ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜುಗೆ ಟ್ರೀಟ್ಮೆಂಟ್ ಮಾಡುತ್ತಿರುವ ವೈದ್ಯರನ್ನು ಕಿಡ್ನ್ಯಾಪ್ ಮಾಡಲಾಗಿದೆ. ಸಂಜುನೇ ಈ ಕೆಲಸ ಮಾಡಿದ್ದ. ವೈದ್ಯರಿಗೆ ಚಾಕು ತೋರಿಸಿ ತಾನು ಯಾರು ಎಂಬ ಸತ್ಯವನ್ನು ತಿಳಿದುಕೊಂಡಿದ್ದ. ‘ನೀವೇ ಆರ್ಯವರ್ಧನ್. ನೀವು ಯಾರು ಎನ್ನುವ ಸತ್ಯ ತಿಳಿಸಬಾರದು ಎಂಬ ಆದೇಶ ಪೊಲೀಸರಿಂದ ಬಂದಿದೆ. ಈ ಕಾರಣಕ್ಕೆ ನಾವು ಸತ್ಯವನ್ನು ಹೇಳಿಲ್ಲ’ ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಸಂಜುಗೆ ಶಾಕ್ ಆಗಿದೆ. ಈ ಕಾರಣಕ್ಕೆ ಆತ ರಾಜ ನಂದಿನಿ ವಿಲಾಸಕ್ಕೆ ಬಂದು ‘ನಾನೇ ಆರ್ಯವರ್ಧನ್’ ಎಂದು ಘೋಷಿಸಿದ್ದಾನೆ.
ಸತ್ಯ ಒಪ್ಪದ ಮನೆ ಮಂದಿ
ಸಂಜುಗೆ ಹಳೆಯ ನೆನಪು ಮಾಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಆತನೇ ಆರ್ಯವರ್ಧನ್ ಎನ್ನುವ ಸತ್ಯ ಯಾರಿಗೂ ಗೊತ್ತಿಲ್ಲ. ಈ ವಿಚಾರವನ್ನು ವೈದ್ಯರು ಈಗ ರಿವೀಲ್ ಮಾಡಿರುವುದರಿಂದ ಆತ ಬಂದು ಮನೆಯವರ ಎದುರು ಈ ಸತ್ಯ ಹೇಳಿದ್ದಾನೆ. ಆದರೆ, ಇದನ್ನು ಒಪ್ಪಲು ಮನೆ ಮಂದಿ ರೆಡಿ ಇಲ್ಲ. ಸಂಜುಗೆ ತಲೆಕೆಟ್ಟಿದೆ ಎಂಬ ನಿರ್ಧಾರಕ್ಕೆ ಮನೆಮಂದಿ ಬಂದಂತಿದೆ.
ಇದನ್ನೂ ಓದಿ: Jothe Jotheyali Serial: ‘ನೀವೇ ಆರ್ಯವರ್ಧನ್’; ಸಂಜು ಎದುರು ನಿಜ ವಿಚಾರ ಹೇಳಿದ ವೈದ್ಯರು
‘ನಾನು ಆರ್ಯವರ್ಧನ್’ ಎಂದು ಹೇಳುವಾಗ ಸಂಜು ಆವೇಶಕ್ಕೆ ಒಳಗಾಗಿದ್ದ. ಆತನಿಗೆ ನಿಜ ವಿಚಾರ ಗೊತ್ತಾಗಿರುವುದರಿಂದ ಈ ಆವೇಶ ಬಂದಿತ್ತು. ಆದರೆ, ಇದನ್ನು ಒಪ್ಪಿಕೊಳ್ಳಲು ಮನೆ ಮಂದಿ ಸಿದ್ಧರಿಲ್ಲ. ಈ ರೀತಿ ಆಗೋಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮನೆ ಮಂದಿ ತೆಗೆದಿದ್ದಾರೆ. ಇದರ ಹಿಂದೆ ದೊಡ್ಡ ಸಂಚಿದೆ ಎಂದು ಮಾನ್ಸಿ ವಾದ ಮುಂದಿಟ್ಟಿದ್ದಾಳೆ. ಅವಳು ಈ ಮೊದಲು ಕೂಡ ಸಂಜು ಬಗ್ಗೆ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದಳು. ಈಗ ಅನುಮಾನ ನಿಜವಾಗುವ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: Jothe Jotheyali: ಆರ್ಯವರ್ಧನ್ ಸತ್ತಿಲ್ಲ ಅನ್ನೋದು ಅನುಗೆ ತಿಳಿದೇ ಹೋಯ್ತು? ಮೀರಾ ಪ್ರಶ್ನೆಯಿಂದ ಮೂಡಿತು ಅನುಮಾನ
ಸಂಜು ನಡೆದುಕೊಂಡ ರೀತಿ ಹರ್ಷನಿಗೆ ಅಚ್ಚರಿ ಮೂಡಿಸಿದೆ. ಆತ ಕೂಡ ಸಂಜುಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಕೊನೆಗೆ ಬೇರೆ ದಾರಿ ಕಾಣದೆ ನಿದ್ದೆ ಬರುವ ಇಂಜಕ್ಷನ್ ಚುಚ್ಚಿದ್ದಾನೆ. ಇದರಿಂದ ಸಂಜು ಪ್ರಜ್ಞೆ ತಪ್ಪಿದ್ದಾನೆ.
