AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತ್ನಮಾಲಾಗೆ ತಿಳಿದೇ ಹೋಯ್ತು ತನ್ನ ಅನಾರೋಗ್ಯದ ವಿಚಾರ; ಶೀಘ್ರವೇ ಭುವಿಗೆ ಎಂಡಿ ಪಟ್ಟ?

ಮರೆವಿನ ಕಾಯಿಲೆ ಶುರುವಾಗಿದೆ ಎಂಬ ವಿಚಾರವನ್ನು ಯಾರೂ ಆಕೆಯ ಬಳಿ ಹೇಳಿರಲಿಲ್ಲ. ಈಗ ಅಸಲಿ ವಿಚಾರ ಹೊರ ಬಿದ್ದಿದೆ.

ರತ್ನಮಾಲಾಗೆ ತಿಳಿದೇ ಹೋಯ್ತು ತನ್ನ ಅನಾರೋಗ್ಯದ ವಿಚಾರ; ಶೀಘ್ರವೇ ಭುವಿಗೆ ಎಂಡಿ ಪಟ್ಟ?
ರತ್ನಮಾಲಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 12, 2022 | 7:00 AM

Share

‘ಕನ್ನಡತಿ’ ಧಾರಾವಾಹಿಯ (Kannadathi Serial) ಮುಖ್ಯಪಾತ್ರಧಾರಿ  ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ತೀವ್ರ ಅನಾರೋಗ್ಯಕ್ಕೆ ತುತ್ತಾದ ಕಾರಣಕ್ಕೆ ಆಕೆ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಳು. ಆ ಬಳಿಕ ಎಲ್ಲವೂ ಸರಿ ಆಯಿತು ಎಂದು ಮನೆ ಮಂದಿ ಭಾವಿಸಿದ್ದರು. ಆದರೆ, ರತ್ನಮಾಲಾಗೆ ತೀವ್ರವಾಗಿ ಮರೆವಿನ ಕಾಯಿಲೆ ಕಾಡುತ್ತಿದೆ. ಪ್ರಮುಖ ವಿಚಾರಗಳನ್ನೇ ಆಕೆ ಮರೆಯುತ್ತಿದ್ದಾಳೆ. ಈ ಕಾರಣದಿಂದ ರತ್ನಮಾಲಾಗೆ ಚಿಂತೆ ಶುರುವಾಗಿದೆ. ಮನೆಗೆ ಬಂದ ವೈದ್ಯರು ಹೇಳುವ ಮಾತನ್ನು ಕದ್ದು ಕೇಳಿದ್ದಾಳೆ ರತ್ನಮಾಲಾ. ಇದರಿಂದ ಆಕೆ ಶಾಕ್​ಗೆ ಒಳಗಾಗಿದ್ದಾಳೆ. ಮುಂದೇನು ಎಂಬ ಚಿಂತೆ ಆಕೆಯನ್ನು ಬಲವಾಗಿ ಕಾಡುತ್ತಿದೆ.

ತನಗೆ ಏನೋ ಆಗಿದೆ ಎಂಬುದು ರತ್ನಮಾಲಾಗೆ ಗೊತ್ತಾಗುತ್ತಲೇ ಇತ್ತು. ಆದರೆ, ಇದನ್ನು ಮನೆ ಮಂದಿ ಅಲ್ಲಗಳೆಯುತ್ತಲೇ ಬಂದಿದ್ದರು. ತನಗೆ ಅನಾರೋಗ್ಯ ಕಾಡಿದೆ ಎಂದು ರತ್ನಮಾಲಾ ಸಾಕಷ್ಟು ಬಾರಿ ಹೇಳಿಕೊಂಡಿದ್ದಿದೆ. ಆದರೆ, ಮರೆವಿನ ಕಾಯಿಲೆ ಶುರುವಾಗಿದೆ ಎಂಬ ವಿಚಾರವನ್ನು ಯಾರೂ ಆಕೆಯ ಬಳಿ ಹೇಳಿರಲಿಲ್ಲ. ಈಗ ಅಸಲಿ ವಿಚಾರ ಹೊರ ಬಿದ್ದಿದೆ.

ರತ್ನಮಾಲಾಳ ಆರೋಗ್ಯ ಪರೀಕ್ಷೆಗೆ ವೈದ್ಯರು ಬಂದಿದ್ದರು. ಅವರು ರತ್ನಮಾಲಾಳ ಹೆಲ್ತ್ ರಿಪೋರ್ಟ್​ ಅನ್ನು ಓದಿದ್ದಾರೆ. ಈ ವೇಳೆ ಆಕೆಗೆ ತೀವ್ರವಾಗಿ ಸಮಸ್ಯೆ ಕಾಡುತ್ತಿರುವ ವಿಚಾರ ಗೊತ್ತಾಗಿದೆ. ‘ರತ್ನಮಾಲಾ ಮೂರನೇ ಸ್ಟೇಜ್​ನಲ್ಲಿದ್ದಾರೆ. ಅವರಿಗೆ ಇಷ್ಟು ದಿನ ಮನಸ್ಸಿನ ಮೇಲೆ ಮಾತ್ರ ಪ್ರಭಾವ ಉಂಟಾಗುತ್ತಿತ್ತು. ಇನ್ಮುಂದೆ ಆಕೆಯ ದೇಹದ ಮೇಲೂ ಪ್ರಭಾವ ಉಂಟಾಗಬಹುದು. ಎಲ್ಲದಕ್ಕೂ ರೆಡಿ ಆಗಿರಿ’ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ. ವೈದ್ಯರು ಹೇಳುವ ಮಾತನ್ನು ರತ್ನಮಾಲಾ ಕದ್ದಾಲಿಸಿದ್ದಾಳೆ. ಇದನ್ನು ಕೇಳಿ ಆಕೆಗೂ ಶಾಕ್ ಆಗಿದೆ.

