
ರವಿಚಂದ್ರನ್ ಹಾಗೂ ರಚಿತಾ ರಾಮ್ (Rachita Ram) ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಜಡ್ಜ್ ಸ್ಥಾನದಲ್ಲಿ ಇರೋದು ಗೊತ್ತೇ ಇದೆ. ಇವರನ್ನು ವೇದಿಕೆ ಮೇಲೆ ಕರೆದ ಆ್ಯಂಕರ್ ನಿರಂಜನ್ ಅವರು ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಶಿಲ್ಪಾ ಶೆಟ್ಟಿ ಡ್ಯಾನ್ಸ್ ವಿಚಾರದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದರು, ನಂತರ ಒಂದು ವಾರದಲ್ಲಿ ಯಾವ ರೀತಿಯಲ್ಲಿ ಬದಲಾಗಿ ಬಿಟ್ಟರು ಎಂಬುದನ್ನು ರವಿಚಂದ್ರನ್ ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರವಿಚಂದ್ರನ್ ಅವರು ಅನೇಕ ಹೀರೋಯಿನ್ಗಳನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಇದರಲ್ಲಿ ಖುಷ್ಬೂ, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕರು ಇದ್ದಾರೆ. ಶಿಲ್ಪಾ ಶೆಟ್ಟಿ ಜೊತೆ ರವಿಚಂದ್ರನ್ ಅವರು ‘ಪ್ರೀತ್ಸೋದ್ ತಪ್ಪಾ’ ಎನ್ನುವ ಸಿನಿಮಾ ಮಾಡಿದ್ದರು. ರವಿಚಂದ್ರನ್ ನಿರ್ದೇಶನದ ಈ ಸಿನಿಮಾ 1998ರಲ್ಲಿ ತೆರೆಗೆ ಬಂತು. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಘಟನೆ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ್ದಾರೆ.
ಮೊದಲು ರಚಿತಾ ರಾಮ್ ಅವರಿಗೆ ಕೆಮಿಸ್ಟ್ರಿ ಬಗ್ಗೆ ಮಾತನಾಡಲಾಯಿತು. ‘ಯಾರ ಜೊತೆ ನಿಮಗೆ ಒಳ್ಳೆಯ ಕೆಮಿಸ್ಟ್ರಿ ಇದೆ ಎನಿಸುತ್ತದೆ ಹೇಳಿ’ ಎಂದು ರಚಿತಾ ರಾಮ್ ಅವರಿಗೆ ನಿರಂಜನ್ ಪ್ರಶ್ನೆ ಮಾಡಿದರು. ‘ದರ್ಶನ್ ಸರ್ ಜೊತೆ. ಅದನ್ನು ನಾವು ಹೇಳಬೇಕಿಲ್ಲ. ಇಡೀ ಕರ್ನಾಟಕದ ಜನತೆಗೆ ಗೊತ್ತು’ ಎಂದು ರಚಿತಾ ರಾಮ್ ಹೇಳಿದ್ದಾರೆ. ಈ ಹೇಳಿಕೆ ಅವರ ಅಭಿಮಾನಿಗೆ ಖುಷಿ ಕೊಟ್ಟಿದೆ.
‘ರವಿಚಂದ್ರನ್ ಅವರಿಗೆ ಈ ಪ್ರಶ್ನೆ ಕೇಳಬೇಕು ಎಂದರೆ ಮೂರು ಆಯ್ಕೆ ನೀಡಬೇಕು’ ಎಂದು ನಿರಂಜನ್ ಕೇಳಿದರು. ‘ಮೊದಲು ಖುಷ್ಬೂ, ಎರಡನೇ ಸ್ಥಾನದಲ್ಲಿ ಮೀನಾ ಹಾಗೂ ಮೂರನೇ ಸ್ಥಾನದಲ್ಲಿ ಶಿಲ್ಪಾ ಶೆಟ್ಟಿ ಇದಾರೆ’ ಎಂದರು ರವಿಚಂದ್ರನ್.
ಇದನ್ನೂ ಓದಿ: ‘ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಹೆಚ್ಚಾದಾಗ ಇದು ಬೇಕಿತ್ತಾ ಅನಿಸುತ್ತದೆ..’; ರವಿಚಂದ್ರನ್ ಅಸಮಾಧಾನ
‘ಡ್ಯಾನ್ಸ್ ಮಾಡುವಾಗ ಕೈ ಎಳೆದ ತಕ್ಷಣ ಬರ್ತಿದ್ರಾ’ ಎಂದು ನಿರಂಜನ್ ಕೇಳಿದರು. ‘ಮೊದಲ ಒಂದು ವಾರ ಬರಲಿಲ್ಲ. ಆ ಬಳಿಕ ರವಿಚಂದ್ರನ್ ಅಂದ್ರೆ ಏನು ಅಂತ ಗೊತ್ತಾಯ್ತು’ ಎಂದು ಅವರು ಹೇಳಿದ್ದಾರೆ. ಈ ಡೈಲಾಗ್ ಕೇಳಿ ಅಲ್ಲಿದ್ದವರೆಲ್ಲ ಜೋರಾಗಿ ಶಿಳ್ಳೆ ಹೊಡೆದರು. ರವಿಚಂದ್ರನ್ ಕೂಡ ಈ ಡೈಲಾಗ್ ಹೇಳಿದ ಬಳಿಕ ಖುಷಿಯಿಂದ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.