‘ಬಾಹುಬಲಿ’ಯ ಕುಮಾರ ವರ್ಮನಿಗೆ 47ರ ವಯಸ್ಸಿನಲ್ಲಿ ಮದುವೆ

Subbaraju: ತೆಲುಗಿನ ಖ್ಯಾತ ನಟ ಸುಬ್ಬರಾಜು ಅವರು ತಮ್ಮ 47ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಪತ್ನಿಯೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಸುಬ್ಬರಾಜು ಹಂಚಿಕೊಂಡಿದ್ದಾರೆ.

‘ಬಾಹುಬಲಿ’ಯ ಕುಮಾರ ವರ್ಮನಿಗೆ 47ರ ವಯಸ್ಸಿನಲ್ಲಿ ಮದುವೆ
Follow us
ಮಂಜುನಾಥ ಸಿ.
|

Updated on:Nov 27, 2024 | 3:35 PM

ಎಲ್ಲ ಚಿತ್ರರಂಗಗಳಲ್ಲಿ ಕೆಲವು ನಟರಿರುತ್ತಾರೆ ಅವರ ಮೂಲ ಹೆಸರಿಗಿಂತಲೂ ಅವರು ಮಾಡಿದ ಪಾತ್ರಗಳ ಹೆಸರಿನ ಮೂಲಕವೇ ಅವರನ್ನು ಗುರುತಿಸಲಾಗುತ್ತದೆ. ತೆಲುಗಿನ ಸುಬ್ಬರಾಜು ಅಂಥಹಾ ನಟರಲ್ಲಿ ಒಬ್ಬರು. ತೆಲುಗಿನ ನಟ ಸುಬ್ಬರಾಜು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ವರ್ಷಕ್ಕೆ 10-12 ಸಿನಿಮಾಗಳಲ್ಲಿ ನಟಿಸುತ್ತಿದ್ದ ಸುಬ್ಬರಾಜು ಈಗ ತಮ್ಮ 47ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಮದುವೆಯ ಫೋಟೊ ಹಂಚಿಕೊಂಡಿರುವ ಸುಬ್ಬರಾಜು, ‘ಕೊನೆಗೂ ಮದುವೆಯಾದೆ’ ಎಂದಷ್ಟೆ ಬರೆದುಕೊಂಡಿದ್ದಾರೆ. ಸುಬ್ಬರಾಜು ಪತ್ನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುಬ್ಬರಾಜು ವಿವಾಹ ತೆಲುಗು ಸಂಪ್ರದಾಯದಂತೆ ನಡೆದಿದ್ದು, ಸುಬ್ಬರಾಜು ಹಂಚಿಕೊಂಡಿರುವ ಚಿತ್ರದಲ್ಲಿ ಪತಿ-ಪತ್ನಿ ಇಬ್ಬರೂ ಸಮುದ್ರದಂಡೆಯಲ್ಲಿ ವಧು-ವರರ ಕಾಸ್ಟೂಮ್​ನಲ್ಲಿ ನಿಂತಿದ್ದಾರೆ.

ಸುಬ್ಬರಾಜು 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಯಕನ ಗೆಳೆಯನಾಗಿ, ವಿಲನ್ ಆಗಿ, ಮುಖ್ಯ ವಿಲನ್​ನ ಬಲಗೈ ಪಾತ್ರದಲ್ಲಿ, ನಾಯಕಿಯ ಅಣ್ಣನಾಗಿ, ಕಮಿಡಿಯನ್ ಆಗಿ ಹೀಗೆ ಹಲವಾರು ಭಿನ್ನ ರೀತಿಯ ಪಾತ್ರದಲ್ಲಿ ಸುಬ್ಬರಾಜು ನಟಿಸಿದ್ದಾರೆ. ‘ಆರ್ಯ’ ಸಿನಿಮಾದ ‘ಸುಬ್ಬು’ ಪಾತ್ರ, ಪ್ರಭಾಸ್ ನಟನೆಯ ‘ಮಿರ್ಚಿ’ ಸಿನಿಮಾದ ನಾಯಕಿಯ ಅಣ್ಣನ ಪಾತ್ರ, ‘ಪೋಕಿರಿ’ ಸಿನಿಮಾದ ಪಾತ್ರ, ‘ಬಾಹುಬಲಿ’ ಸಿನಿಮಾದ ‘ಕುಮಾರವರ್ಮಾ’ ಪಾತ್ರ ಹೀಗೆ ಸುಬ್ಬರಾಜು ನಟನೆಯ ಹಲವು ಪಾತ್ರದಲ್ಲಿ ಸಖತ್ ಜನಪ್ರಿಯವಾಗಿವೆ.

ಇದನ್ನೂ ಓದಿ:‘ಬಾಹುಬಲಿ’-‘ದೇವರ’ ಕ್ಲೈಮ್ಯಾಕ್ಸ್ ಒಂದೇ ರೀತಿ ಇದೆ; ತಲೆಗೆ ಹುಳು ಬಿಟ್ಟ ತಂತ್ರಜ್ಞ

ಸುಬ್ಬರಾಜು ಅಚಾನಕ್ಕಾಗಿ ಚಿತ್ರರಂಗಕ್ಕೆ ಬಂದವರು. 2003 ರಲ್ಲಿ ರವಿತೇಜ ನಟನೆಯ ‘ಖಡ್ಗಂ’ ಸಿನಿಮಾದ ಚಿತ್ರೀಕರಣ ನಡೆಯುವಾಗ ನಿರ್ದೇಶಕ ಕೃಷ್ಣ ವಂಶಿ ಅವರ ಕಂಪ್ಯೂಟರ್​ನಲ್ಲಿ ಸಮಸ್ಯೆ ಉಂಟಾಗಿ ಅದನ್ನು ರಿಪೇರಿ ಮಾಡಲು ಹೋಗಿದ್ದ ಸುಬ್ಬರಾಜುಗೆ, ‘ಖಡ್ಗಂ’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ಕೃಷ್ಣ ವಂಶಿ ನೀಡಿದರು. ಅಲ್ಲಿಂದ ಸುಬ್ಬರಾಜು ಹಿಂದಿರುಗಿ ನೋಡಿದ್ದೇ ಇಲ್ಲ. ಒಂದು ಸಮಯದಲ್ಲಿ ಒಂದು ವರ್ಷಕ್ಕೆ 10 ರಿಂದ 15 ಸಿನಿಮಾಗಳಲ್ಲಿ ಸುಬ್ಬರಾಜು ನಟಿಸುತ್ತಿದ್ದರು. ಈಗಲೂ ಸಹ ತೆಲುಗಿನ ಬ್ಯುಸಿ ಪೋಷಕ ನಟ ಸುಬ್ಬರಾಜು.

ಕನ್ನಡದ ‘ನಮ್ಮಣ್ಣ’, ‘ಗಜ’, ‘ಸತ್ಯ ಇನ್ ಲವ್’, ‘ಸಂಚಾರಿ’, ‘ರೋಗ್’ ಸಿನಿಮಾಗಳಲ್ಲಿ ಸುಬ್ಬರಾಜು ನಟಿಸಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಾಯಕರಾಗಿರುವ ‘ಬುಡ್ಡ ಹೋಗ ತೇರ ಬಾಪ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Wed, 27 November 24

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್