AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗಿಯದ ಸಂಕಷ್ಟ; ಜೈಲಿನಿಂದ ಹೊರ ಬರೋಕೆ ಹೊಸ ಮಾರ್ಗ ಅನ್ವೇಷಿಸಿದ ರಾಜ್​ ಕುಂದ್ರಾ

ಮಂಗಳವಾರ (ಆಗಸ್ಟ್​ 10) ರಾಜ್​ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈನ ಸೆಷನ್​ ಕೋರ್ಟ್​ ನಡೆಸಿತ್ತು. ಸದ್ಯ, ಈ ವಿಚಾರಣೆಯನ್ನು ಕೋರ್ಟ್​ ಆಗಸ್ಟ್​ 20ರವರೆಗೆ ಮುಂದೂಡಿದೆ.

ಮುಗಿಯದ ಸಂಕಷ್ಟ; ಜೈಲಿನಿಂದ ಹೊರ ಬರೋಕೆ ಹೊಸ ಮಾರ್ಗ ಅನ್ವೇಷಿಸಿದ ರಾಜ್​ ಕುಂದ್ರಾ
ರಾಜ್​ ಕುಂದ್ರಾ
TV9 Web
| Edited By: |

Updated on: Aug 14, 2021 | 6:37 PM

Share

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಬಂಧನಕ್ಕೆ ಒಳಗಾಗಿ ತಿಂಗಳಾಗುತ್ತಾ ಬಂದಿದೆ. ಅವರ ವಿರುದ್ಧ ಆರೋಪ ತುಂಬಾನೇ ಗಂಭೀರವಾಗಿದೆ. ಜತೆಗೆ ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಈ ಮಧ್ಯೆ, ಜೈಲಿನಿಂದ ಹೊರಬರೋಕೆ ರಾಜ್ ಕುಂದ್ರಾ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಮಂಗಳವಾರ (ಆಗಸ್ಟ್ 10) ರಾಜ್​ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈನ ಸೆಷನ್​ ಕೋರ್ಟ್​ ನಡೆಸಿತ್ತು. ಸದ್ಯ, ಈ ವಿಚಾರಣೆಯನ್ನು ಕೋರ್ಟ್​ ಆಗಸ್ಟ್​ 20ರವರೆಗೆ ಮುಂದೂಡಿದೆ. ರಾಜ್​ ಕುಂದ್ರಾಗೆ ಜಾಮೀನು ನೀಡಿದರೆ ಆಗುವ ತೊಂದರೆಗಳೇನು? ಅವರಿಗೆ ಏಕೆ ಜಾಮೀನು ನೀಡಬಾರದು ಎನ್ನುವ ಬಗ್ಗೆ ಮುಂಬೈ ಕ್ರೈಮ್​ ಬ್ರ್ಯಾಂಚ್​ನವರು 19 ಕಾರಣಗಳನ್ನು ನೀಡಿದ್ದರು. ಈ ಕಾರಣಕ್ಕೆ ಸೆಷನ್​ ಕೋರ್ಟ್​ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ರಾಜ್​ ಕುಂದ್ರಾ ಬಾಂಬೇ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಮೂಲಕ ಅವರು ಹೊಸ ಮಾರ್ಗ ಪ್ರಯತ್ನಿಸಿದ್ದಾರೆ.

ರಾಜ್​ ಕುಂದ್ರಾಗೆ ಜಾಮೀನು ನೀಡಬಾರದು. ಒಂದೊಮ್ಮೆ ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶಮಾಡಬಹುದು. ಅವರಿಗೆ ಬ್ರಿಟನ್​ ಪೌರತ್ವ ಇದೆ. ಹೀಗಾಗಿ, ಅವರು ನೇರವಾಗಿ ಬ್ರಿಟನ್​ಗೆ ತೆರಳಬಹುದು ಎಂದು ಪೊಲೀಸರು ಅನುಮಾನ ಹೊರ ಹಾಕಿದ್ದಾರೆ. ಹೀಗಾಗಿ, ರಾಜ್​ ಕುಂದ್ರಾಗೆ ಜಾಮೀನು ಸಿಗೋಕೆ ಸಾಧ್ಯವಾಗುತ್ತಿಲ್ಲ.

ಪಾರ್ನ್​ ಸಿನಿಮಾ ನಿರ್ಮಾಣ ಮಾಡಿ ಅದನ್ನು ಹಂಚುವ ಕೆಲಸವನ್ನು ರಾಜ್​ ಕುಂದ್ರಾ ಮಾಡುತ್ತಿದ್ದರು. ಆದರೆ, ತಾವು ನಿರ್ಮಾಣ ಮಾಡುತ್ತಿದ್ದುದು ನೀಲಿ ಚಿತ್ರ ಅಲ್ಲ ಎಂದಿದ್ದಾರೆ ರಾಜ್​ ಕುಂದ್ರಾ. ಈಗ ಅವರು ಜೈಲಿನಿಂದ ಹೊರ ಬರೋಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸಾಧ್ಯವಾಗುತ್ತಿಲ್ಲ. ಇನ್ನು, ರಾಜ್​ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಜನಪ್ರಿಯತೆಗೆ ಪೆಟ್ಟು ಬಿದ್ದಿದೆ. ಅನೇಕ ಬ್ರ್ಯಾಂಡ್​ಗಳು ಅವರ ಜತೆಗಿನ ಒಪ್ಪಂದ ರದ್ದು ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

500 ಕೋಟಿ ಬಜೆಟ್​ನಲ್ಲಿ ಕನ್ನಡ​ ಸಿನಿಮಾ; 640 ಎಕರೆಯಲ್ಲಿ ಸಿದ್ಧಗೊಳ್ಳಲಿದೆ ಅದ್ದೂರಿ ಸೆಟ್​

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