‘ನಮ್ರತಾ-ಕಾರ್ತಿ ಬೆಸ್ಟ್ ಜೋಡಿ, ಮದುವೆ ಆದ್ರೆ ನಂಗೆ ಖುಷಿ’; ಸಂಗೀತಾ ಶೃಂಗೇರಿ ಅಚ್ಚರಿಯ ಮಾತು

ಬಿಗ್ ಬಾಸ್ ಕನ್ನಡ 10 ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಅವರ ಪ್ರೀತಿಯ ಕುರಿತು ಅನೇಕ ಊಹಾಪೋಹಗಳಿವೆ. ಇತ್ತೀಚೆಗೆ ಅವರ ಸುತ್ತಾಟದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯಿಸಿದ್ದಾರೆ. ಅವರು ಮದುವೆ ಆದರೆ ತುಂಬಾ ಖುಷಿ ಪಡುತ್ತೇನೆ ಎಂದಿದ್ದಾರೆ.

‘ನಮ್ರತಾ-ಕಾರ್ತಿ ಬೆಸ್ಟ್ ಜೋಡಿ, ಮದುವೆ ಆದ್ರೆ ನಂಗೆ ಖುಷಿ’; ಸಂಗೀತಾ ಶೃಂಗೇರಿ ಅಚ್ಚರಿಯ ಮಾತು
ಕಾರ್ತಿ-ನಮ್ರತಾ, ಸಂಗೀತಾ
Edited By:

Updated on: Jan 03, 2026 | 8:36 AM

ಅದು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮಾತು. ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಅವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಇತ್ತು. ಆದರೆ, ಒಂದು ಹಂತದ ಬಳಿಕ ಇಬ್ಬರೂ ಬೇರೆ ಆದರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಯಿತು. ಶೋ ಅಂತಿಮ ಹಂತಕ್ಕೆ ಬರುವಾಗ ನಮ್ರತಾ (Namratha Gowda) ಜೊತೆ ಕಾರ್ತಿಕ್ ಅವರು ಕ್ಲೋಸ್ ಆದರು. ಇಬ್ಬರೂ ಈಗ ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಗೀತಾ ಶೃಂಗೇರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಒಟ್ಟಾಗಿ ದೇಶ-ವಿದೇಶ ಸುತ್ತುತ್ತಿದ್ದಾರೆ ಎಂಬ ಅನುಮಾನ ಅನೇಕರಿಗೆ ಇದೆ. ಇತ್ತೀಚೆಗೆ ನಮ್ರತಾ ಹಂಚಿಕೊಂಡ ವಿಡಿಯೋದಲ್ಲಿ ಕಾರ್ತಿಕ್ ಮಹೇಶ್ ಅವರ ಕೈ ಕಾಣಿಸಿದೆ. ಹೀಗಾಗಿ ಸುತ್ತಾಟದಲ್ಲಿ ನಮ್ರತಾಗೆ ಅವರು ಪಾರ್ಟ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ. ಅವರು ಬದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಈ ಬಗ್ಗೆ ಸಂಗೀತಾ ರಿಯಾಕ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

‘ಕಾರ್ತಿಕ್ ಹಾಗೂ ನಮ್ರತಾ ಲವ್ ವಿಷಯ ಹರಿದಾಡುತ್ತಿದೆ’ ಎಂಬ ಪ್ರಶ್ನೆ ಸಂಗೀತಾಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಂಗೀತಾ, ‘ಅವರು ಮದುವೆ ಆಗ್ತಾರೆ ಎಂದರೆ ನನ್ನಷ್ಟು ಖುಷಿಪಡುವವರು ಮತ್ತೊಬ್ಬರಿಲ್ಲ. ಕಪಲ್ ಆಗಿ ತುಂಬಾನೇ ಸುಂದರವಾಗಿ ಕಾಣ್ತಾರೆ. ಇಬ್ಬರಲ್ಲೂ ಮಧ್ಯೆ ಹೋಲಿಕೆ ಇದೆ. ಒಂದೇ ರೀತಿಯ ಕರಿಯರ್’ ಎಂದಿದ್ದಾರೆ ಸಂಗೀತಾ. ಅವರ ಮಾತು ಅನೇಕರಿಗೆ ಅಚ್ಚರಿ ತರಿಸಿದೆ.

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮುಗಿದ ಬಳಿಕ ಆ ಸೀಸನ್ ಸ್ಪರ್ಧಿಗಳ ಜೊತೆ ಕಾಣಿಸಿಕೊಂಡಿದ್ದು ಕಡಿಮೆ. ಇತ್ತೀಚೆಗೆ ನಡೆದ ಅವರ ಹಾಡಿನ ಬಿಡುಗಡೆ ಸಮಾರಂಭಕ್ಕೆ ಕಾರ್ತಿಕ್ ಹಾಗೂ ನಮ್ರತಾ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಅವರು ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.