AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳು ಅರೆಸ್ಟ್; ಗಲಾಟೆಗೆ ಕಾರಣ ಬಹಿರಂಗ​

Kirik Keerthi Assault Case: ಡಿ.2ರ ಮಧ್ಯರಾತ್ರಿ ಕಿರಿಕ್​ ಕೀರ್ತಿ ಜತೆ ಐವರು ಅಪರಿಚಿತ ವ್ಯಕ್ತಿಗಳು ಗಲಾಟೆ ಮಾಡಿಕೊಂಡಿದ್ದರು. ಕಿರಿಕ್​ ಕೀರ್ತಿಯ ತಲೆಗೆ ಬಿಯರ್​ ಬಾಟಲ್​ನಿಂದ ಹೊಡೆಯಲಾಗಿತ್ತು.

ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ ಐವರು ಆರೋಪಿಗಳು ಅರೆಸ್ಟ್; ಗಲಾಟೆಗೆ ಕಾರಣ ಬಹಿರಂಗ​
ಕಿರಿಕ್ ಕೀರ್ತಿ
TV9 Web
| Edited By: |

Updated on:Dec 13, 2021 | 10:07 AM

Share

ಕೆಲವೇ ದಿನಗಳ ಹಿಂದೆ ಸದಾಶಿವನಗರದ ಪಬ್​ವೊಂದರಲ್ಲಿ ಕಿರಿಕ್​ ಕೀರ್ತಿ (Kirik Keerthi) ಅವರ ಮೇಲೆ ಹಲ್ಲೆ (Assault) ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಕಿರಿಕ್​ ಕೀರ್ತಿ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಆರಂಭಿಸಿದ ಸದಾಶಿವನಗರ ಠಾಣೆ ಪೊಲೀಸರು (Sadashivanagar Police) ಐವರು ಆರೋಪಿಗಳನ್ನು ಈಗ ಬಂಧಿಸಿದ್ದಾರೆ. ಅನಿಲ್, ವಿಜಯ್, ಅಜಯ್ ಸೇರಿ ಐವರು ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿ.2ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ಪಬ್​ನಲ್ಲಿ ನಡೆದ ಗಲಾಟೆಯಲ್ಲಿ ಕಿರಿಕ್​ ಕೀರ್ತಿಯ ಅವರ ತಲೆಗೆ ಬಿಯರ್​ ಬಾಟಲ್​ನಿಂದ ಹೊಡೆಯಲಾಗಿತ್ತು. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದರು. ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳು ಅಂದಿನ ಗಲಾಟೆಗೆ ಕಾರಣ ಏನು ಎಂಬುದನ್ನು ಪೊಲೀಸರ ಎದುರು ಬಾಯಿ ಬಿಟ್ಟಿದ್ದಾರೆ.

ಕಿರುತೆರೆ ನಿರೂಪಕನಾಗಿ ಕಿರಿಕ್​ ಕೀರ್ತಿ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿದರು. ಸೋಶಿಯಲ್​ ಮೀಡಿಯಾದಲ್ಲೂ ಅವರನ್ನು ಅನೇಕರ ಫಾಲೋ ಮಾಡುತ್ತಾರೆ.

ಪಬ್​ ಗಲಾಟೆಗೆ ಕಾರಣ ಏನು?

ಡಿ.2ರ ರಾತ್ರಿ ಸದಾಶಿವನಗರದ ಪಬ್​​ವೊಂದಕ್ಕೆ ಕಿರಿಕ್ ಕೀರ್ತಿ ತೆರಳಿದ್ದರು. ಅವರು ಕುಳಿತಿದ್ದ ಪಕ್ಕದ ಟೇಬಲ್​ನಲ್ಲಿ ಅನಿಲ್, ವಿಜಯ್, ಅಜಯ್ ಹಾಗೂ ಸ್ನೇಹಿತರು ಕುಳಿತಿದ್ದರು. ಈ ವೇಳೆ ಅನಿಲ್ ತನಗೆ ಕಿರಿಕ್ ಕೀರ್ತಿಯ ಪರಿಚಯವಿದೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹಾಗಿದ್ದರೆ ಹೋಗಿ ಮಾತನಾಡಿಸು ಎಂದು ಜೊತೆಯಲ್ಲಿದ್ದ ಸ್ನೇಹಿತರು ಒತ್ತಾಯಿಸಿದರು. ಈ ವೇಳೆ ಕಿರಿಕ್ ಕೀರ್ತಿ ಬಳಿ ಬಂದು ನಾನ್ಯಾರು ಗೊತ್ತಾಯ್ತಾ ಎಂದು ಅನಿಲ್ ಕೇಳಿದ. ನನಗೆ ಗೊತ್ತಿಲ್ಲ ಎಂದು ಕೀರ್ತಿ ಉತ್ತರಿಸಿದರು.

ಈ ಎಲ್ಲ ಘಟನೆಗಳನ್ನು ಅವರ ಸ್ನೇಹಿತರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ವಿಡಿಯೋ ಯಾಕೆ ಮಾಡಿಕೊಳ್ಳುತ್ತಾ ಇದ್ದೀರಿ ಎಂದು ಕಿರಿಕ್ ಕೀರ್ತಿ ಪ್ರಶ್ನಿಸಿದ್ದರು. ಈ ವೇಳೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಐವರು ಎಸ್ಕೇಪ್ ಆಗಿದ್ದರು. ಅಂದು ನಡೆದ ಘಟನೆಯನ್ನು ಪೊಲೀಸರ ಎದುರು ಐವರು ಆರೋಪಿಗಳು ವಿವರಿಸಿದ್ದಾರೆ.

ಇದನ್ನೂ ಓದಿ:

ಪಬ್​ನಲ್ಲಿ ಬಿಯರ್​ ಬಾಟಲ್​ನಿಂದ ಹಲ್ಲೆಗೆ ಒಳಗಾದ ಕಿರಿಕ್​ ಕೀರ್ತಿ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿಡಿಯೋ

ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ, ವ್ಯಕ್ತಿ ಮೇಲೆ ಹಲ್ಲೆ

Published On - 9:58 am, Mon, 13 December 21

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್