700ಕ್ಕೂ ಹೆಚ್ಚು ಚಿತ್ರಗೀತೆ ಬರೆದಿರುವ ದೊಡ್ಡರಂಗೇಗೌಡರಿಗೆ ಸಿನಿಮಾದ ನಂಟು ಸಿಕ್ಕಿದ್ದು ಒಂದು ಕಿರುಜಗಳದಿಂದ

Weekend With Ramesh: ಸುಮಾರು 700 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿರುವ ಸಾಹಿತಿ ದೊಡ್ಡರಂಗೇಗೌಡರಿಗೆ ಸಿನಿಮಾ ನಂಟು ದೊರೆತಿದ್ದು ಹೇಗೆ? ವೀಕೆಂಡ್ ವಿತ್ ರಮೇಶ್​ನಲ್ಲಿ ಅವರೇ ವಿವರಿಸಿದ್ದಾರೆ.

700ಕ್ಕೂ ಹೆಚ್ಚು ಚಿತ್ರಗೀತೆ ಬರೆದಿರುವ ದೊಡ್ಡರಂಗೇಗೌಡರಿಗೆ ಸಿನಿಮಾದ ನಂಟು ಸಿಕ್ಕಿದ್ದು ಒಂದು ಕಿರುಜಗಳದಿಂದ
ದೊಡ್ಡರಂಗೇಗೌಡ
Follow us
ಮಂಜುನಾಥ ಸಿ.
|

Updated on:May 28, 2023 | 8:12 PM

ಸಾಹಿತಿಗಳಿಗೆ ಚಲನಚಿತ್ರ ಗೀತೆಗಳ ಬಗ್ಗೆ ದಿವ್ಯ ಅಸಡ್ಡೆ, ನಿರ್ಲಕ್ಷ್ಯ ಭಾವ ಕೆಲವರಿಗೆ ಸಿಟ್ಟು ಸಹ. ಹಾಗಿದ್ದರೂ ಈ ಹಿಂದೆ ಹಾಗೂ ಈಗಲೂ ಸಹ ಕೆಲವು ಸಾಹಿತಿಗಳು ತಮ್ಮ ಸಾಹಿತ್ಯ ಪ್ರತಿಭೆಯ ಮೂಲಕ ಹಲವು ಅತ್ಯದ್ಭುತ ಚಲನಚಿತ್ರಗೀತೆಗಳನ್ನು ನೀಡಿದ್ದಾರೆ. ಕನ್ನಡ ಚಿತ್ರಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಅಂಥಹವರಲ್ಲಿ ಸಾಹಿತಿ ದೊಡ್ಡರಂಗೇಗೌಡರು ಸಹ ಒಬ್ಬರು. ಸುಮಾರು 700 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ದೊಡ್ಡರಂಗೇಗೌಡರು (Doddarangegowda) ಬರೆದಿದ್ದು ಈ ಶನಿವಾರ ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ಅತಿಥಿಯಾಗಿ ಆಗಮಿಸಿದ್ದ ವೇಳೆ ತಮಗೆ ಸಿನಿಮಾ ನಂಟು ಹೇಗೆ ದೊರಕಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಸಾಹಿತಿಗಳಾಗಿ ಅದಾಗಲೆ ಹೆಸರುಗಳಿಸಿದ್ದ ದೊಡ್ಡರಂಗೇಗೌಡರು ಭಾವಗೀತೆಗಳ ರಚನೆಯನ್ನು ಮಾಡುತ್ತಿದ್ದಾರೆ. ಆಗ ಈ ಭಾವಗೀತೆಗಳ ರಚಿಸುತ್ತಿದ್ದ ಕವಿಗಳ ಬಗ್ಗೆ ಸಾಹಿತ್ಯವಲಯದಲ್ಲಿ ಕೆಲವರಿಗೆ ಬಹಳ ಅಸಮಾಧಾನವಿತ್ತು. ಭಾವಗೀತೆಗಳ ಕವಿಗಳನ್ನು ಕ್ಯಾಸೆಟ್ ಕವಿಗಳೆಂದು ಕೆಲವರು ಛೇಡಿಸಿದ್ದೂ ಉಂಟು. ಅಂಥಹವರಲ್ಲಿ ರಾಮಚಂದ್ರ ಶರ್ಮಾರವರೂ ಸಹ ಒಬ್ಬರು. ರಾಮಚಂದ್ರ ಶರ್ಮಾ ಅವರು ಲಕ್ಷ್ಮಿನಾರಾಯಣಭಟ್ಟರು, ಎಚ್​ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ ಅವರುಗಳನ್ನು ಅವರು ಸಂಗೀತಕ್ಕೆ ಹಾಡು ಬರೆಯುತ್ತಿದ್ದರಿಂದ ಲಕ್ಷ್ಮಿದಾಸ, ವೆಂಕಟೇಶದಾಸ ಹಾಗೂ ರಂಗದಾಸ ಎಂದು ಕರೆಯುತ್ತಿದ್ದರಂತೆ.