ಇದನ್ನೂ ಓದಿ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ರತ್ನಮಾಲಾ ಎಲ್ಲಾ ವಿಚಾರವನ್ನು ಮರೆಯುತ್ತಾ ಸಾಗುತ್ತಿದ್ದಾಳೆ. ಇದು ಆಕೆಯ ಗಮನಕ್ಕೂ ಬಂದಿದೆ. ಯಾವುದೂ ಸರಿ ಇಲ್ಲ ಎಂಬುದು ಆಕೆಗೆ ಗೊತ್ತಾಗಿದೆ. ಈಗ ವೈದ್ಯರಿಂದಲೇ ಈ ವಿಚಾರ ತಿಳಿದು ಆಕೆಗೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಈ ಕಾರಣಕ್ಕೆ ಶೀಘ್ರವೇ ಭುವಿಗೆ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ಆಕೆ ಯೋಚಿಸಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ತಿರುಗೇಟು ನೀಡಿದ ಭುವಿ

ರತ್ನಮಾಲಾ ಮನೆಗೆ ಜರ್ನಲಿಸ್ಟ್ ಬಂದಿದ್ದರು. ಅವರನ್ನು ಹರ್ಷ ತಳ್ಳಿದ್ದರಿಂದ ದೊಡ್ಡ ರಾಮಾಯಣವೇ ನಡೆದಿತ್ತು. ಅವರ ಬಳಿ ಹರ್ಷ ಕ್ಷಮೆ ಕೇಳಬೇಕು ಎಂಬುದು ರತ್ನಮಾಲಾಳ ಉದ್ದೇಶ ಆಗಿತ್ತು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ರತ್ನಮಾಲಾ ಬಗ್ಗೆ ಜರ್ನಲಿಸ್ಟ್ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾ ಬಂದಳು. ಇದನ್ನು ಲೈವ್ ಕೂಡ ಮಾಡಲಾಗುತ್ತಿತ್ತು. ಇದು ಭುವಿ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ ಪತ್ರಕರ್ತೆಗೆ ಭುವಿ ಕ್ಲಾಸ್ ತೆಗೆದುಕೊಂಡಿದ್ದಾಳೆ.

‘ನೀವು ಲೈವ್ ಮಾಡಲು ಒಪ್ಪಿಗೆ ಪಡೆದಿಲ್ಲ. ಆದಾಗ್ಯೂ ಲೈವ್ ಮಾಡ್ತಾ ಇದೀರಾ. ಇದು ಕಾನೂನಿನ ಪ್ರಕಾರ ತಪ್ಪು. ದಯವಿಟ್ಟು ಆ ರೀತಿ ಮಾಡಬೇಡಿ. ಇದು ಅಪರಾಧ. ನಮ್ಮ ಖಾಸಗಿತನಕ್ಕೆ ಆದ್ಯತೆ ನೀಡಿ’ ಎಂದು ಭುವಿ ನೇರ ಮಾತುಗಳಿಂದ ಹೇಳಿದ್ದಾಳೆ. ಭುವಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ರತ್ನಮಾಲಾಗೆ ಇಷ್ಟವಾಗಿದೆ. ಅಲ್ಲಿಂದ ಎದ್ದು ಹೋಗುವಾಗ, ‘ಸಂಸ್ಥೆಗೆ ಸಂಬಂಧಿಸಿದ ಯಾವುದೇ ವಿಚಾರ ಇದ್ದರೂ ಅದನ್ನು ನನ್ನ ಸೊಸೆ ಭುವಿಯ ಬಳಿಯೇ ಕೇಳಿ. ಆಕೆಯ ಮತ್ತೊಂದು ಹೆಸರು ಸೌಪರ್ಣಿಕ’ ಎಂದು ರತ್ನಮಾಲಾ ಹೇಳುತ್ತಿದ್ದಂತೆ ಸಾನಿಯಾ ಉರಿದುಕೊಂಡಳು. ಸೌಪರ್ಣಿಕಾ ಈ ಮನೆಯ ಎಂಡಿ ಆಗಲಿದ್ದಾಳೆ ಎಂದು ಈ ಮೊದಲೇ ರತ್ನಮಾಲಾ ಹೇಳಿದ್ದಳು.

ಶ್ರೀಲಕ್ಷ್ಮಿ ಎಚ್.