‘ಇದೆಲ್ಲ ಅಲ್ಲಿದ್ದವರ ಹತ್ರ ಇಟ್ಕೊಳಿ, ನನ್ನ ಹತ್ತಿರ ಅಲ್ಲ’; ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

| Updated By: ಮದನ್​ ಕುಮಾರ್​

Updated on: Jan 07, 2024 | 9:17 AM

‘ಬಿಗ್ ಬಾಸ್ ಮನಸ್ಸಿಗೆ ಹತ್ತಿರವಾದ ಶೋ. ಹಾಗಂತ ನನ್ನ ವ್ಯಕ್ತಿತ್ವ ಪರೀಕ್ಷೆ ಮಾಡಬಾರದು. ಕೂರಿಸಿಕೊಂಡು ಮಾತಾಡ್ತಾ ಇದೀನಿ. ಅಲ್ಲಿಂದ ಗೌರವ ಆರಂಭ ಆಗುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದರು. ಸುದೀಪ್ ಅವರ ಮಾತನ್ನು ಕೇಳಿ ಮೈಕಲ್ ಸೈಲೆಂಟ್ ಆಗಿ ತಲೆ ಆಡಿಸಿದರು.

‘ಇದೆಲ್ಲ ಅಲ್ಲಿದ್ದವರ ಹತ್ರ ಇಟ್ಕೊಳಿ, ನನ್ನ ಹತ್ತಿರ ಅಲ್ಲ’; ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್
Follow us on

ಕಿಚ್ಚ ಸುದೀಪ್ (Sudeep) ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗುತ್ತದೆ. ಪ್ರೀತಿಯಿಂದ ಮಾತನಾಡಿದರೆ ಅವರು ಪ್ರೀತಿಯಿಂದ ಉತ್ತರಿಸುತ್ತಾರೆ. ಹಾಗಂತ ಸ್ವಲ್ಪ ನಕ್ರಾ ಮಾಡಿದರೂ ಅವರು ಸುಮ್ಮನೆ ಇರೋದಿಲ್ಲ. ದೊಡ್ಡಪರದೆ ಮೇಲೆ ಇದೆಲ್ಲ ಹೆಚ್ಚು ತಿಳಿಯುವುದಿಲ್ಲ. ಜನಕ್ಕೆ ಇದು ಗೊತ್ತಾಗೋದು ಬಿಗ್ ಬಾಸ್ (Bigg Boss Kannada) ವೇದಿಕೆ ಮೇಲೆ. ಕಿಚ್ಚ ಸುದೀಪ್ ಅವರು ಪ್ರತಿ ಸ್ಪರ್ಧಿಗಳನ್ನು ಪ್ರೀತಿಯಿಂದ, ಗೌರವದಿಂದ ನೋಡುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ಅವರು ಸ್ವಲ್ಪ ಉಲ್ಟಾ ಮಾತನಾಡಿದರೂ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಶನಿವಾರದ (ಜನವರಿ 6) ಎಪಿಸೋಡ್​ನಲ್ಲಿ ಅದೇ ರೀತಿಯ ಘಟನೆ ನಡೆದಿದೆ. ಕಿಚ್ಚ ಸುದೀಪ್ ಅವರು ಇದಕ್ಕೆ ಸಿಟ್ಟಾಗಿದ್ದಾರೆ.

‘ಸಂಗೀತಾ ಅವರ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಯಿತು, ಯಾರಿಗೆ ಇಷ್ಟ ಆಗಿಲ್ಲ’ ಎಂದು ಸುದೀಪ್ ಕೇಳಿದರು. ಇಷ್ಟ ಆಗಿಲ್ಲ ಎನ್ನುವುದಕ್ಕೆ ಕಾರ್ತಿಕ್ ಹಾಗೂ ಪ್ರತಾಪ್ ಕೈ ಎತ್ತಿದರು. ಇಷ್ಟ ಆಗುತ್ತಿದೆ ಎನ್ನುವುದಕ್ಕೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕೈ ಎತ್ತಿದರು. ವಿನಯ್, ನಮ್ರತಾ, ಮೈಕಲ್ ಮೊದಲಾದವರು ಸುಮ್ಮನೆ ಇದ್ದರು. ಈ ಬಗ್ಗೆ ಕೇಳಿದ್ದಕ್ಕೆ ಮೈಕಲ್ ಉಲ್ಟಾ ಮಾತನಾಡಿದರು.

