12 ಮೇಕೆ ಹೇಳಿಕೆ, ಹಿರಿಯ ನಟನ ಹೈರಾಣು ಮಾಡಿದ ಅಭಿಮಾನಿಗಳು, ದೂರು ದಾಖಲು
Pawan Kalyan: ದಶಕಗಳಿಂದಲೂ ತೆಲುಗು ರಾಜ್ಯಗಳಲ್ಲಿ ಸಿನಿಮಾ ಮತ್ತು ರಾಜಕೀಯ ಜೊತೆ-ಜೊತೆಯಾಗಿಯೇ ಸಾಗುತ್ತಿವೆ. ರಾಜಕೀಯ ವೇದಿಕೆಗಳಲ್ಲಿ ಸಿನಿಮಾ ಮಾತುಗಳು, ಸಿನಿಮಾಗಳಲ್ಲಿ ರಾಜಕೀಯ ತೀರ ಸಾಮಾನ್ಯ ಎಂಬಂತಾಗಿದೆ. ಆದರೆ ಇತ್ತೀಚೆಗೆ ಹಿರಿಯ ನಟರೊಬ್ಬರು ಸಿನಿಮಾ ವೇದಿಕೆ ಮೇಲೆ ತಮಾಷೆಗೆ ಆಡಿದ ಮಾತೊಂದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷದ ಕಾರ್ಯಕರ್ತರು, ನಟನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ನಟ ಈಗ ಆಸ್ಪತ್ರೆ ಸೇರಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಸಿನಿಮಾ ಮತ್ತು ರಾಜಕೀಯ ಬೇರೆ ಬೇರೆ ಅಲ್ಲ. ದಶಕಗಳಿಂದಲೂ ಅಲ್ಲಿ ಸಿನಿಮಾ ಮತ್ತು ರಾಜಕೀಯ ಜೊತೆ-ಜೊತೆಯಾಗಿಯೇ ಸಾಗುತ್ತಿವೆ. ರಾಜಕೀಯ ವೇದಿಕೆಗಳಲ್ಲಿ ಸಿನಿಮಾ ಮಾತುಗಳು, ಸಿನಿಮಾಗಳಲ್ಲಿ ರಾಜಕೀಯ ತೀರ ಸಾಮಾನ್ಯ ಎಂಬಂತಾಗಿದೆ. ಆದರೆ ಇತ್ತೀಚೆಗೆ ಹಿರಿಯ ನಟರೊಬ್ಬರು ಸಿನಿಮಾ ವೇದಿಕೆ ಮೇಲೆ ತಮಾಷೆಗೆ ಆಡಿದ ಮಾತೊಂದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷದ ಕಾರ್ಯಕರ್ತರು, ನಟನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ನಟ ಈಗ ಆಸ್ಪತ್ರೆ ಸೇರಿದ್ದಾರೆ.
ವಿಶ್ವಕ್ ಸೇನ್ ನಟನೆಯ ‘ಲೈಲಾ’ ಸಿನಿಮಾದ ಕಾರ್ಯಕ್ರಮವೊಂದು ನಡೆಯಿತು. ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಸೇರಿದಂತೆ ಹಲವರು ಭಾಗಿ ಆಗಿದ್ದರು. ತೆಲುಗಿನ ಜನಪ್ರಿಯ ಹಾಸ್ಯನಟ, ಪೋಷಕ ನಟ ಪೃಥ್ವಿ ರಾಜ್ ಅವರು ಸಹ ಸಿನಿಮಾದಲ್ಲಿ ನಟಿಸಿದ್ದು ಅವರೂ ಸಹ ವೇದಿಕೆ ಮೇಲೆ ಹಾಜರಿದ್ದರು. ಚಿತ್ರತಂಡದ ಎಲ್ಲರೂ ಮೈಕ್ ಹಿಡಿದು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಈ ವೇಳೆ ಪೃಥ್ವಿ ರಾಜ್ ಮಾತನಾಡಿ, ‘ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಮೇಕಲ ಸತ್ತಿ (ಮೇಕೆಗಳ ಸತ್ತಿ). ಶೂಟಿಂಗ್ ಶುರು ಮಾಡಿದಾಗ 150 ಮೇಕೆಗಳು ಇದ್ದವು. ಸಿನಿಮಾದ ಶೂಟಿಂಗ್ ಮುಗಿದಾಗ ಉಳಿದಿದ್ದು 12, 11 ಮೇಕೆಗಳು ಮಾತ್ರವೇ’ ಎಂದಿದ್ದರು.
