ಸತ್ಯನಿಂದ ರಿವೀಲ್ ಆಗಲಿದೆ ಭಾರ್ಗವಿಯ ನಿಜವಾದ ಮುಖ? ಕ್ಯಾಮೆರಾದಲ್ಲಿದೆ ದೊಡ್ಡ ರಹಸ್ಯ?
‘ಸೀತಾ ರಾಮ’ ಧಾರಾವಾಹಿಯಲ್ಲಿ ಭಾರ್ಗವಿಯ ನಿಜ ಸ್ವರೂಪ ಮತ್ತು ರಾಮ್ ಪೋಷಕರ ಸಾವಿನ ರಹಸ್ಯ ಬಯಲಾಗುವ ನಿರೀಕ್ಷೆಯಿದೆ. ಒಂದು ಹಳೆಯ ಕ್ಯಾಮೆರಾ ಮಹತ್ವದ ಸುಳಿವುಗಳನ್ನು ಹೊಂದಿರಬಹುದು ಎಂದು ನಂಬಲಾಗಿದೆ. ಭಾರ್ಗವಿ ಮುಖವಾಡ ಕಳಚುವ ದಿನ ಬಂದಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಸೀತಾ ರಾಮ’ ಧಾರಾವಾಹಿಯಲ್ಲಿ (Seetha Raama) ವಿವಿಧ ತಿರುವುಗಳು ಎದುರಾಗುತ್ತಿವೆ. ಅದರಲ್ಲೂ ಧಾರಾವಾಹಿಯ ವಿಲನ್ ಎನಿಸಿಕೊಂಡಿರುವ ಭಾರ್ಗವಿಯ ಒಳ್ಳೆಯ ಮುಖವಾಡವು ಕಳಚುವ ದಿನ ಹತ್ತಿರ ಬಂದಿತೇ ಎನ್ನುವ ಪ್ರಶ್ನೆಯೂ ಮೂಡಿದೆ. ಒಂದು ಕಡೆ ಸಿಹಿಯ ಆತ್ಮ ಭಾರ್ಗವಿಗೆ ಮುಳುವಾಗುತ್ತಿದೆ. ಅವಳಿಗೆ ಗೊತ್ತಿಲ್ಲದೆ ಸಾಕಷ್ಟು ವಿಚಾರಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ ಸತ್ಯನ ಕಂಬ್ಯಾಕ್ ಆಗಿದ್ದು, ರಾಮ್ನ ತಂದೆ-ತಾಯಿಯ ಸಾವಿನ ವಿಚಾರ ರಿವೀಲ್ ಆಗುವ ದಿನ ಸಮೀಪಿಸಿತೇ ಎನ್ನುವ ಪ್ರಶ್ನೆ ಮೂಡಿದೆ.
‘ಸೀತಾ ರಾಮ’ ಧಾರಾವಾಹಿ ಸಮಯ ಪ್ರಸಾರ ಬದಲಾಗಿದೆ. ಈಗ ಧಾರಾವಾಹಿಯು ಸಂಜೆ 5.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಅವಧಿಯಲ್ಲಿ ಧಾರಾವಾಹಿ ಪ್ರಸಾರ ಕಾಣುತ್ತಿದೆ ಎಂದಾಗ ಅದಕ್ಕೆ ಹೆಚ್ಚಿನ ಎಫರ್ಟ್ ಬೇಕಾಗುತ್ತದೆ. ಈಗ ‘ಸೀತಾ ರಾಮ’ ತಂಡದವರು ಹೆಚ್ಚು ಕಾಳಜಿ ವಹಿಸಿ, ಟ್ವಿಸ್ಟ್ಗಳನ್ನು ಕೊಟ್ಟು ವೀಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಾ ಇದೆ.
ಸಿಹಿ ಆತ್ಮಕ್ಕೆ ಶಕ್ತಿ ಬಂದಿದೆ. ಹೀಗಾಗಿ, ವೈರಿಗಳಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಇದರಿಂದ ಭಾರ್ಗವಿ ಚಿಂತೆಗೆ ಒಳಗಾಗಿದ್ದಾಳೆ. ಹೀಗಿರುವಾಗಲೇ ಸದಾ ಕುಡಿದುಕೊಂಡೇ ಇರುವ ಸತ್ಯನು ಈಗ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾನೆ. ರಾಮ್ನ ತಾಯಿಯ ಹತ್ಯೆ ಆಗಿದೆ. ಆ ಸಾವಿಗೆ ಸತ್ಯನೇ ಕಾರಣ ಎಂದು ಸೂರ್ಯ ಪ್ರಕಾಶ್ ದೇಸಾಯಿ ಅಂದುಕೊಂಡಿದ್ದಾನೆ. ಆದರೆ, ಈಗ ಸತ್ಯ ಹೇಳುವ ದಿನ ಸಮೀಪಿಸಿದೆ.
View this post on Instagram
ಸೂರ್ಯ ಪ್ರಕಾಶ್ ದೇಸಾಯಿ ಎದುರು ಬಂದ ಸತ್ಯ ನಿಜವಾಗಿ ನಡೆದಿದ್ದು ಏನು ಎಂದು ಹೇಳಲು ಹೊರಟಿದ್ದಾನೆ. ‘ನಾನು ನಿಮಗೆ ನಿಜ ಹೇಳ್ತೀನಿ. ಅಣ್ಣ-ಅತ್ಗೆ ಸಾವಿಗೆ ನಾನು ಕಾರಣನಲ್ಲ. ಸತ್ಯ ಮುಚ್ಚಿಡಬಹುದು. ಆದರೆ ಒಂದು ದಿನ ಜ್ವಾಲಾಮುಖಿಯಾಗಿ ಎದ್ದು ಬರುತ್ತದೆ’ ಎನ್ನುತ್ತಾನೆ ಸತ್ಯ. ಇದೇ ಸಮಯಕ್ಕೆ ಸತ್ಯನಿಗೆ ಸೇರಿದ ಹಳೆಯ ಕ್ಯಾಮೆರಾ ಒಂದು ಕಥಾ ನಾಯಕ ರಾಮ್ಗೆ ಸಿಗುತ್ತದೆ.
ಇದನ್ನೂ ಓದಿ: ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್ರಾಜ್ನಲ್ಲಿ ‘ಸೀತಾ ರಾಮ’ ತಂಡ
ಈ ಕ್ಯಾಮೆರಾದಲ್ಲಿ ಏನೆಲ್ಲ ಇದೆ ಎಂದು ತಿಳಿದುಕೊಳ್ಳುವ ವೀಕ್ಷಕರಿಗೆ ಮೂಡಿದೆ. ರಾಮ್ ತಂದೆ-ತಾಯಿ ಸಾವಿಗೆ ಕಾರಣರಾದವರ ಬಗ್ಗೆ ಈ ಕ್ಯಾಮೆರಾದಲ್ಲಿ ಮಾಹಿತಿ ಇರಬಹುದು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:09 am, Tue, 1 April 25