕುಟುಂಬ ನಾಶ ಆಗೋದು ಖಚಿತ ಎಂದು ವೈದ್ಯರಿಗೆ ಅರಿವಾಗಿದೆ. ಹೀಗಾಗಿ, ಹೆಚ್ಚು ಎಚ್ಚರಿಕೆಯಿಂದ ಇರಲು ಅವರು ನಿರ್ಧರಿಸಿದಂತಿದೆ.
ಸಿಕ್ತು ಆರ್ಯವರ್ಧನ್ ಡೆತ್ ಸರ್ಟಿಫಿಕೇಟ್
ಆರ್ಯವರ್ಧನ್ ಮೃತಪಟ್ಟ ವಿಚಾರದಲ್ಲಿ ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ಆರ್ಯವರ್ಧನ್ ಸತ್ತಿದ್ದಾನೆ ಎಂದು ಹೇಳಲು ಯಾವುದೇ ಸಾಕ್ಷ್ಯ ಇರಲಿಲ್ಲ. ಡೆತ್ ಸರ್ಟಿಫಿಕೇಟ್ ಕೊಡಲು ಆಸ್ಪತ್ರೆಯವರು ಹಿಂದೇಟು ಹಾಕಿದ್ದರು. ಈ ಕಾರಣಕ್ಕೆ ಅನುಗೆ ಅನುಮಾನ ಹೆಚ್ಚಿತ್ತು. ಈಗ ಝೇಂಡೆ ಅಪಹರಣ ಮಾಡಿದ್ದ ವೈದ್ಯರು ನಕಲಿ ಡೆತ್ಸರ್ಟಿಫಿಕೇಟ್ ಅನ್ನು ಕಳುಹಿಸಿದ್ದಾರೆ. ಇದನ್ನು ನೋಡಿ ರಾಜ ನಂದಿನಿ ವಿಲಾಸದವರಿಗೆ ಶಾಕ್ ಆಗಿದೆ.
ಇದನ್ನು ಓದಿ: Jothe Jotheyali Serial: ಸಂಜುನೇ ಆರ್ಯವರ್ಧನ್ ಎಂದು ಹೇಳಿದ್ದ ವೈದ್ಯರಿಗೆ ಝೇಂಡೆಯ ಬೆದರಿಕೆ
ಸಂಜು ನಾನೇ ಆರ್ಯವರ್ಧನ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇದನ್ನು ಕೇಳಿದ ಮನೆ ಮಂದಿಗೆ ಅನುಮಾನ ಹೆಚ್ಚಿತ್ತು. ಕೆಲವರಿಗೆ ಇದು ನಿಜ ಎಂದು ಅನಿಸಿತ್ತು. ಹೀಗಿರುವಾಗಲೇ ಆರ್ಯವರ್ಧನ್ ಅವರ ಮರಣಪತ್ರ ಸಿಕ್ಕಿದೆ. ಇದರಿಂದ ಆರ್ಯ ಬದುಕಿಲ್ಲ ಎಂಬ ವಿಚಾರ ಖಾತ್ರಿಯಾಗಿದೆ.
ಸಂಜುಗೆ ಸಂಕಷ್ಟ
ಆರ್ಯವರ್ಧನ್ ಸತ್ತಿದ್ದಾನೆ ಎಂಬ ಸರ್ಟಿಫಿಕೇಟ್ ನೋಡಿ ಸಂಜುಗೆ ಗೊಂದಲ ಹೆಚ್ಚಿದೆ. ಏನು ಮಾಡಬೇಕು ಎಂಬುದು ಆತನಿಗೆ ತಿಳಿಯುತ್ತಿಲ್ಲ. ವೈದ್ಯರು ನೀನೇ ಆರ್ಯವರ್ಧನ್ ಎಂದು ಹೇಳಿದ್ದರು. ಇದನ್ನು ಕೇಳಿ ಖುಷಿ ಹಾಗೂ ಶಾಕ್ ಎರಡೂ ಆತನಿಗೆ ಆಗಿತ್ತು. ಈಗ ಆರ್ಯವರ್ಧನ್ನ ಡೆತ್ ಸರ್ಟಿಫಿಕೇಟ್ ಬಂದಿದೆ. ಈ ಎಲ್ಲಾ ಕಾರಣದಿಂದ ಆತ ಗೊಂದಲಕ್ಕೆ ಸಿಲುಕಿದ್ದಾನೆ. ಮುಂದೇನು ಮಾಡಬೇಕು ಎಂಬುದೇ ಆತನಿಗೆ ತಿಳಿಯುತ್ತಿಲ್ಲ.
