Anna Tangi Serial: ಸಂಕ್ರಾಂತಿ ಸಡಗರದಲ್ಲಿ ‘ಅಣ್ಣ ತಂಗಿ’ ಸೀರಿಯಲ್​; 350 ಸಂಚಿಕೆ ಪೂರೈಸಿದ ಸಂಭ್ರಮ

| Updated By: ಮದನ್​ ಕುಮಾರ್​

Updated on: Jan 11, 2023 | 5:40 PM

Udaya TV | Kannada Serial: ‘ಉದಯ’ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ‘ಅಣ್ಣ ತಂಗಿ’ ಧಾರಾವಾಹಿ 350 ಸಂಚಿಕೆ ಪೂರೈಸಿದೆ. ಈ ಸೀರಿಯಲ್​ನಲ್ಲಿ ಅಣ್ಣನಾಗಿ ಮಧು ಸಾಗರ್ ಹಾಗೂ ತಂಗಿಯಾಗಿ ಅಖಿಲಾ ನಟಿಸುತ್ತಿದ್ದಾರೆ.

Anna Tangi Serial: ಸಂಕ್ರಾಂತಿ ಸಡಗರದಲ್ಲಿ ‘ಅಣ್ಣ ತಂಗಿ’ ಸೀರಿಯಲ್​; 350 ಸಂಚಿಕೆ ಪೂರೈಸಿದ ಸಂಭ್ರಮ
ಅಣ್ಣ-ತಂಗಿ ಧಾರಾವಾಹಿ
Follow us on

ಕೌಟುಂಬಿಕ ಕಥಾಹಂದರದ ಹಲವು ಧಾರಾವಾಹಿಗಳು ‘ಉದಯ ಟಿವಿ’ಯಲ್ಲಿ(Udaya TV)  ಪ್ರಸಾರ ಆಗುತ್ತಿವೆ. ಆ ಪೈಕಿ ‘ಅಣ್ಣ ತಂಗಿ’ ಸೀರಿಯಲ್​ (Anna Tangi Serial) ಕೂಡ ಜನಮನ ಗೆದ್ದಿದೆ. ಅಣ್ಣ-ತಂಗಿ ನಡುವಿನ ಸಂಬಂಧವನ್ನು ಎಳೆ-ಎಳೆಯಾಗಿ ಪ್ರೇಕ್ಷಕರ ಮುಂದಿಟ್ಟ ಈ ಧಾರಾವಾಹಿ ಈಗ 350 ಸಂಚಿಕೆಗಳನ್ನು ಪೂರೈಸಿದೆ. ಈ ಖುಷಿಯ ಕ್ಷಣವನ್ನು ಆಚರಿಸಲು ಇಡೀ ತಂಡ ಕೇಕ್ ಕತ್ತರಿಸಿದೆ. ಪ್ರಮುಖ ಪಾತ್ರಧಾರಿಗಾದ ಶಿವರಾಜ್, ತುಳಸಿ ಮತ್ತು ಇಂದ್ರ ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಸಂವಾದ ನಡೆಸಿದ್ದಾರೆ. ‘ಅಣ್ಣ ತಂಗಿ’ ಧಾರಾವಾಹಿಯಲ್ಲಿ ಸಂಕ್ರಾಂತಿ ಹಬ್ಬ (Sankranti ) ಆಚರಿಸಲಾಗಿದೆ. ಮನೆಗೆ ತೋರಣಗಳನ್ನು ಕಟ್ಟಿ, ಹೊಲದ ಭತ್ತದ ರಾಶಿ ಎದುರು ರಂಗೋಲಿ ಬಿಡಿಸಲಾಗಿದೆ. ಕಬ್ಬು, ಹೂವು ಹಣ್ಣುಗಳನ್ನು ಇಟ್ಟು ಪೂಜೆ ಮಾಡಿ ಹಾಲನ್ನು ಉಕ್ಕಿಸಿ ಸಿಹಿ ಹುಗ್ಗಿಯನ್ನು ಮಾಡಿದರು. ಎಳ್ಳು-ಬೆಲ್ಲವನ್ನು ಹಂಚಿ ಸಂಭ್ರಮದಿಂದ ಸುಗ್ಗಿಯ ಹಬ್ಬವನ್ನು ಆಚರಿಸಿದರು.

