Seetha Raama Serial: ಅಶೋಕ್ ಆಡಿದ ಮಾತು ರಾಮ ಬದಲಾಗಲು ಸಹಾಯ ಮಾಡುತ್ತಾ? ಮತ್ತೆ ಪ್ರೀತಿಯಲ್ಲಿ ಬೀಳ್ತಾನಾ ರಾಮ್?

Seetha Raama Serial: ಆಫೀಸ್​ನಲ್ಲಿ ಫ್ರೆಂಡ್​ನನ್ನು ನೋಡಿದ ಸಿಹಿ, ಬಾಸ್ ಬಳಿ ರಾಮನನ್ನು ನನ್ನ ಜೊತೆ ಸುತ್ತಾಡಲು ಕಳಿಸಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ಅಶೋಕ್​ನಿಂದ ಒಪ್ಪಿಗೆಯೂ ಸಿಗುತ್ತದೆ. ಮೂವರು ಸೇರಿ ಸುತ್ತಾಡಲು ಹೊರಡುತ್ತಾರೆ. ಮುಂದೇನಾಗಬಹುದು? ಅಶೋಕ್ ಆಡಿದ ಮಾತು ರಾಮನನ್ನು ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತಾ?

Seetha Raama Serial: ಅಶೋಕ್ ಆಡಿದ ಮಾತು ರಾಮ ಬದಲಾಗಲು ಸಹಾಯ ಮಾಡುತ್ತಾ? ಮತ್ತೆ ಪ್ರೀತಿಯಲ್ಲಿ ಬೀಳ್ತಾನಾ ರಾಮ್?
ವೈಷ್ಣವಿ ಗೌಡ, ಗಗನ್​ ಚಿನ್ನಪ್ಪ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​

Updated on:Aug 28, 2023 | 11:07 PM

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 31: ಹಬ್ಬದ ಊಟಕ್ಕೆ ಫ್ರೆಂಡ್​ಗಾಗಿ ಕಾದು ಕುಳಿತ ಸಿಹಿಗೆ, ಶ್ರೀರಾಮ ಬೇಸರ ಮಾಡಲು ಇಷ್ಟ ಪಡದೇ ಅವಳಿಗಾಗಿ ಬರುತ್ತಾನೆ. ಆದರೆ ಮನೆಯಲ್ಲಿಯೇ ಹಬ್ಬದ ಊಟ ಮಾಡಿ ಬಂದವನಿಗೆ ಮತ್ತೊಮ್ಮೆ ಊಟ ಮಾಡುವುದು ಕಷ್ಟವಾದರೂ ಸಿಹಿಗಾಗಿ ಒಪ್ಪಿಕೊಳ್ಳುತ್ತಾನೆ. ತನ್ನ ಫ್ರೆಂಡ್​ಗಾಗಿ ಅವಳೇ ಕೈ ತುತ್ತು ಮಾಡಿ ತಿನ್ನಿಸುತ್ತಾಳೆ. ಅವಳ ಪ್ರೀತಿಗೆ ಶ್ರೀರಾಮನೇ ಕರಗಿ ಹೋಗುತ್ತಾನೆ. ಇನ್ನು ಹಬ್ಬದ ಸಂಭ್ರಮ ಹೆಚ್ಚಿಸಲು ಎಲ್ಲರೂ ಸೇರಿ ಅಂತ್ಯಾಕ್ಷರಿ ಆಡುತ್ತಾರೆ. ಬಳಿಕ ರಾಮನಿಗೆ ಅಶೋಕನ ಫೋನ್ ಬಂದು ಮನೆಗೆ ಹೊರಡುತ್ತಾನೆ. ಅವನ ಗುಣವನ್ನು ನೋಡಿ ಅಜ್ಜಿ, ತಾತ ಅವನ ಗುಣಗಾನ ಮಾಡುತ್ತಾರೆ.

ಇನ್ನು ರುದ್ರ ಪ್ರತಾಪ, ಸೀತಾ ಬಳಿ ಮಾತನಾಡಲು ಒಂದು ನೆಪ ಹುಡುಕಿ ಫೋನ್ ಮಾಡಿ ತನ್ನ ಆಫೀಸ್​ಗೆ ಬರುವಂತೆ ಹೇಳುತ್ತಾಳೆ. ಆದರೆ ಸಿಹಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದು ಹೇಳಿದ್ದ ಸೀತಾ ಆರ್.ಪಿಯ ಮೋಸಕ್ಕೆ ಕತ್ತು ತೂಗಿಸುತ್ತಾಳೆ. ಮಗಳಿಗೆ ಬೇಸರ ಮಾಡಲು ಇಷ್ಟವಿಲ್ಲದೇ ಪ್ಲಾನ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸಿಹಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾಳೆ.

