ಕನ್ನಡದ ಸೂಪರ್ ಹಿಟ್ ಹಾಡು ಬಳಸಿಕೊಂಡ ತೆಲುಗಿನ ಸ್ಟಾರ್ ನಿರ್ದೇಶಕ
ಕನ್ನಡ ಚಿತ್ರರಂಗದ 80-90ರ ದಶಕದ ಸೂಪರ್‌ಹಿಟ್ ಗೀತೆಗಳಲ್ಲಿ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ’ ಹಾಡು ಈಗಲೂ ಜನಪ್ರಿಯ. ತೆಲುಗಿನ ಖ್ಯಾತ ನಿರ್ದೇಶಕ ಈ ಹಾಡನ್ನು ಮೆಚ್ಚಿ, ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಬಳಸಿಕೊಂಡಿದ್ದಾರೆ. ಮಣಿ ರತ್ನಂ ನಿರ್ದೇಶನದ ಈ ಹಾಡಿನ ಬಗ್ಗೆ ವಂಗಾ ಅವರ ಅಭಿಮಾನವು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.

ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಬಂದಿವೆ. ಅವುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಈ ಹಾಡುಗಳು ಕಿವಿಗೆ ಕೇಳಲು ಇಂಪು. ಈ ಸಾಲಿನಲ್ಲಿ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ..’ ಹಾಡು ಕೂಡ ಒಂದು. ಈ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು. ಇದು ತೆಲುಗು ನಿರ್ದೇಶಕನಿಗೂ ಇಷ್ಟ ಆಗಿದೆ. ಅವರು ಹಾಡನ್ನು ಬಳಸಿಕೊಂಡಿದ್ದಾರೆ.
ಈ ರೀತಿ ಹಾಡು ಬಳಕೆ ಮಾಡಿದ್ದು ಬೇರೆ ಯಾರೂ ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಸಖತ್ ರಾ ಆದಂತಹ ಚಿತ್ರಗಳನ್ನು ನೀಡುತ್ತಾರೆ. ಅವರು ಕನ್ನಡದ ‘ನಗುವ ನಯನ’ ಹಾಡನ್ನು ಇಷ್ಟಪಟ್ಟಿದ್ದಾರೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ಸಂದೀಪ್ ರೆಡ್ಡಿ ವಂಗ. ಸಮುದ್ರ ತೀರದಲ್ಲಿ ಹಕ್ಕಿಯೊಂದು ನಡೆದಾಡುವ ವಿಡಿಯೋ ಇದು. ಈ ವಿಡಿಯೋಗೆ ಅವರು ಕನ್ನಡದ ‘ನಗುವ ನಯನ’ ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರು ಈ ವಿಷಯಕ್ಕೆ ಸಂತಸಪಟ್ಟಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ
‘ಪಲ್ಲವಿ ಅನು ಪಲ್ಲವಿ’ ಸಿನಿಮಾ 1983ರಲ್ಲಿ ತೆರೆಗೆ ಬಂತು. ಅನಿಲ್ ಕಪೂರ್, ಲಕ್ಷ್ಮೀ ಮೊದಲಾದವರು ನಟಿಸಿದ್ದರು. ಮಣಿ ರತ್ನಂ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇಳಯರಾಜ ಅವರು ಸಂಗೀತ ಸಂಯೋಜನೆ ಚಿತ್ರಕ್ಕೆ ಇತ್ತು. ಸಂದೀಪ್ ರೆಡ್ಡಿ ಅವರು ಸದ್ಯ ತೆಲುಗಿನಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಈ ಚಿತ್ರಕ್ಕೆ ಹೀರೋ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಹಾಗೂ ‘ಸ್ಪಿರಿಟ್’ ಚಿತ್ರ ಒಟ್ಟಿಗೇ ತೆರೆಗೆ ಬರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