ಪೃಥ್ವಿರಾಜ್ರ ಈ ಮಾತು ವಿವಾದಕ್ಕೆ ಕಾರಣವಾಗಿದೆ. ಅಸಲಿಗೆ ಪೃಥ್ವಿರಾಜ್ ಹೇಳಿರುವುದು ವೈಸಿಪಿ ಪಕ್ಷದ ಬಗ್ಗೆ. 150 ಜನ ಇದ್ದ ಶಾಸಕರು ಈಗ 12 ಜನರಷ್ಟೆ ಉಳಿದಿದ್ದಾರೆ ಎಂಬುದನ್ನು ಪೃಥ್ವಿರಾಜ್ ಹೀಗೆ ಹೇಳಿದ್ದಾರೆ. ಆದರೆ ಇದನ್ನು ಜಗನ್ ಅಭಿಮಾನಿಗಳು, ವೈಸಿಪಿ ಪಕ್ಷದ ಕಾರ್ಯಕರ್ತರು ವಿರೋಧಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪೃಥ್ವಿರಾಜ್ ಅವರ ಮೊಬೈಲ್ ನಂಬರ್ ಅನ್ನು ವೈರಲ್ ಮಾಡಿ, ಸತತವಾಗಿ ಫೋನ್ಗಳನ್ನು ಮಾಡಿ ಅವರಿಗೆ ಟಾರ್ಚರ್ ನೀಡಿದ್ದಾರೆ. ಸೆಕೆಂಡ್ಗೊಂದು ಫೋನ್ ಮಾಡಿ ಕೆಟ್ಟ ಭಾಷೆಯಲ್ಲಿ ಬೈದಿದ್ದಾರೆ. ಈ ವಿಷಯವನ್ನು ಸ್ವತಃ ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸಿಸಿಎಲ್ಗೂ ಮೊದಲು ಪುನೀತ್ ಸಮಾಧಿಗೆ ಟಾಲಿವುಡ್ ಸೆಲೆಬ್ರಿಟಿಗಳ ಭೇಟಿ
ಸತತ ಟಾರ್ಚರ್ನಿಂದ ಬಿಪಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪೃಥ್ವಿರಾಜ್, ‘ನಾನು ವೈಸಿಪಿ ಶಾಸಕರನ್ನು ಮನದಲ್ಲಿಟ್ಟುಕೊಂಡು ಆ ಮಾತು ಹೇಳಿಲ್ಲ, ಸಾಮಾನ್ಯವಾಗಿಯೇ ಹೇಳಿದೆ. ಆದರೆ ವೈಸಿಪಿ ಕಾರ್ಯಕರ್ತರು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ. ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ನನಗೆ ನನ್ನ ನಾಯಕ (ಪವನ್ ಕಲ್ಯಾಣ್) ಗೆಲ್ಲಬೇಕಿತ್ತು, ಗೆದ್ದಿದ್ದಾಯ್ತು. ವೈಸಿಪಿ ಪಕ್ಷದೊಂದಿಗೆ ನನ್ನ ಸಂಬಂಧ ಇಲ್ಲ. ಈಗ ನನಗೆ ಕರೆ ಮಾಡಿರುವ ಎಲ್ಲರ ಮೊಬೈಲ್ ಸಂಖ್ಯೆ ನನ್ನ ಬಳಿ ಇದೆ ಎಲ್ಲರ ವಿರುದ್ಧ ದೂರು ನೀಡುತ್ತೇನೆ’ ಎಂದಿದ್ದಾರೆ.
ಪೃಥ್ವಿರಾಜ್ ಈ ಹಿಂದೆ ವೈಸಿಪಿ ಪಕ್ಷದ ಮುಖಂಡರಲ್ಲಿ ಒಬ್ಬರಾಗಿದ್ದರು. ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ಅವರು ಪಕ್ಷವನ್ನು ತ್ಯಜಿಸಿದರು. ಬಳಿಕ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಸೇರ್ಪಡೆಗೊಂಡರು. 1986 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಪೃಥ್ವಿ ರಾಜ್ ಈ ವರೆಗೆ 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