ಸ್ಟಾರ್ ಸುವರ್ಣದಲ್ಲಿ ಭಾನುವಾರ ಪುನೀತ್ ನಟನೆಯ ‘ಜೇಮ್ಸ್’ ಸಿನಿಮಾ; ಇದರಲ್ಲಿ ಇರೋದು ಯಾರ ಧ್ವನಿ?

| Updated By: ರಾಜೇಶ್ ದುಗ್ಗುಮನೆ

Updated on: Jul 14, 2022 | 6:09 PM

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಜೇಮ್ಸ್’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ, ಈ ಚಿತ್ರಕ್ಕೆ ಅವರು ಡಬ್ ಮಾಡಿರಲಿಲ್ಲ. ಈ ಕಾರಣಕ್ಕೆ ಶಿವರಾಜ್​ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಿದರು.

ಸ್ಟಾರ್ ಸುವರ್ಣದಲ್ಲಿ ಭಾನುವಾರ ಪುನೀತ್ ನಟನೆಯ ‘ಜೇಮ್ಸ್’ ಸಿನಿಮಾ; ಇದರಲ್ಲಿ ಇರೋದು ಯಾರ ಧ್ವನಿ?
ಪುನೀತ್
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’. ಈ ಚಿತ್ರ ಪುನೀತ್ ಬರ್ತ್​ಡೇ ಪ್ರಯುಕ್ತ ಮಾರ್ಚ್​ 17ರಂದು ಬಿಡುಗಡೆ ಆಯಿತು. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರ ಫ್ಯಾನ್ಸ್​ಗೆ ಇಷ್ಟವಾಯಿತು. ಪುನೀತ್ ಅವರ ಜತೆ ಫ್ಯಾನ್ಸ್ ಭಾವನಾತ್ಮಕವಾಗಿ ಕನೆಕ್ಟ್ ಆದರು. ಜೇಮ್ಸ್​’ (James Movie) ಬಗ್ಗೆ ಫ್ಯಾನ್ಸ್ ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದರು. ಈಗಾಗಲೇ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈಗ ಈ ಚಿತ್ರ ಕಿರುತೆರೆಯಲ್ಲಿ ಬರೋಕೆ ರೆಡಿ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭಾನುವಾರ 5:30ಕ್ಕೆ ಈ ಸಿನಿಮಾ ಪ್ರಸಾರ ಕಾಣಲಿದೆ.

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ‘ಜೇಮ್ಸ್’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ, ಈ ಚಿತ್ರಕ್ಕೆ ಅವರು ಡಬ್ ಮಾಡಿರಲಿಲ್ಲ. ಈ ಕಾರಣಕ್ಕೆ ಶಿವರಾಜ್​ಕುಮಾರ್ ಅವರು ಪುನೀತ್ ಪಾತ್ರಕ್ಕೆ ಧ್ವನಿ ನೀಡಿದರು. ಅಪ್ಪು ಧ್ವನಿಯನ್ನು ಸಾಕಷ್ಟು ಮಂದಿ ಮಿಸ್ ಮಾಡಿಕೊಂಡರು. ಸಿನಿಮಾ ರಿಲೀಸ್ ಆದ ಹಲವು ದಿನಗಳ ಬಳಿಕ ಈ ಚಿತ್ರ ಪುನೀತ್ ಧ್ವನಿಯಲ್ಲೇ ರೀ-ರೀಲೀಸ್ ಆಯಿತು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಜೇಮ್ಸ್​’ ಸಿನಿಮಾ ಪುನೀತ್ ಧ್ವನಿಯಲ್ಲೇ ಪ್ರಸಾರ ಕಾಣಲಿದೆ.

ಇದನ್ನೂ ಓದಿ
ಆಗಸ್ಟ್​​ನಲ್ಲಿ ‘ಲಕ್ಕಿ ಮ್ಯಾನ್​’ ಸಿನಿಮಾ ತೆರೆಗೆ; ಪುನೀತ್ ನೋಡಲು ಕಾದಿದ್ದಾರೆ ಫ್ಯಾನ್ಸ್​
‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್​ ಆಫ್​ ಡೇಂಜರ್​’; ಧೀರೇನ್ ರಾಮ್​ಕುಮಾರ್
Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಆತ್ಮೀಯತೆಯಿಂದ ಮಾತನಾಡಿದ ಶಿವರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್​ರಾಜ್​ಕುಮಾರ್; ಇಲ್ಲಿದೆ ವಿಡಿಯೋ

ಸ್ಟಾರ್ ಸುವರ್ಣ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಪುನೀತ್ ಅವರ ಧ್ವನಿ ಕೇಳಿಸಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಪ್ರೋಮೋಗೆ ಫ್ಯಾನ್ಸ್​ ‘ಮಿಸ್ ಯೂ ಅಪ್ಪು’ ಎಂದು ಕಮೆಂಟ್ ಮಾಡಿದ್ದಾರೆ. ಒಂದಷ್ಟು ಮಂದಿ ಪುನೀತ್ ಅವರ ಧ್ವನಿ ಕೇಳಿ ಖುಷಿಯಾಗಿದ್ದಾರೆ.


ಇದನ್ನೂ ಓದಿ: ಆಗಸ್ಟ್​​ನಲ್ಲಿ ‘ಲಕ್ಕಿ ಮ್ಯಾನ್​’ ಸಿನಿಮಾ ತೆರೆಗೆ; ಪುನೀತ್ ನೋಡಲು ಕಾದಿದ್ದಾರೆ ಫ್ಯಾನ್ಸ್​

‘ಜೇಮ್ಸ್’ ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಅವರು ಅತಿಥಿ ಪಾತ್ರ ಮಾಡಿದ ‘ಲಕ್ಕಿ ಮ್ಯಾನ್​’ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಈ ಸಿನಿಮಾದಲ್ಲಿ ದೇವರ ರೂಪದಲ್ಲಿ ಪುನೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ನಿರ್ಮಾಣದ ‘ಗಂಧದಗುಡಿ’ ಡಾಕ್ಯುಮೆಂಟರಿ ಬಗ್ಗೆಯೂ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಈ ಸಾಕ್ಷ್ಯ ಚಿತ್ರ ನವೆಂಬರ್​ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

Published On - 6:07 pm, Thu, 14 July 22