ಶಿವಣ್ಣನಿಗೆ ಸರ್ಜರಿ ಯಶಸ್ಸು ಕಾಣಲೆಂದು ಅಭಿಮಾನಿಗಳಿಂದ ಪೂಜೆ ಪುನಸ್ಕಾರ

|

Updated on: Dec 24, 2024 | 8:06 AM

ಶಿವರಾಜ್​ಕುಮಾರ್ ಅವರು ಸ್ಟ್ರಾಂಗ್ ವ್ಯಕ್ತಿ. ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ. ಆದಾಗ್ಯೂ ಅವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇಂದು ಸರ್ಜರಿ ನಡೆಯುತ್ತಿದೆ. ಈಗ ಅವರ ಅಭಿಮಾನಿಗಳು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ.

ಶಿವಣ್ಣನಿಗೆ ಸರ್ಜರಿ ಯಶಸ್ಸು ಕಾಣಲೆಂದು ಅಭಿಮಾನಿಗಳಿಂದ ಪೂಜೆ ಪುನಸ್ಕಾರ
ಶಿವಣ್ಣನಿಗಾಗಿ ವಿಶೇಷ ಪೂಜೆ
Follow us on

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇಂದು (ಡಿಸೆಂಬರ್ 24) ಅಮೆರಿಕದ ಮಿಯಾಮಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ನಡೆಯಲಿದೆ. ಸರ್ಜರಿ ಯಶಸ್ವಿ ಕಾಣಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಹಲವು ಕಡೆಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಶಿವರಾಜ್​ಕುಮಾರ್ ಅವರು ಸ್ಟ್ರಾಂಗ್ ವ್ಯಕ್ತಿ. ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ. ಆದಾಗ್ಯೂ ಅವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಅವರು ಕೈಕಟ್ಟಿ ಕೂರಿಲ್ಲ. ಬದಲಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಅವರು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಹಂತದಲ್ಲಿ ಚಿಕಿತ್ಸೆ ಪಡೆದಿರೋ ಅವರು ಈಗ ಅಮೆರಿಕಕ್ಕೆ ತೆರಳಿದ್ದಾರೆ.

ಡಿಸೆಂಬರ್ 18ರಂದು ಶಿವರಾಜ್​ಕುಮಾರ್ ಅವರು ಪತ್ನಿ ಗೀತಾ ಶಿವರಾಜ್​ಕುಮಾರ್ ಜೊತೆ ಅಮೆರಿಕ ತೆರಳಿದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ಅನೇಕ ಗಣ್ಯರು ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿ ವಿಶ್ ತಿಳಿಸಿದ್ದಾರೆ. ಅವರಿಗೆ ಸರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ. ಈಗ ಅವರ ಅಭಿಮಾನಿಗಳು ಕೂಡ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಚಾಮರಾಜನಗರದ ಶಿವಣ್ಣ ಅಭಿಮಾನಿಗಳಿಂದ ಇಂದು ಈಶ್ವರನಿಗೆ ವಿಶೇಷ ಪೂಜೆ ನಡೆದಿದೆ. ಮೈಸೂರಿನ ವಿದ್ಯಾರ್ಥಿಗಳು ಕೂಡ ಶಿವಣ್ಣ ಅರೋಗ್ಯ ಗುಣ ಮುಖ ಆಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

ಇದನ್ನೂ ಓದಿ: ‘ಅಪ್ಪನ ಹೆಸರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಶಿವರಾಜ್​ಕುಮಾರ್ ಒಳ್ಳೆಯ ಉದಾಹರಣೆ’; ಧನುಷ್

ಶಿವರಾಜ್​ಕುಮಾರ್ ಅವರಿಗೆ ಇಂದು ಸರ್ಜರಿ ನಡೆಯಲಿದೆ. ಸರ್ಜರಿ ನಡೆದ ಬಳಿಕ ತಿಂಗಳುಗಳ ಕಾಲ ಅಲ್ಲಿಯೇ ಇರಲಿದ್ದಾರೆ. ಆ ಬಳಿಕ ಭಾರತಕ್ಕೆ ಮರಳಲಿದ್ದಾರೆ. ಜೂನ್ ವೇಳೆಗೆ ಶಿವಣ್ಣ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ. ಈಗಾಗಲೇ ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅವರ ನಟನೆಯ ‘45’ ಚಿತ್ರದ ಕೆಲಸಗಳು ಕೂಡ ಪೂರ್ಣಗೊಂಡಿದ್ದು, ಶೀಘ್ರವೇ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Tue, 24 December 24