ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ

ಭುವಿ ನದಿಯ ತೀರದಲ್ಲಿ ಕುಳಿತಿದ್ದಳು. ಕಾವೇರಿ ನದಿ ಹರಿಯುವುದನ್ನೇ ಅವಳು ದಿಟ್ಟಿಸಿ ನೋಡುತ್ತಿದ್ದಳು. ಅಲ್ಲಿಗೆ ಹರ್ಷ ಬಂದಿದ್ದಾನೆ. ಪತ್ನಿ ಕಾಣುತ್ತಿಲ್ಲವಲ್ಲ ಎನ್ನುವ ಹುಡುಕಾಟದಲ್ಲಿ ಆತ ಇದ್ದ. ಆ ಸಮಯಕ್ಕೆ ಸರಿಯಾಗಿ ಭುವಿ ಸಿಕ್ಕಿದ್ದಾಳೆ.

ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
ಸಾನಿಯಾ-ಹರ್ಷ
Edited By:

Updated on: Dec 02, 2022 | 7:36 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭುವಿಗೆ ಹರ್ಷನ ಮೇಲೆ ಅನುಮಾನ ಹೆಚ್ಚುತ್ತಿದೆ. ಹೀಗಾಗಿ ಇಬ್ಬರ ಮಧ್ಯೆ ಅಂತರ ಹೆಚ್ಚುತ್ತಿದೆ. ವರುಧಿನಿ ಮಾಡುತ್ತಿರುವ ಪ್ಲ್ಯಾನ್ ವರ್ಕೌಟ್ ಆಗುತ್ತಿದೆ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂಬುದು ಆಕೆಯ ಉದ್ದೇಶ. ಇದರಿಂದ ಹರ್ಷನನ್ನು ಪಡೆಯಲೇ ಬೇಕು ಆಕೆಯ ಆಸೆ ಯಶಸ್ಸು ಕಾಣುತ್ತಿದೆ.

ಗೊಂದಲದ ಗೂಡಾದ ಭುವಿ

ಭುವಿಗೆ ಮನಸ್ಸಿನ ಮಾತು ಕೇಳಬೇಕೋ ಅಥವಾ ಬುದ್ಧಿಯ ಮಾತು ಕೇಳಬೇಕೋ ಎಂಬುದು ತಿಳಿಯುತ್ತಿಲ್ಲ. ‘ಹರ್ಷ ಒಳ್ಳೆಯವರು. ಅವರು ಮೋಸ ಮಾಡುವುದಿಲ್ಲ. ಅವರಿಂದ ಯಾವಾಗಲೂ ಮೋಸ ಆಗಲು ಸಾಧ್ಯವೇ ಇಲ್ಲ’ ಎಂದು ಮನಸ್ಸು ಹೇಳಿದರೆ, ಬುದ್ಧಿ ಬೇರೆಯದನ್ನೇ ಹೇಳುತ್ತಿದೆ. ‘ಹರ್ಷನಿಂದ ನಿನಗೆ ಮೋಸ ಆಗುತ್ತಿದೆ’ ಎಂದು ಬುದ್ಧಿ ಚುಚ್ಚುತ್ತಿದೆ. ಇದು ಭುವಿಗೆ ಸಾಕಷ್ಟು ಗೊಂದಲ ತಂದಿದೆ. ಮುಂದೇನು ಮಾಡಬೇಕು ಎಂದು ಆಕೆಗೆ ತಿಳಿಯುತ್ತಿಲ್ಲ.

ಕೆಲ ವಿಚಾರಗಳಲ್ಲಿ ಭುವಿಗೆ ಗೊಂದಲ ಹೆಚ್ಚಿದೆ. ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಹರ್ಷ ಎದುರಾದಾಗೆಲ್ಲ ಒಂದಿಲ್ಲೊಂದು ಅಡಚಣೆ ಉಂಟಾಗುತ್ತಲೇ ಇದೆ. ಹರ್ಷನಿಂದ ಸೃಷ್ಟಿಯಾದ ‘ಗೊಂದಲವನ್ನು ಆಕೆ ಪರಿಹರಿಸಿಕೊಳ್ಳಬೇಕಿದೆ. ಆದರೆ, ಇದಕ್ಕೆ ಸಮಯ ಕೂಡಿ ಬರುತ್ತಿಲ್ಲ.

ಕಾಣೆಯಾದ ಭುವಿ

ಭುವಿ ನದಿಯ ತೀರದಲ್ಲಿ ಕುಳಿತಿದ್ದಳು. ಕಾವೇರಿ ನದಿ ಹರಿಯುವುದನ್ನೇ ಅವಳು ದಿಟ್ಟಿಸಿ ನೋಡುತ್ತಿದ್ದಳು. ಅಲ್ಲಿಗೆ ಹರ್ಷ ಬಂದಿದ್ದಾನೆ. ಪತ್ನಿ ಕಾಣುತ್ತಿಲ್ಲವಲ್ಲ ಎನ್ನುವ ಹುಡುಕಾಟದಲ್ಲಿ ಆತ ಇದ್ದ. ಆ ಸಮಯಕ್ಕೆ ಸರಿಯಾಗಿ ಭುವಿ ಸಿಕ್ಕಿದ್ದಾಳೆ. ಭುವಿಯ ಎದರು ಎಲ್ಲವನ್ನೂ ಹೇಳಿಕೊಳ್ಳಬೇಕು ಎನ್ನುವಾಗಲೇ ಆಕೆ ಕಾಣೆಯಾಗಿದ್ದಾಳೆ. ಭುವಿಯ ಜತೆ ಮಾತನಾಡುತ್ತಿರುವಾಗಲೇ ಆಕೆ ಏಕಾಏಕಿ ಕಾಣೆಯಾಗಿದ್ದು ನೋಡಿ ಆತನಿಗೆ ಶಾಕ್ ಆಗಿದೆ. ಆಕೆ ಎಲ್ಲಿಗೆ ತೆರಳಿರಬಹುದು ಎನ್ನುವ ಅನುಮಾನ ಮೂಡಿದೆ.

