Seetha Raama: ಮದುವೆ ಸಂಬಂಧ ಮುರಿದುಕೊಳ್ಳುವಲ್ಲಿ ಯಶಸ್ವಿಯಾದ ರಾಮ; ಮುಂದಿನ ನಡೆಯೇನು?

ಮದುವೆ ಆಗಲ್ಲ ಎಂದು ಹೇಳುತ್ತಿದ್ದ ರಾಮ ತನಗೆ ಬಂದ ಸಂಬಂಧವನ್ನು ಉಪಾಯದಿಂದ ಮುರಿದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸಿಹಿ, ರಾಮನ ಸ್ನೇಹಕ್ಕೆ ಮುನ್ನುಡಿ ಎಂಬಂತೆ ನಂಬರ್ ಬದಲಾವಣೆಯೂ ಆಗಿದೆ.

Seetha Raama: ಮದುವೆ ಸಂಬಂಧ ಮುರಿದುಕೊಳ್ಳುವಲ್ಲಿ ಯಶಸ್ವಿಯಾದ ರಾಮ; ಮುಂದಿನ ನಡೆಯೇನು?
ಸೀತಾ ರಾಮ ಧಾರಾವಾಹಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ರಾಜೇಶ್ ದುಗ್ಗುಮನೆ

Updated on:Jul 25, 2023 | 10:11 AM

ಜೀ ಕನ್ನಡ ವಾಹಿನಿಯಲ್ಲಿ ವಾರದ ಹಿಂದೆ ಶುರುವಾಗಿರುವ ಧಾರವಾಹಿ ‘ಸೀತಾ ರಾಮ’ (Seetha Raama Serial) ಈಗ ಎಲ್ಲರ ಮನ ಗೆದ್ದಿದೆ. ‘ಇದರ ಹಿಂದೆ ಹಲವಾರು ಧಾರವಾಹಿ ಆರಂಭವಾಗಿದ್ದರೂ ಅವರಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಈ ತಂಡ ತಯಾರಿ ನಡೆಸಿದೆ. ಇನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಿಯಲ್ ಟ್ರ್ಯಾಕ್, ಪ್ರೋಮೋ ದಿಂದಲೇ ಜನ ಧಾರಾವಾಹಿಯ ಆರಂಭಕ್ಕೆ ಕಾದಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿತ್ತು ಅದಕ್ಕೆ ನಿರಾಶೆ ಮಾಡದ ಸೀತಾ ರಾಮ ತಂಡ, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನವಿರಾದ ಪ್ರೇಮಕಥೆ ಹೇಳಲು ಸಜ್ಜಾಗಿದ್ದ ಮೊದಲ ದಿನವೇ ಭರ್ಜರಿ ಆರಂಭ ಕೊಟ್ಟಿದ್ದ ಈ ಧಾರವಾಹಿ ತನ್ನೆಲ್ಲಾ ಎಪಿಸೋಡ್ ಗಳಲ್ಲಿ ವಿಭಿನ್ನತೆ ಕಾಯ್ದು ಕೊಂಡಿತ್ತು. ಪ್ರೇಕ್ಷಕರು ಸಿಹಿ (ರಿತು) ಪಾತ್ರವನ್ನು ನೋಡಿ ಫುಲ್ ಖುಷ್ ಆಗಿದ್ದರು. ಇನ್ನು ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು ನಟಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ನಟಿ ಪೂಜಾ ಲೋಕೇಶ್, ಜೈದೇವ್ ಮೋಹನ್, ಮುಖ್ಯಮಂತ್ರಿ ಚಂದ್ರು, ಪಿ ಡಿ ಸತೀಶ್ಚಂದ್ರ, ಪೂರ್ಣಚಂದ್ರ, ಇನ್ನಿತರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗಂಡು ದಿಕ್ಕಿಲ್ಲದ ಮನೆಯಲ್ಲಿನ ಹೆಣ್ಣಿನ ಸಮಸ್ಯೆ, ಇತ್ತ ಮೊದಲ ಪ್ರೀತಿಯಲ್ಲಿ ಸೋತಿರುವ ನಾಯಕ, ತಂದೆಯಿಲ್ಲದ ಮಗುವಿನ ತೊಳಲಾಟ ಎಲ್ಲವೂ ಈ ಧಾರಾವಾಹಿಯಲ್ಲಿ ನೀವು ನೋಡಬಹುದು.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ ಆರಂಭಕ್ಕೂ ಮೊದಲು ಸಖತ್ ಕ್ಯೂಟ್ ಲುಕ್​ನಲ್ಲಿ ಮಿಂಚಿದ ವೈಷ್ಣವಿ ಗೌಡ

