AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದ ಹೊಸ ರಿಯಾಲಿಟಿ ಶೋಗೆ ಕಾಲಿಟ್ಟ ರಜಿನಿ, ಧನರಾಜ್

ಜೀ ಕನ್ನಡದಲ್ಲಿ ಶೀಘ್ರದಲ್ಲೇ ಎರಡು ಹೊಸ ರಿಯಾಲಿಟಿ ಶೋಗಳು ಆರಂಭವಾಗಲಿವೆ. ಸರಿಗಮಪ ಲಿಟ್ಲ್ ಚಾಂಪ್ಸ್ ಮತ್ತು ಜೋಡಿ ನಂಬರ್ 1. ಕುತೂಹಲ ಕೆರಳಿಸಿರುವ ‘ಜೋಡಿ ನಂ.1’ ಶೋನಲ್ಲಿ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಾದ ರಂಜಿನಿ-ಅರುಣ್ ಗೌಡ ಮತ್ತು ಬಿಗ್ ಬಾಸ್ ಧನರಾಜ್-ಪ್ರಜ್ಞಾ ಭಾಗವಹಿಸಲಿದ್ದಾರೆ.

ಜೀ ಕನ್ನಡದ ಹೊಸ ರಿಯಾಲಿಟಿ ಶೋಗೆ ಕಾಲಿಟ್ಟ ರಜಿನಿ, ಧನರಾಜ್
ಧನರಾಜ್​,ಪ್ರಜ್ಞಾ, ರಜಿನಿ
ರಾಜೇಶ್ ದುಗ್ಗುಮನೆ
|

Updated on: Mar 24, 2026 | 8:47 AM

Share

ಜೀ ಕನ್ನಡದಲ್ಲಿ (Zee Kannada) ಶೀಘ್ರವೇ ಎರಡೆರಡು ರಿಯಾಲಿಟಿ ಶೋಗಳು ಆರಂಭ ಆಗಲಿವೆ! ಹೌದು, ‘ಸರಿಗಮಪ ಲಿಟ್ಲ್​ ಚಾಂಪ್ಸ್’ಗೆ ಆಡಿಷನ್ ನಡೆದಿದ್ದು, ಶೀಘ್ರವೇ ಶೋ ಪ್ರಸಾರ ಆರಂಭಿಸಲಿದೆ. ಅದೇ ರೀತಿ, ‘ಜೋಡಿ ನಂಬರ್ 1’ ಹೆಸರಿನ ರಿಯಾಲಿಟಿ ಶೋ ಕೂಡ ಬರುತ್ತಿದೆ. ಈ ಶೋನಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಮೃತವರ್ಷಿಣಿ ರಜಿನಿ, ಬಿಗ್ ಬಾಸ್ ಧನರಾಜ್ ಮೊದಲಾದವರು ಶೋನ ಭಾಗ ಆಗಲಿದ್ದಾರೆ ಎಂಬುದು ವಿಶೇಷ.

ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಇದರಲ್ಲಿ ಬಹುತೇಕವು ಯಶಸ್ವಿ ಕಂಡಿದೆ. ಅದರಲ್ಲಿ ‘ಸರಿಗಮಪ’ ಕೂಡ ಒಂದು. ಈ ಶೋ ಶೀಘ್ರವೇ ಪ್ರಸಾರ ಕಾಣಲಿದೆ ಎಂಬ ಪ್ರೋಮೋ ಗಮನ ಸೆಳೆದಿದೆ. ಈ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಜೋಡಿ ನಂಬರ್ 1 ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲಾಗಿದೆ.

View this post on Instagram

A post shared by Zee Kannada (@zeekannada)

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿ ದಂಪತಿವರೆಗೆ ಕಿತ್ತಾಟ ಇದ್ದೇ ಇರುತ್ತದೆ. ಜೊತೆ ಪ್ರೀತಿ ಕೂಡ ಇರುತ್ತದೆ. ಎಲ್ಲಿ ಜಗಳ ಇರುತ್ತದೆಯೋ ಅಲ್ಲಿ ಪ್ರೀತಿ ಇರುತ್ತದೆ ಎಂಬ ಮಾತಿದೆ. ಇದನ್ನು ತೋರಿಸುವ ರೀತಿಯಲ್ಲಿ ‘ಜೋಡಿ ನಂಬರ್ 1’ ಬರುತ್ತಿದೆ. ಇದಕ್ಕೆ ಟ್ರೆಂಡ್​ನಲ್ಲಿರೋ ಜೋಡಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದು ವಿಶೇಷ.

ಇದನ್ನೂ ಓದಿ: ‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ

ಹೌದು, ‘ಜೋಡಿ ನಂಬರ್ 1’ ರಿಯಾಲಿಟಿ ಶೋನಲ್ಲಿ ಧನರಾಜ್ ಹಾಗೂ ಅವರ ಪತ್ನಿ ಪ್ರಜ್ಞಾ ಆಗಮಿಸಲಿದ್ದಾರೆ. ಇವರು ರೀಲ್ಸ್ ಮಾಡಿ ಟ್ರೆಂಡ್ ಆದವರು. ಇನ್ನು, ರಂಜನಿ ಹಾಗೂ ಅರುಣ್ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಮೊದಲು ಫ್ರೆಂಡ್ಸ್ ಆಗಿದ್ದ ಇವರು ಈಗ ಪತಿ-ಪತ್ನಿ ಆಗಿದ್ದಾರೆ. ಇವರು ಕೂಡ ಜೋಡಿ ನಂಬರ್ ಸ್ಪರ್ಧಿಗಳಾಗಿದ್ದಾರೆ. ಕೋಟೆ ಪ್ರಭಾಕರ್-ಮಾಲತಿ, ಜಯರಾಮ್​-ಗೀತಾ ಭಾರತಿ, ನಿರೀಕ್ಷಾ-ರುದ್ರ ಶೋನ ಭಾಗ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