ಹರ್ಷನಿಗೆ ಕಿವಿಮಾತು

ಭುವಿಯನ್ನು ಹುಡುಕಿ ಹೊರಟ ಹರ್ಷನಿಗೆ ವಯಸ್ಸಾದ ವ್ಯಕ್ತಿಯೋರ್ವ ಸಿಕ್ಕಿದ್ದ. ಆತನ ಕಾಲಿಗೆ ಮುಳ್ಳು ಚುಚ್ಚಿತ್ತು. ಅದನ್ನು ಹರ್ಷ ತೆಗೆದುಕೊಟ್ಟಿದ್ದಾನೆ. ಮುಳ್ಳು ತೆಗೆದ ನಂತರದಲ್ಲಿ ವಯಸ್ಸಾದ ವ್ಯಕ್ತಿಗೆ ಖುಷಿಯಾಗಿದೆ. ಮತ್ತೊಂದು ಕಡೆ ಹರ್ಷನ ಮುಖದ ಮೇಲೆ ಇರುವ ಗೊಂದಲ ನೋಡಿ ಹಲವು ಪ್ರಶ್ನೆಗಳು ಮೂಡಿವೆ. ‘ನನ್ನ ಕಾಲಿನ ಮುಳ್ಳನ್ನೇನೋ ತೆಗೆದೆ. ಆದರೆ, ಈಗ ನಿನ್ನ ಮನಸ್ಸಿಗೆ ಚುಚ್ಚಿರುವ ಮುಳ್ಳು ಮತ್ತೂ ಅಪಾಯಕಾರಿ. ಅದನ್ನು ಹೇಗೆ ತೆಗೆಯಬೇಕು ಎಂಬುದನ್ನು ನೋಡಿಕೋ’ ಎಂದು ತಾತ ಕಿವಿಮಾತು ಹೇಳಿದ್ದಾನೆ. ಅಷ್ಟೇ ಅಲ್ಲ, ಮುಂದೆ ಬರುವ ಆಪತ್ತುಗಳ ಬಗ್ಗೆ ಎಚ್ಚರಿಸಿದ್ದಾನೆ. ಈ ಮಾತುಗಳನ್ನು ಕೇಳಿ ಹರ್ಷನಿಗೆ ಅಚ್ಚರಿ ಆಗಿದೆ. ಇವುಗಳೆಲ್ಲವೂ ಸುಳ್ಳಾಗಲಿ ಎಂದು ಆತ ತಾತನ ಬಳಿ ಕೋರಿಕೊಂಡಿದ್ದಾನೆ.

ಹರ್ಷನ ಅರೆಸ್ಟ್

ಹರ್ಷನನ್ನು ಅರೆಸ್ಟ್ ಮಾಡಿಸಲೇಬೇಕು ಎಂದು ಸಾನಿಯಾ ನಿರ್ಧರಿಸಿದ್ದಾಳೆ. ರತ್ನಮಾಲಾಳ ಅಸ್ಥಿ ಬಿಡುವ ದಿನವೇ ಈ ಘಟನೆ ನಡೆದಿದೆ. ಇದಕ್ಕಾಗಿ ಆಕೆ ಶ್ರೀರಂಗಪಟ್ಟಣಕ್ಕೆ ಪೊಲೀಸರು ಹಾಗೂ ವಕೀಲರನ್ನು ಕರೆಸಿದ್ದಾಳೆ. ಹರ್ಷನ ವಿರುದ್ಧ ಅರೆಸ್ಟ್ ವಾರಂಟ್ ಕೂಡ ತಂದಿದ್ದಾಳೆ. ಈ ಕಾರಣಕ್ಕೆ ಪೊಲೀಸರಿಗೆ ಹರ್ಷನ ಅರೆಸ್ಟ್​ ಮಾಡೋದು ಅನಿವಾರ್ಯ ಆಗಿದೆ. ಆತನ ಕೈಗೆ ಕೋಳ ಹಾಕಿಯೇ ಕರೆದುಕೊಂಡು ಹೋಗಬೇಕು ಎಂಬುದು ಸಾನಿಯಾ ಆಗ್ರಹ.

ಈ ವಿಚಾರ ಸಾನಿಯಾ ಪತಿ ಆದಿಗೆ ತಿಳಿದಿದೆ. ಸಾನಿಯಾ ತಿದ್ದಿಕೊಳ್ಳಬಹುದು ಎನ್ನುವ ಉದ್ದೇಶ ಆದಿಯದ್ದಾಗಿತ್ತು. ಆದರೆ, ಪ್ರತಿ ಹಂತದಲ್ಲೂ ಅದು ಸುಳ್ಳಾಗುತ್ತಿದೆ. ಇದರಿಂದ ಆತ ಬೇಸರಗೊಂಡಿದ್ದಾನೆ. ಸಾನಿಯಾಳನ್ನು ನಾಲ್ಕು ದಿನ ಜೈಲಿಗೆ ತಳ್ಳಬೇಕು ಎಂದು ಕೂಡ ಆತನಿಗೆ ಅನಿಸಿದೆ.

ಶ್ರೀಲಕ್ಷ್ಮಿ ಎಚ್.