ಇನ್ನು ಹಿಂದಿನ ಸಂಚಿಕೆಯ ಬಗ್ಗೆ ನೋಡುವುದಾದರೆ ಕಥಾನಾಯಕ ರಾಮನಿಗೆ ಅವನ ಚಿಕ್ಕಮ್ಮ ಹುಡುಗಿ ನೋಡುವ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಇಷ್ಟವಿಲ್ಲದ ರಾಮ ಅದೇ ಕೋಪದಲ್ಲಿ ಸೀತಾಗೂ ಗದುರುತ್ತಾನೆ. ಬಳಿಕ ಆಕೆ ರಾಮನಲ್ಲಿ ಕ್ಷಮೆ ಕೇಳಿ ಹೋಗುತ್ತಾಳೆ. ಆಗ ಸಿಹಿ ಅಮ್ಮ ಸಪ್ಪಗಿರುವುದನ್ನು ಕಂಡು ಅಮ್ಮನ ಬಳಿ ಕಾರಣ ಕೇಳಬೇಕೆನ್ನುವಾಗ ರಾಮ ಎಲ್ಲಿಗೋ ಹೊರಟಿದ್ದಾನೆ ಎಂದು ತಿಳಿದು, ಅವನ ಬಳಿ ಓಡೋಡಿ ಬಂದು ತನ್ನ ಹೆಲಿಕಾಪ್ಟರ್ ಏರುವ ಇಂಗಿತ ವ್ಯಕ್ತ ಪಡಿಸುತ್ತಾಳೆ. ಆಗ ರಾಮ ತಾನು ಒಂದು ಕೆಲಸಕ್ಕೆ ಹೋರಟಿರುವುದಾಗಿ ಸಿಹಿ ಬಳಿ ಹೇಳುತ್ತಾನೆ. ಜೊತೆಗೆ ಆಕೆ ಮಾತನಾಡಲು ನನ್ನ ಬಳಿ ನಿನ್ನ ನಂಬರ್ ಇಲ್ಲ ಎಂದು ಕೇಳಿದಾಗ ಸಿಹಿಯ ಕೋರಿಕೆಯ ಮೇರೆಗೆ ಶ್ರೀ ರಾಮ್ ತನ್ನ ಫೋನ್ ನಂಬರ್ ಅನ್ನು ಸೀತೆಯ ಫೋನ್ ನಲ್ಲಿ ಫ್ರೆಂಡ್ ಎಂದು ಸೇವ್ ಮಾಡಿರುವುದಾಗಿ ಸಿಹಿ ಬಳಿ ತಿಳಿಸಿ ಹೋಗುತ್ತಾನೆ. ನಂತರ, ಶ್ರೀ ರಾಮ್ ಮನೆಗೆ ಬಂದು ತನ್ನ ಮದುವೆಯಾಗಲು ಬಂದ ಮಿಶಿಕಾಳನ್ನು ಭೇಟಿಯಾಗುತ್ತಾನೆ ಜೊತೆಗೆ ಆಕೆಗೆ ಕೆಲವು ಷರತ್ತುಗಳನ್ನು ಹಾಕುತ್ತಾನೆ. ಅದನ್ನು ಒಪ್ಪಿದರೆ ಮದುವೆಯಾಗುತ್ತೆನೆ ಎಂದು ಹೇಳುತ್ತಾನೆ. ಆದರೆ ರಾಮನ ಷರತ್ತುಗಳನ್ನು ಕೇಳಿದ ಮಿಶಿಕಾ ಹೆದರಿಕೊಂಡು ತನ್ನ ತಂದೆ ತಾಯಿ ಜೊತೆ ಅಲ್ಲಿಂದ ಕಾಲ್ಕಿತ್ತುತ್ತಾಳೆ. ಇದರಿಂದ ಬೇಸರಗೊಂಡಂತೆ ನಾಟಕವಾಡುತ್ತಾ ರಾಮನ ಚಿಕ್ಕಮ್ಮ ಅಲ್ಲಿಂದ ಎದ್ದು ನಡೆಯುತ್ತಾಳೆ. ಇನ್ನು ರಾಮನ ನಡೆಯೇನು? ಏನಾಗಬಹುದು? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:39 am, Tue, 25 July 23

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