‘ಸಂಗೀತಾ ಕ್ಯಾಪ್ಟನ್ಸಿ ಏನೂ ಬದಲಾವಣೆ ತರುತ್ತಿಲ್ಲ. ಹೀಗಿರುವಾಗ ಹೇಳೋದು ಏನು’ ಎಂದು ಮೈಕಲ್ ಪ್ರಶ್ನೆ ಮಾಡಿದರು. ಇದು ಸುದೀಪ್​ಗೆ ಕೋಪ ತರಿಸಿತ್ತು. ‘ಒಂದು ರೇಟಿಂಗ್ ಅಥವಾ ವೋಟಿಂಗ್ ಬರುತ್ತದೆ. ಅದಕ್ಕೆ ಉತ್ತರಿಸಿದ್ರೆ ಮಾತಾಡೋಣ. ಜಡ ಹಿಡಿದ ದೇಹ ಭಾಷೆ ಬೇಡ. ಸುಮ್ನೆ ಒಂದು ಹಿಂಟ್ ಕೊಡ್ತೀನಿ. ಇದೆಲ್ಲ ನನ್ನತ್ರ ಬೇಡ. ನಾನು ಸರಿ ಇಲ್ಲ. ಪ್ರೀತಿಯಿಂದ ಮಾತನಾಡಿದ್ರೆ ಮಾತನಾಡುವುದಕ್ಕೆ ಬರುತ್ತದೆ’ ಎಂದರು ಸುದೀಪ್.

ಇದನ್ನೂ ಓದಿ: ‘ಕಾಣಿಸಿದ್ದು ಅಹಂ ಮಾತ್ರ’; ಒಂದು ವಾರದ ಲೆಕ್ಕ ಕೊಟ್ಟ ಕಿಚ್ಚ ಸುದೀಪ್

ಸುದೀಪ್ ಅವರಿಗೆ ಬಿಗ್ ಬಾಸ್ ಶೋ ಇಷ್ಟ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಗಳ ಮಧ್ಯೆ ಪ್ರತಿ ವಾರ ಬಿಡುವು ಮಾಡಿಕೊಂಡು ಅದರ ನಿರೂಪಣೆ ಮಾಡೋಕೆ ಬರುತ್ತಾರೆ. ಈ ಶೋ ನಂಬಿಕೊಂಡು ನಾನಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ‘ಬಿಗ್ ಬಾಸ್ ಬಿಟ್ಟು ನನಗೆ ಹೊರಗೊಂದು ಜೀವನ ಇದೆ. ಕನ್ನಡಕ ಹಾಕಿಕೊಂಡು ಮಾತಾಡೋದು ಮಾತ್ರ ಅಲ್ಲ. ಇದೆಲ್ಲ ಅಲ್ಲಿಯರವರತ್ರ ಇಟ್ಕೊಳ್ಳಿ. ಇದನ್ನು ನಾನು ಸಿಟ್ಟಿನಿಂದ ಹೇಳುತ್ತಿಲ್ಲ. ಪ್ರೀತಿ ಹಾಗೂ ಗೌರವದಿಂದ ಹೇಳ್ತಾ ಇದೀನಿ. ಬಿಗ್ ಬಾಸ್ ಮನಸ್ಸಿಗೆ ಹತ್ತಿರವಾದ ಶೋ. ಹಾಗಂತ ನನ್ನ ವ್ಯಕ್ತಿತ್ವ ಪರೀಕ್ಷೆ ಮಾಡಬಾರದು. ಕೂರಿಸಿಕೊಂಡು ಮಾತಾಡ್ತಾ ಇದೀನಿ. ಅಲ್ಲಿಂದ ಗೌರವ ಆರಂಭ ಆಗುತ್ತದೆ’ ಎಂದರು.

ಸುದೀಪ್ ಮಾತನ್ನು ಕೇಳಿ ಮೈಕಲ್ ಸೈಲೆಂಟ್ ಆದರು. ಸುದೀಪ್ ಹೇಳಿದ ಮಾತಿಗೆ ಅವರು ತಲೆ ಆಡಿಸಿದರು. ಈ ವಾರ ಮೈಕಲ್ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