ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಅಪ್​ಡೇಟ್

Seetha Raama Serial: ಸೀತಾ ರಾಮ ಧಾರಾವಾಹಿಯು ಮೇ 30ರಂದು ತನ್ನ 490ನೇ ಮತ್ತು ಅಂತಿಮ ಎಪಿಸೋಡ್‌ನೊಂದಿಗೆ ಕೊನೆಗೊಂಡಿತು. ಆದರೆ, ಅಂತಿಮ ಎಪಿಸೋಡ್‌ನಲ್ಲಿ ಅಚ್ಚರಿಯ ಸುದ್ದಿಯೊಂದನ್ನು ಘೋಷಿಸಲಾಯಿತು. ಧಾರಾವಾಹಿಗೆ ಎರಡನೇ ಸೀಸನ್ ಬರಲಿದೆ ಎಂದು ತಿಳಿಸಲಾಗಿದೆ. ಈ ಧಾರಾವಾಹಿಯು ಮರಾಠಿ ಧಾರಾವಾಹಿಯ ರಿಮೇಕ್ ಆಗಿದೆ.

ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಅಪ್​ಡೇಟ್
ಸೀತಾ ರಾಮ
Updated By: ರಾಜೇಶ್ ದುಗ್ಗುಮನೆ

Updated on: May 31, 2025 | 7:53 AM

‘ಸೀತಾ ರಾಮ’ ಧಾರಾವಾಹಿಯು (Seetha Raama Serial) ತನ್ನ ಕೊನೆಯ ಎಪಿಸೋಡ್​ನ ಮೇ 30ರಂದು ಪ್ರಸಾರ ಮಾಡಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯು ಬರೋಬ್ಬರಿ 490 ಎಪಿಸೋಡ್​ಗಳನ್ನು ಪ್ರಸಾರ ಮಾಡಿತ್ತು. ಈಗ ಧಾರಾವಾಹಿಯ ಕೊನೆಯ ದಿನದ ಎಪಿಸೋಡ್​ನಲ್ಲಿ ಒಂದು ಅಚ್ಚರಿಯ ಮಾಹಿತಿಯನ್ನು ತಂಡದವರು ನೀಡಿದ್ದನ್ನು ನೀವು ಕಾಣಬಹುದು. ‘ಸೀತಾ ರಾಮ’ ಧಾರಾವಾಹಿಯು ಇಲ್ಲಿಗೆ ಕೊನೆ ಆಗಿಲ್ಲ. ಈ ಧಾರಾವಾಹಿಗೆ ಮತ್ತೊಂದು ಸೀಸನ್ ಬರಲಿದೆ ಎನ್ನುವ ಸೂಚನೆಯನ್ನು ತಂಡದವರು ನೀಡಿದ್ದಾರೆ.

‘ಸೀತಾ ರಾಮ’ ಧಾರಾವಾಹಿ 2023ರ ಜುಲೈ 17ರಂದು ಮೊದಲ ಎಪಿಸೋಡ್ ಪ್ರಸಾರ ಕಂಡಿತು. ಮೇ 30ರಂದು ಧಾರಾವಾಹಿ ಕೊನೆಯ ಎಪಿಸೋಡ್ ಪ್ರಸಾರ ಆಗಿದೆ. ಈ ಧಾರಾವಾಹಿಯು ಮರಾಠಿಯ ‘ಮಜಿ ತುಜಿ ರೇಶಿಮಾಗಢ’ ಧಾರಾವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿ ಆರಂಭದಲ್ಲಿ ಮೆಚ್ಚುಗೆ ಪಡೆಯಿತು. ಆದರೆ, ಕೊನೆಯ ಹಂತದಲ್ಲಿ ಧಾರಾವಾಹಿಯು ಸಮಯ ಬದಲಾವಣೆ ಮತ್ತು ಕಥೆಯಲ್ಲಿ ಆದ ಕೆಲವು ಬದಲಾವಣೆ ಸಿಟ್ಟನ್ನು ತರಿಸಿತು.

ಇದನ್ನೂ ಓದಿ
ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ಸೀತಾ ರಾಮ’ ಧಾರಾವಾಹಿ ಮತ್ತೆ ಬರಲಿದೆಯಂತೆ. ಈ ಬಗ್ಗೆ ಧಾರಾವಾಹಿಯ ಕ್ಲೈಮ್ಯಾಕ್ಸ್​ನಲ್ಲಿ ಮಾಹಿತಿ ನೀಡಲಾಗಿದೆ. ‘ಮರಳಿ ಬರಲಿದ್ದಾರೆ ಸೀತಾ ರಾಮ’ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಅಂದರೆ ಮುಂದಿನದ ದಿನಗಲ್ಲಿ ಎರಡನೇ ಪಾರ್ಟ್ ಮಾಡುವ ಉದ್ದೇಶ ಅವರಿಗೆ ಇದೆ. ಆದರೆ, ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದಂತೂ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.

ಈ ಮೊದಲು ‘ಗಟ್ಟಿ ಮೇಳ’ ಧಾರಾವಾಹಿಯು ಕೊನೆಗೊಂಡಿತ್ತು ಮತ್ತು ಇದು ಕೊನೆಗೊಳ್ಳುವಾಗ ಈ ಧಾರಾವಾಹಿಗೆ ಮತ್ತೊಂದು ಪಾರ್ಟ್ ಬರಲಿದೆ ಎನ್ನುವ ಸೂಚನೆ ನೀಡಲಾಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಈಗ ‘ಸೀತಾ ರಾಮ’ ಧಾರಾವಾಹಿ ತಂಡದವರು ನೀಡದ ಭರವಸೆಯೂ ಇದೇ ರೀತಿ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಕೊನೆ ಆದ ‘ಸೀತಾ ರಾಮ’ ಧಾರಾವಾಹಿ; ಭಾರ್ಗವಿಯ ಗತಿ ಏನಾಯಿತು?

‘ಸೀತಾ ರಾಮ’ ಧಾರಾವಾಹಿಯ ಕೊನೆಯಲ್ಲಿ ಭಾರ್ಗವಿ ಕೆಟ್ಟವಳು ಎಂದು ಗೊತ್ತಾಗಿದೆ. ಈ ಕಾರಣದಿಂದಲೇ ಆಕೆಯನ್ನು ಜೈಲಿಗೆ ಹಾಕಲಾಗಿದೆ. ಒಂದೊಮ್ಮೆ ಎರಡನೇ ಪಾರ್ಟ್​ ಮಾಡಿದರೆ ಇದರ ಕಥೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆದರೆ, ಸದ್ಯಕ್ಕಂತೂ ಹಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.