ಇದನ್ನೂ ಓದಿ: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?

ಇನ್ನು, ರಾಮ್ ಮನೆಯವರ ಮಧ್ಯೆ ಇರುವ ಗೊಂದಲ ಪರಿಹರಿಸಿ, ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಬೇಕು ಎಂದು ಅಶೋಕ್ ಬಳಿ ಹೇಳುತ್ತಾನೆ. ಮನೆಯ ಕೆಲವು ವಿಚಾರ ಅಶೋಕ್​ನಿಗೆ ಗೊತ್ತಿದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುತ್ತಾನೆ. ರಾಮನಿಗೆ ಸೀತಾ ಅವರು ಇರುವ ವಠಾರದ ಜನರ ಅವರ ಬಾಂಧವ್ಯ ನೋಡಿ ತಮ್ಮ ಮನೆಯಲ್ಲಿ ಆ ಸಂತೋಷವಿಲ್ಲವಲ್ಲ ಎಂದುಕೊಳ್ಳುತ್ತಾನೆ. ಇದಕ್ಕೆಲ್ಲಾ ಪರಿಹಾರ ನೀನು ಮದುವೆಯಾಗುವುದು ಎಂದು ಅಶೋಕ್ ಹೇಳುತ್ತಾನೆ. ಎಲ್ಲೇ ಹೋದರೂ ಅದೇ ವಿಷಯಕ್ಕೆ ಬರುವುದನ್ನು ನೋಡಿ ರಾಮನಿಗೆ ಬೇಸರವಾಗುತ್ತದೆ. ಜೊತೆಗೆ ಮಲೇಷ್ಯಾದಿಂದ ಇಂಡಿಯಾಗೆ ಬರುವಾಗ ತಾನು ಹೇಳಿದ ಮಾತನ್ನು ಅಶೋಕ್ ನೆನಪಿಸುತ್ತಾನೆ. ರಾಮನಿಗೆ ಭಾರತಕ್ಕೆ ಬಂದಾಗ ಮೊದಲು ಕಾಣುವ ಹುಡುಗಿಯ ಮೇಲೆ ಪ್ರೀತಿಯಾಗುತ್ತದೆ ಎಂದಿರುತ್ತಾನೆ. ಹಾಗೆ ಮೊದಲು ನೋಡಿದ ಹುಡುಗಿ ಸೀತಾ ಆಗಿರುವುದರಿಂದ ಅವಳ ಬಗ್ಗೆ ಮತ್ತು ಸಿಹಿಯ ಬಗ್ಗೆ ಮಾತನಾಡುತ್ತಾನೆ. ದೇವರೆ ನಿಮ್ಮನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾನೆ ಎನ್ನುತ್ತಾನೆ. ಇದೆಲ್ಲವೂ ರಾಮನ ಕಿವಿಗೆ ಮಾತ್ರ ಬೀಳುವುದಿಲ್ಲ.

ಇದನ್ನೂ ಓದಿ: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?

ರಾಮ್, ಅಶೋಕ್ ಆಫೀಸ್​ನಲ್ಲಿ ಇರುವಾಗಲೇ ಸಿಹಿ, ಸೀತಾ ಬಂದಿರುತ್ತಾರೆ. ಫ್ರೆಂಡ್ ನೋಡಿದ ಸಿಹಿ, ಬಾಸ್ ಬಳಿ ರಾಮನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ಅಶೋಕ್​ನಿಂದ ಒಪ್ಪಿಗೆಯೂ ಸಿಗುತ್ತದೆ. ಮೂವರು ಸೇರಿ ಸುತ್ತಾಡಲು ಹೊರಡುತ್ತಾರೆ. ಅಶೋಕ್ ಆಡಿದ ಮಾತು ರಾಮ್ ಬದಲಾವಾಗುವಂತೆ ಮಾಡುತ್ತಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:59 pm, Mon, 28 August 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್