‘ಇನ್ಮುಂದೆ ರಕ್ತ ಕೊಡ್ತೀನಿ’; ಪಕ್ಷಪಾತ ಮಾಡಿದ ಸ್ನೇಹಿತ್ ನಿರ್ಧಾರಕ್ಕೆ ಹೊತ್ತಿತು ಕಿಡಿ

|

Updated on: Dec 05, 2023 | 10:25 AM

ಸಿರಿ ಅವರು ವಿನಯ್ ಹಾಗೂ ಸ್ನೇಹಿತ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಅವರಿಂದ ಸಿರಿಗೆ ಅನ್ಯಾಯ ಆಗುತ್ತಿದೆ. ಈಗಲೂ ಅವರು ಸ್ನೇಹಿತ್ ಹಾಗೂ ವಿನಯ್ ಕಾರಣದಿಂದ ನಾಮಿನೇಟ್ ಆಗಿದ್ದಾರೆ.

‘ಇನ್ಮುಂದೆ ರಕ್ತ ಕೊಡ್ತೀನಿ’; ಪಕ್ಷಪಾತ ಮಾಡಿದ ಸ್ನೇಹಿತ್ ನಿರ್ಧಾರಕ್ಕೆ ಹೊತ್ತಿತು ಕಿಡಿ
ಬಿಗ್ ಬಾಸ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಾಕಷ್ಟು ಚರ್ಚೆ ಆಗುತ್ತಿರುವ ಸ್ಪರ್ಧಿ ಸ್ನೇಹಿತ್ ಗೌಡ (Snehith Gowda). ಅವರು ಗ್ರೂಪಿಸಂ ಮಾಡುತ್ತಿರುವುದು ಮೊದಲಿನಿಂದಲೂ ನಡೆಯುತ್ತಲೇ ಬರುತ್ತಿದೆ. ಈಗ ಬಿಗ್ ಬಾಸ್ ನೀಡಿದ ಅಧಿಕಾರದಿಂದ ತಮ್ಮ ಗ್ರೂಪ್​ ಸದಸ್ಯರನ್ನು ಸೇವ್ ಮಾಡಿದ್ದಾರೆ. ಅವರ ಗ್ರೂಪ್​ನ ನಮ್ರತಾ ಹಾಗೂ ವಿನಯ್​ನ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಇದಕ್ಕೆ ಸಿರಿ ಅವರು ನೇರವಾಗಿ ಕಿಡಿಕಾರಿದ್ದಾರೆ.

ಎರಡು ಸ್ಪರ್ಧಿಗಳು ಬಂದು ಕ್ಯಾಪ್ಟನ್ ಸ್ನೇಹಿತ್ ಎದುರು ನಿಲ್ಲಬೇಕು. ತಾವು ಯಾಕೆ ಸೇವ್ ಆಗಬೇಕು ಎಂಬುದನ್ನು ಅವರು ವಾದಿಸಬೇಕು. ಅವರು ಒಬ್ಬರನ್ನು ಸೇವ್ ಮಾಡಬೇಕಿತ್ತು. ಮೊದಲು ಬಂದಿದ್ದು ಪ್ರತಾಪ್ ಹಾಗೂ ನಮ್ರತಾ. ಎಷ್ಟೇ ಮಾತನಾಡಿದರೂ ನಮ್ರತಾನೇ ಸೇವ್ ಆಗೋದು ಅನ್ನೋದು ಪ್ರತಾಪ್​ಗೆ ಸ್ಪಷ್ಟವಾಗಿ ಗೊತ್ತಿತ್ತು. ಈ ಕಾರಣಕ್ಕೆ ಅವರು ವಾದ ಮಾಡುವ ಗೋಜಿಗೆ ಹೋಗಲಿಲ್ಲ. ನಮ್ರತಾ ಅವರನ್ನು ಸ್ನೇಹಿತ್ ಸೇವ್ ಮಾಡಿದರು.

ಆ ಬಳಿಕ ಬಂದಿದ್ದು ವಿನಯ್ ಹಾಗೂ ಸಿರಿ. ಇವರ ಪೈಕಿ ವಿನಯ್​ನೇ ಸೇವ್ ಆಗೋದು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಅಂದುಕೊಂಡಂತೆ ವಿನಯ್​ನ ಸ್ನೇಹಿತ್ ಸೇವ್ ಮಾಡಿದರು. ವಿನಯ್​ನ ಸೇವ್ ಮಾಡುವಾಗ, ‘ವಿನಯ್ ಆಟಕ್ಕಾಗಿ ರಕ್ತ, ಬೆವರು ನೀಡಿದ್ದಾರೆ’ ಎಂದರು. ಈ ಮಾತನ್ನು ಕೇಳಿ ಸಿರಿಗೆ ಕೋಪ ಬಂತು. ‘ಮುಂದಿನ ವಾರದಿಂದ ನಾವೂ ರಕ್ತ ಕೊಡುತ್ತೇವೆ’ ಎಂದರು.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ, ಪ್ರತಾಪ್, ಸಿರಿ, ಕಾರ್ತಿಕ್ ಹಾಗೂ ತನಿಷಾ, ಪವಿ ಹಾಗೂ ಅವಿನಾಶ್ ನಾಮಿನೇಟ್ ಆಗಿದ್ದಾರೆ. ಸುದೀಪ್ ಕಡೆಯಿಂದ ಸ್ನೇಹಿತ್ ಹಾಗೂ ಮೈಕಲ್ ನಾಮಿನೇಟ್ ಆಗಿರುವುದರಿಂದ ಇವರು ಕೂಡ ನಾಮಿನೇಷನ್​ ಲಿಸ್ಟ್​​ಗೆ ಸೇರಿದ್ದಾರೆ. ಈ ಪೈಕಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: ಸಂಗೀತಾ ಅಥವಾ ವಿನಯ್, ಮನೆಯ ದುರಹಂಕಾರಿ ಯಾರು?

ಸಿರಿ ಅವರು ವಿನಯ್ ಹಾಗೂ ಸ್ನೇಹಿತ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಈ ಮೊದಲು ಕೂಡ ಅವರನ್ನು ಸ್ನೇಹಿತ್ ಹಾಗೂ ವಿನಯ್ ಅವರು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗೆ ಇಟ್ಟಿದ್ದು ಇದೆ. ಈಗ ಅವರಿಗೆ ಮತ್ತೆ ಇದೇ ರೀತಿಯ ಪರಿಸ್ಥಿತಿ ಬಂದೊದಗಿದೆ. ಅವರು ಮುಂದೆ ಯಾವ ರೀತಿಯಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Tue, 5 December 23