ಸಂಜು ಬಗ್ಗೆ ಕೆಟ್ಟ ಅಭಿಪ್ರಾಯ
ಸಂಜು ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ಝೇಂಡೆ ನೋಡಿಕೊಂಡಿದ್ದಾನೆ. ಶಾರದಾ ದೇವಿ ಬಳಿ ಬಂದ ಝೇಂಡೆ, ಸಂಜು ಬಗ್ಗೆ ಸುಳ್ಳು ಹೇಳಿದ್ದಾನೆ. ‘ಸಂಜು ನಮ್ಮ ಪ್ರಾಪರ್ಟಿಗಳ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಿದ್ದ. ಅನು ಎಲ್ಲಿರುತ್ತಾರೋ ಅಲ್ಲಿ ಸಂಜು ಇರುತ್ತಾನೆ. ಹೀಗೇಕೆ ಎನ್ನುವ ಪ್ರಶ್ನೆ ನನಗೆ ಅನೇಕ ಬಾರಿ ಕಾಡಿದೆ. ನಾನು ಇದು ಸಾಮಾನ್ಯ ಎಂದುಕೊಂಡಿದ್ದೆ. ಆದರೆ, ಇದರ ಹಿಂದೆ ಯಾವುದೋ ಉದ್ದೇಶ ಇದೆ ಎಂದು ನನಗೆ ಅನ್ನಿಸುತ್ತಿದೆ. ಈ ಕಾರಣಕ್ಕೆ ನಾನು ಈ ವಿಚಾರವನ್ನು ಹೇಳುತ್ತಿದ್ದೀನಿ’ ಎಂದು ಝೇಂಡೆ ಹೇಳಿದ್ದಾನೆ.
ಸಹಿ ಹಾಕಿಸಿಕೊಂಡ ಝೇಂಡೆ
ಪ್ರಾಪರ್ಟಿಯನ್ನು ಪಡೆದುಕೊಳ್ಳಲು ಝೇಂಡೆ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕಾಗಿ ಆತ ಒಂದಷ್ಟು ಬಾಂಡ್ ಪೇಪರ್ಗಳ ಮೇಲೆ ಶಾರದಾ ದೇವಿ ಬಳಿ ಸಹಿ ಮಾಡಿಸಿಕೊಂಡಿದ್ದಾನೆ. ಇದರ ಹಿಂದೆ ಮೀರಾ ಕೈವಾಡ ಇರಬಹುದು ಎಂದು ಅನುಮಾನ ಬರುವಂತೆ ಮಾಡುತ್ತಿದ್ದಾನೆ ಝೇಂಡೆ. ಮತ್ತೊಂದು ಕಡೆ ಸಂಜುನ ಬಳಿ ಬಂದು ನೀನೆ ಆರ್ಯವರ್ಧನ್ ಎಂದು ಝೇಂಡೆ ಹೇಳಿದ್ದಾನೆ. ‘ನೀನು ಆರ್ಯ ಎಂದು ಗೊತ್ತಾಗೇ ನಾನು ನಿನ್ನ ಬಳಿ ಬಂದೆ. ಆದರೆ, ಯಾರೂ ನಿನ್ನ ಬಳಿ ಬರೋಕೆ ಬಿಡಲಿಲ್ಲ. ನೀನು ಆರ್ಯ ಎಂದು ನಾನು ಯಾವಾಗೋ ಒಪ್ಪಿಕೊಂಡಾಗಿದೆ’ ಎಂದಿದ್ದಾನೆ ಝೇಂಡೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