ಒಮ್ಮೆ ಬೆಂಗಳೂರು ವಿವಿಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಹೀಗೆಯೇ ಕರೆದಾಗ, ಅದೇ ಕಾರ್ಯಕ್ರಮದಲ್ಲಿದ್ದ ದೊಡ್ಡರಂಗೇಗೌಡರು, ತಮಗೆ ಮಾತನಾಡುವ ಅವಕಾಶ ಬಂದಾಗ, ಹಾಡುಗಳು ಎಂಬುದು ಆದಿಕಾಲದಿಂದಲೂ ಚಾಲ್ತಿಯಲ್ಲಿವೆ ಎಂಬುದನ್ನು ಅಲ್ಲಿಯೇ ತಾವೇ ಹಾಡು ಕಟ್ಟಿ ರಾಗ ಸಂಯೋಜಿಸಿ ಹಾಡಿದರಂತೆ.

ಆ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ನಿರ್ದೇಶಕ, ನಟ, ನಿರ್ಮಾಪಕ ಕೆಎಸ್​ಎಲ್​ ಸ್ವಾಮಿ (ರವಿ), ಅವರಿಗೆ ದೊಡ್ಡರಂಗೇಗೌಡರ ಪದ ಕಟ್ಟುವಿಕೆ ಇಷ್ಟವಾಗಿ ಅವರ ದೀಪ ಸಿನಿಮಾಕ್ಕೆ ಅವಕಾಶ ನೀಡಿದ್ದಾರೆ. ಮೊದಲಿಗೆ ಮದುವೆಯ ಕುರಿತಾಗಿ ಹಾಡೊಂದು ಬರೆಸಿಕೊಂಡಿದ್ದಾರೆ. ಅದಾದ ಬಳಿಕ ಮಾಗಿಯ ಕನಸು ಸಿನಿಮಾಕ್ಕೆ ಹಾಡು ಬರೆದುಕೊಟ್ಟಿದ್ದಾರೆ ದೊಡ್ಡರಂಗೇಗೌಡರು. ಆ ವೇಳೆಗೆ ಪುಟ್ಟಣ್ಣ ಕಣಗಾಲರು ದೊಡ್ಡರಂಗೇಗೌಡರ ಅಭಿಮಾನಿಯಾಗಿ ಅವರ ಬಹುಪಾಲು ಪ್ರಕಟಿತ ಪುಸ್ತಕಗಳನ್ನು ಖರೀದಿಸಿ ಓದಿದ್ದರಂತೆ. ದೊಡ್ಡರಂಗೇಗೌಡರ ಪ್ರಗಾತ ಕವಿತೆಯನ್ನು ಪಡುವಾರಹಳ್ಳಿ ಪಾಂಡವರು ಹೆಸರಿನ ಸಿನಿಮಾ ಮಾಡಿದ್ದಾರೆ ಪುಟ್ಟಣ್ಣ. ಆ ಸಿನಿಮಾದ ಸೂಪರ್ ಹಿಟ್ ಹಾಡುಗಳನ್ನು ಬರೆದಿರುವುದು ದೊಡ್ಡರಂಗೇಗೌಡರು.

