‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಹೊಸ ವರ್ಷದ ಆರಂಭದಲ್ಲಿ ಬಿಗ್ ಬಾಸ್ ಪೂರ್ಣಗೊಳ್ಳಲಿದೆ. ಈ ವಿಚಾರವನ್ನು ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರೇ ಘೋಷಣೆ ಮಾಡಿದ್ದಾರೆ. ‘ಬಿಗ್ ಬಾಸ್’ ಫಿನಾಲೆಗೂ ಮುನ್ನ ಮಂಜು ಪಾವಗಡ (Manju Pavagada) ಬಿಗ್ ಬಾಸ್ ಮನೆ ಸೇರಿದ್ದಾರೆ. ಹಾಗಂದ ಮಾತ್ರಕ್ಕೆ ಇದು ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ. ಟಾಸ್ಕ್ ಒಂದಕ್ಕಾಗಿ ಮಂಜು ಅವರನ್ನು ಮನೆಗೆ ಕಳುಹಿಸಲಾಗಿದೆ.
‘ಕನ್ನಡ ಬಿಗ್ ಬಾಸ್ ಸೀಸನ್ 8’ರಲ್ಲಿ ಮಂಜು ಅವರು ಸಾಕಷ್ಟು ಗಮನ ಸೆಳೆದಿದ್ದರು. ಅವರ ಆಟದ ವೈಖರಿ ಅನೇಕರಿಗೆ ಇಷ್ಟವಾಗಿತ್ತು. ಅವರ ಕಾಮಿಡಿ ಪಂಚ್ ಕೂಡ ಹೈಲೈಟ್ ಆಗಿತ್ತು. ಈ ಸೀಸನ್ನಲ್ಲಿ ಹಳೆಯ ಸ್ಪರ್ಧಿಗಳಿಗೆ ಅವಕಾಶ ಇದೆ ಎಂದಾಗ ಮಂಜು ಅವರನ್ನು ಮತ್ತೆ ಕರೆಸಿ ಎನ್ನುವ ಬೇಡಿಕೆ ಅನೇಕರಿಂದ ಬಂದಿತ್ತು. ಆದರೆ, ಹಾಗಾಗಿಲ್ಲ. ಈಗ ಮಂಜು ಒಂದು ಟಾಸ್ಕ್ಗೋಸ್ಕರ ಮತ್ತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಂಟು ಆಟಗಾರರು ಇದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಆಟ ಮುಂದುವರಿಸಿದ್ದಾರೆ. ಈ ವಾರ ಎಲ್ಲರೂ ನಾಮಿನೇಟ್ ಆಗಿರುವುದರಿಂದ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಮಗಳ ಗಲ್ಲಕ್ಕೆ ಗಾಯ; ಬಿಗ್ ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್
ಈ ವಾರ ಸ್ಪರ್ಧಿಗಳಿಗೆ ಹಾವು ಏಣಿ ಆಟ ನೀಡಲಾಗಿದೆ. ಈ ಆಟಕ್ಕೆ ದಾಳ ಹಾಕಲು ಬಂದಿದ್ದಾರೆ ಮಂಜು ಪಾವಗಡ. ಈ ವೇಳೆ ಅವರು ಸಖತ್ ಕಾಮಿಡಿ ಮಾಡಿದ್ದಾರೆ. ಮಂಜುಗೆ ಅಮೂಲ್ಯ ಗೌಡ ‘ಐ ಲವ್ ಯೂ’ ಎಂದಿದ್ದಾರೆ. ಇದರಿಂದ ರಾಕೇಶ್ ಅಡಿಗಗೆ ಟೆನ್ಷನ್ ಶುರುವಾಗಿದೆ. ರಾಕೇಶ್ ಅಡಿಗ ಹಾಗೂ ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಮಂಜುಗೆ ಅಮೂಲ್ಯ ಐ ಲವ್ ಯೂ ಎಂದಿದ್ದು ಸಹಜವಾಗಿಯೇ ರಾಕೇಶ್ ಅವರ ಟೆನ್ಷನ್ ಹೆಚ್ಚಿಸಿದೆ. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Wed, 21 December 22