ಈ ಧಾರಾವಾಹಿಯಲ್ಲಿ ಅಣ್ಣನಾಗಿ ಮಧು ಸಾಗರ್ ಹಾಗೂ ತಂಗಿಯಾಗಿ ಅಖಿಲಾ ನಟಿಸುತ್ತಿದ್ದಾರೆ. ನಿರ್ಮಾಣದ ಹೊಣೆಯನ್ನು ಕೆ.ಎಂ. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್. ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ. ನಿರ್ದೇಶನ ಮತ್ತು ಛಾಯಾಗ್ರಹಣ ರಾಮನಗರ ಶ್ರೀನಿವಾಸ್ ಅವರದ್ದು. ರಾಘವ ದ್ವಾರ್ಕಿ ಚಿತ್ರಕಥೆ, ತುರುವೆಕರೆ ಪ್ರಸಾದ್​ ಸಂಭಾಷಣೆ ಬರೆದಿದ್ದಾರೆ. ಗುರುರಾಜ್ ಬಿ.ಕೆ. ಸಂಕಲನ ಮಾಡುತ್ತಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ‘ಅಣ್ಣ ತಂಗಿ’ ಧಾರಾವಾಹಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Makar Sankranti 2023: ಮಕರ ಸಂಕ್ರಾಂತಿ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ? ಮಾಹಿತಿ ಇಲ್ಲಿದೆ

ಇದನ್ನೂ ಓದಿ
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

‘ನನ್ನ ಜೀವನದಲ್ಲಿ ಶಿವರಾಜು ಪಾತ್ರ ಬಹಳ ಮುಖ್ಯ. ನಾನು ಎಲ್ಲೇ ಹೋದ್ರು ಜನರು ಶಿವಣ್ಣ ಅಂತ ಗುರುತಿಸಿ ಮಾತಾಡ್ತಾರೆ. ತುಳಸಿ ಅಂತಹ ತಂಗಿ ಸಿಕ್ಕಿರೋದು ನನಗೆ ತುಂಬಾ ಖುಷಿ ಕೊಡುತ್ತೆ. ತೆರೆ ಹಿಂದೆ ಮತ್ತು ತೆರೆ ಮುಂದೆ ತುಳಸಿ ನನಗೆ ತಂಗಿನೇ. ಇಡೀ ಕರುನಾಡಿಗೆ ಅಣ್ಣನಾಗಿ ಕಾಣಿಸಿಕೊಳ್ತಾ ಇದ್ದೀನಿ ಅಂದ್ರೆ ಜೀವನದಲ್ಲಿ ಇದಕ್ಕಿಂತ ಬೇರೆ ಏನೂ ಬೇಡ’ ಎಂದಿದ್ದಾರೆ ನಟ ಮಧುಸಾಗರ್.

ಇದನ್ನೂ ಓದಿ: Makar Sankranti 2023: ಮಕರ ಸಂಕ್ರಾಂತಿ ಯಾವಾಗ ಆಚರಿಸಬೇಕು, ನಿಖರ ದಿನಾಂಕ ಮತ್ತು ಪೂಜೆ ಮುಹೂರ್ತ ಇಲ್ಲಿದೆ

‘ಅಣ್ಣ ತಂಗಿ ಧಾರಾವಾಹಿಯ ಭಾಗವಾಗಿರೋದ್ದಕ್ಕೆ ನನಗೆ ತುಂಬಾ ಸಂತೋಷವಿದೆ. ಈ ತಂಡವು ಒಂದು ಕುಟುಂಬದ ರೀತಿ ಇದೆ. ಶ್ರೀನಿವಾಸ್ ಮತ್ತು ಹರಿದಾಸ್ ಅವರು ಈ ಪಾತ್ರವನ್ನು ಮಾಡಲು ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು’ ಎಂದು ನಟಿ ಅಖಿಲಾ ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್

‘350 ಸಂಚಿಕೆಗಳನ್ನು ಪೂರೈಸಿ ಈ ಸೀರಿಯಲ್​ ಮುಂದುವರಿಯುತ್ತಿದೆ. ಈ ಯಶಸ್ಸಿನ ಹಾದಿಯಲ್ಲಿ ಪ್ರತಿಯೊಬ್ಬರ ಪ್ರರಿಶ್ರಮ ತುಂಬ ಮುಖ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು. ‘ಅಣ್ಣ-ತಂಗಿ’ ಧಾರಾವಾಹಿಗೆ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟ ‘ಉದಯ’ ವಾಹಿನಿಗೂ, ‘ಚೈತನ್ಯ ಹರಿದಾಸ್ ಸಿನಿಮಾಸ್’ ನಿರ್ಮಾಣ ಸಂಸ್ಥೆಗೂ ನನ್ನ ಧನ್ಯವಾದಗಳು. ನಮ್ಮ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ಅರ್ಥವನ್ನು ಕಳೆದುಕೊಳ್ಳುತ್ತಿರುವಾಗ ‘ಅಣ್ಣ ತಂಗಿ’ ಸಂಬಂಧದ ಮಹತ್ವವನ್ನು ಭಾವನಾತ್ಮಕವಾಗಿ ತಿಳಿಯಪಡಿಸುವ ಪ್ರಯತ್ನ ಈ ಧಾರಾವಾಹಿಯಲ್ಲಿ ಆಗುತ್ತಿದೆ’ ಎಂದು ನಿರ್ದೇಶಕ ರಾಮನಗರ ಶ್ರೀನಿವಾಸ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.