ಇದನ್ನೂ ಓದಿ:ಪುಸ್ತಕ ಇಟ್ಟುಕೊಳ್ಳಲು ಸಹ ಸ್ಥಳವಿಲ್ಲ: ಮನೆ ಕಟ್ಟಿಕೊಳ್ಳಲಾಗದ ಬಗ್ಗೆ ಕವಿ ದೊಡ್ಡರಂಗೇಗೌಡ ಬೇಸರ

ಇನ್ನು ದೊಡ್ಡರಂಗೇಗೌಡರ ಬರೆದಿರುವ ಪರಸಂಗದ ಗೆಂಡೇತಿಮ್ಮ ಸಿನಿಮಾದ ತೇರಾ ಏರಿ ಅಂಬರದಾಗೆ ಹಾಗೂ ನೋಟದಾಗೆ ನಗೆಯಾ ಬೀರಿ ಹಾಡುಗಳಂತೂ ನೂರು ವರ್ಷವಾದರೂ ಸಾಯದ ರಚನೆಗಳು. ಪರಸಂಗದ ಗೆಂಡೆ ತಿಮ್ಮ ಕಾದಂಬರಿಯಾಗಿದ್ದು ಅಲ್ಲಿನ ಪಾತ್ರಗಳ ವ್ಯಕ್ತಿತ್ವ, ನಿಲವು, ಭವಿಷ್ಯಗಳು ಅರಿವಿದ್ದ ಕಾರಣ ಅಷ್ಟು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಹಾಡುಗಳನ್ನು ಬರೆಯಲು ಸಾಧ್ಯವಾಯಿತು ಎಂದರು ದೊಡ್ಡರಂಗೇಗೌಡರು.

ದೊಡ್ಡರಂಗೇಗೌಡರು 700 ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲ ಸೂಪರ್ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ; ಅರುಣರಾಗ ಸಿನಿಮಾದ ನಡೆದಾಡೊ ಕಾಮನ ಬಿಲ್ಲೆ, ಯಾಕೋ ಏನೋ ನನ್ನದೆ ಝುಂ ಎಂದಿದೆ, ಪಡುವಾರಳ್ಳಿ ಪಾಂಡವರು ಸಿನಿಮಾದ ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ತೊರೆಯಲಿ, ಭೂಮಿ ತಾಯಾಣೆ ನೀ ಇಷ್ಟ ಕಣೆ, ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ, ಹೂವಂತಾ ಹೃದಯವನ್ನು ಹಿಂಡಿವಿರೇಕೆ, ಅಲೆಮನೆ ಸಿನಿಮಾದ ನಮ್ಮೂರ ಮಂದಾರ ಹೂವೆ, ಅಶ್ವಮೇಧ ಸಿನಿಮಾದ ಟೈಟಲ್ ಹಾಡು, ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಹೃದಯ ಗೀತೆ ಹಾಡುತಿರೆ ಮನವು ಸ್ವರ್ಗವಾಗಿದೆ, ಎಲ್ಲಿರುವೆ ಚೆಲುವೆ ಎಲ್ಲಿರುವೇ? ಇನ್ನು ಹಲವಾರು ಹಾಡುಗಳನ್ನು ದೊಡ್ಡರಂಗೇಗೌಡು ನೀಡಿದ್ದಾರೆ. ಇತ್ತೀಚೆಗಿನ ಮಾವು-ಬೇವು ಸಿನಿಮಾಕ್ಕೂ ಕೆಲವು ಅದ್ಭುತವಾದ ಹಾಡುಗಳನ್ನು ದೊಡ್ಡರಂಗೇಗೌಡರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Sun, 28 May 23

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್