ಮತ್ತೆ ಕಿಡ್ನ್ಯಾಪ್ ಆದ ವೈದ್ಯ
ಸಂಜುಗೆ ನಿಜ ವಿಚಾರ ತಿಳಿದ ನಂತರದಲ್ಲಿ ವೈದ್ಯರು ನಿಟ್ಟುಸಿರು ಬಿಟ್ಟಿದ್ದರು. ಭಾರ ಕಳೆಯಿತು ಎನ್ನುವ ಖುಷಿಯಲ್ಲಿ ಇದ್ದರು. ಆದರೆ, ಈ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ. ವೈದ್ಯರನ್ನು ಝೇಂಡೆ ಕಿಡ್ನ್ಯಾಪ್ ಮಾಡಿದ್ದಾನೆ. ‘ನನಗೆ ಎಲ್ಲ ವಿಚಾರವೂ ಗೊತ್ತು. ಸಂಜುನೇ ಆರ್ಯ ಎಂಬ ಸತ್ಯ ನನಗೆ ತಿಳಿದಿದೆ. ಆದರೆ, ನೀವು ಈ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ. ಹೇಳದೆ ಇದ್ದರೆ ನೀವು ಕೇಳಿದಷ್ಟು ಹಣವನ್ನು ನಾನು ಕೊಡುತ್ತೇನೆ’ ಎಂದು ಝೇಂಡೆ ಹೇಳಿದ್ದಾನೆ. ಸಂಜು ಈ ಸತ್ಯವನ್ನು ತಿಳಿದುಕೊಂಡ ವಿಚಾರದ ಬಗ್ಗೆ ವೈದ್ಯರು ಬಾಯಿಬಿಟ್ಟಿದ್ದಾರೆ. ಇದರಿಂದ ಝೇಂಡೆಗೆ ಆತಂಕ ಶುರುವಾಗಿದೆ.
ಅನುಗೆ ಮೂಡಿದೆ ಗೊಂದಲ
ಸಂಜು ವಿಚಾರದಲ್ಲಿ ಅನುಗೆ ಮೊದಲಿನಿಂದಲೂ ಗೊಂದಲ ಇದೆ. ಇದಕ್ಕೆ ಕಾರಣ ಆತ ನಡೆದುಕೊಳ್ಳುವ ರೀತಿ. ಆತನ ಪ್ರತಿ ಹಾವ-ಭಾವ ಆರ್ಯವರ್ಧನ್ನೇ ನೆನಪಿಸುವಂತಿತ್ತು. ಈಗ ಸಂಜು ಬಂದು ನಾನೇ ಆರ್ಯವರ್ಧನ್ ಎಂದು ಹೇಳಿಕೊಂಡಿರುವುದರಿಂದ ಆಕೆಗೆ ಗೊಂದಲ ಶುರುವಾಗಿದೆ. ಇತ್ತೀಚೆಗೆ ಎದುರಾಗಿದ್ದ ಜೋಗ್ತವ್ವ ಕೂಡ ಆರ್ಯವರ್ಧನ್ ಬದುಕಿದ್ದಾನೆ ಎಂಬ ಸತ್ಯವನ್ನು ಹೇಳಿದ್ದಳು. ‘ಎದುರಿದ್ದ ಗಂಡನನ್ನು ಕಳೆದುಕೊಳ್ಳಬೇಡ. ಹೀಗೆ ಮಾಡಿದರೆ ಆತ ಕೈ ತಪ್ಪಿ ಹೋಗುತ್ತಾನೆ’ ಎಂದು ಆಕೆ ಎಚ್ಚರಿಕೆ ನೀಡಿದ್ದಳು. ಈ ಕಾರಣಕ್ಕೆ ಅನುಗೆ ಗೊಂದಲ ಮೂಡಿತ್ತು. ಹೀಗಿರುವಾಗಲೇ ಸಂಜು ನಾನೇ ಆರ್ಯ ಎಂದು ಹೇಳಿಕೊಂಡಿದ್ದು ಕಥೆಗೆ ದೊಡ್ಡ ಟ್ವಿಸ್ಟ್ ಕೊಡಬಹುದು.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.