‘ಸೂರ್ಯವಂಶ’ ಸ್ಟೈಲ್ನಲ್ಲಿ ಬಂತು ‘ಕ್ವಾಟ್ಲೆ ಕಿಚನ್ 2’ ಪ್ರೋಮೋ
‘ಕ್ವಾಟ್ಲೆ ಕಿಚನ್ 2’ ಹೊಸ ಸೀಸನ್‌ನೊಂದಿಗೆ ಕಲರ್ಸ್ ಕನ್ನಡಕ್ಕೆ ಮರಳುತ್ತಿದೆ. "ಸೂರ್ಯವಂಶ" ಶೈಲಿಯಲ್ಲಿ ಮೂಡಿಬಂದ ಪ್ರೋಮೋ ಈಗಾಗಲೇ ವೈರಲ್ ಆಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹಾಸ್ಯ, ಅಡುಗೆ ಹಾಗೂ ಮನರಂಜನೆಯ ಸಮ್ಮಿಲನವಾಗಿರುವ ಈ ಕಾರ್ಯಕ್ರಮದ ಕಂಬ್ಯಾಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಿಂದಿನ ಸೀಸನ್‌ನಂತೆ ಈ ಬಾರಿಯೂ ತಾರೆಯರ ಎಡವಟ್ಟುಗಳು ನಗೆಯ ಕಚಗುಳಿ ಇಡಲಿವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಭಿನ್ನ ಹಾಗೂ ಹಾಸ್ಯಭರಿತ ಅಡುಗೆ ಕಾರ್ಯಕ್ರಮ ‘ಕ್ವಾಟ್ಲೆ ಕಿಚನ್’ ಈಗ ಮತ್ತೆ ಸುದ್ದಿಯಲ್ಲಿದೆ. ಈ ಹಿಂದೆ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದ ಈ ಶೋ, ಇದೀಗ ಹೊಸ ರೂಪದಲ್ಲಿ ಹಾಗೂ ಹೊಸ ಸೀಸನ್‌ನೊಂದಿಗೆ ಮರಳಿ ಬರಲು ರೆಡಿ ಆಗಿದೆ. ಇದರ ಪ್ರೋಮೋ ಗಮನ ಸೆಳೆದಿದೆ. ‘ಸೂರ್ಯವಂಶ’ ಸ್ಟೈಲ್ನಲ್ಲಿ ಪ್ರೋಮೋ ಮೂಡಿ ಬಂದಿದೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಗಮನ ಸೆಳೆದಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಹಾಗೂ ಹೊಸ ಆರಂಭದ ಮುನ್ಸೂಚನೆ ನೀಡುವಂತೆ ಈ ಪೋಸ್ಟ್ ಕಂಡುಬರುತ್ತಿದೆ. ‘ಕ್ವಾಟ್ಲೆ ಕಿಚನ್’ ಎಂದರೆ ಕೇವಲ ಅಡುಗೆಯಷ್ಟೇ ಅಲ್ಲ, ಅಲ್ಲಿನ ಕಿಚಾಯಿಸುವಿಕೆ, ಹಾಸ್ಯದ ತುಣುಕುಗಳು ಮತ್ತು ಅತಿಥಿಗಳ ಕಾಲೆಳೆಯುವ ಗುಣ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಅದು ಈಗಲೂ ಮುಂದುವರಿಯಲಿದೆ.
ಇದನ್ನೂ ಓದಿ: ಮಾರ್ಚ್9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’
ಆಲೂಗಡ್ಡೆ -ಬೆಂಡೆಕಾಯಿ ವಿವಾಹ ಆಗುತ್ತದೆ. ಆ ಬಳಿಕ ಆಲೂಗಡ್ಡೆ ಅಪ್ಪ ನವಜೋಡಿಗಳಾದ ಆಲೂಗಡ್ಡೆ-ಬೆಂಡೆಕಾಯಿಯನ್ನು ಹೊರಹಾಕುತ್ತಾರೆ. ಆಗ ಈ ಜೋಡಿ ತೆರಳೋದು ಕ್ವಾಟ್ಲೆ ಕಿಚನ್ಗೆ.
View this post on Instagram
ಈ ಹಿಂದೆ ಪ್ರಸಾರವಾದಾಗ, ಸಿನೆಮಾ ತಾರೆಯರು ಹಾಗೂ ಕಿರುತೆರೆಯ ಕಲಾವಿದರು ಈ ಶೋನಲ್ಲಿ ಭಾಗವಹಿಸಿ ತಮ್ಮ ಅಡುಗೆ ಕೌಶಲ್ಯದ ಜೊತೆಗೆ ವೈಯಕ್ತಿಕ ಜೀವನದ ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತಿದ್ದರು. ಅಡುಗೆ ಮಾಡುವ ಗಡಿಬಿಡಿಯಲ್ಲಿ ನಡೆಯುವ ಎಡವಟ್ಟುಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಅದೇ ಹಳೆಯ ಲವಲವಿಕೆ ಕಂಡುಬರುತ್ತಿದ್ದು, ಕಮೆಂಟ್ ವಿಭಾಗದಲ್ಲಿ ಅಭಿಮಾನಿಗಳು “ಬೇಗ ಈ ಶೋ ಶುರು ಮಾಡಿ, ಕಾಲೆಳೆಯುವ ಆಟ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಳ್ಳುತ್ತಿದ್ದಾರೆ. ಪ್ರಸಾರ ದಿನಾಂಕ ವಾಹಿನಿಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



