ವಾರ್ನರ್​ಗೆ ತಟ್ಟಿದ ಶಾಪ; ರಾಜಮೌಳಿ ಜೊತೆ ಕೆಲಸ ಮಾಡಿ ಅನ್​ಸೋಲ್ಡ್ ಆದ ಆಸ್ಟ್ರೇಲಿಯಾ ಆಟಗಾರ  

ರಾಜಮೌಳಿ ಅವರು ಹಲವು ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಆದರೆ, ಈ ಹೀರೋಗಳ ಮುಂದಿನ ಸಿನಿಮಾ ಸೋಲೋದು ಪಕ್ಕಾ. ಈ ಬಗ್ಗೆ ಅನೇಕರಿಗೆ ಅನುಭವ ಆಗಿದೆ. ವಾರ್ನರ್ ಅನ್​ಸೋಲ್ಡ್ ಆಗಲು ಇದೇ ಕಾರಣ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ.

ವಾರ್ನರ್​ಗೆ ತಟ್ಟಿದ ಶಾಪ; ರಾಜಮೌಳಿ ಜೊತೆ ಕೆಲಸ ಮಾಡಿ ಅನ್​ಸೋಲ್ಡ್ ಆದ ಆಸ್ಟ್ರೇಲಿಯಾ ಆಟಗಾರ  
ರಾಜಮೌಳಿ-ವಾರ್ನರ್
Follow us
ರಾಜೇಶ್ ದುಗ್ಗುಮನೆ
|

Updated on:Nov 27, 2024 | 2:58 PM

ಎಸ್​ಎಸ್​ ರಾಜಮೌಳಿ ಜೊತೆ ಸಿನಿಮಾ ಮಾಡಿದರೆ ಆ ಹೀರೋನ ಮುಂದಿನ ಸಿನಿಮಾ ಸೋಲು ಕಾಣುತ್ತದೆ ಎಂಬುದು ಅನೇಕರ ನಂಬಿಕೆ. ಕಾಕತಾಳಿಯ ಎಂಬಂತೆ ಇದು ಅನೇಕ ಬಾರಿ ನಿಜ ಕೂಡ ಆಗಿದೆ. ಜೂನಿಯರ್​ ಎನ್​ಟಿಆರ್, ರಾಮ್ ಚರಣ್ ಸೇರಿ ಅನೇಕರಿಗೆ ಈ ಅನುಭವ ಆಗಿದೆ. ಈಗ ವಾರ್ನರ್​ ಅವರಿಗೂ ರಾಜಮೌಳಿ ಜೊತೆ ಕೆಲಸ ಮಾಡಿದ ಶಾಪ ತಟ್ಟಿದೆ ಎಂದು ಅನೇಕರು ಹೇಳಿದ್ದಾರೆ! ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜಮೌಳಿ ಅವರು ಹಲವು ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಆದರೆ, ಈ ಹೀರೋಗಳ ಮುಂದಿನ ಸಿನಿಮಾ ಸೋಲೋದು ಪಕ್ಕಾ. ಈ ಬಗ್ಗೆ ಅನೇಕರಿಗೆ ಅನುಭವ ಆಗಿದೆ. ಪ್ರಭಾಸ್ ನಟನೆಯ ‘ಬಾಹುಬಲಿ 2’ ಸೂಪರ್ ಹಿಟ್ ಆಯಿತು. ನಂತರ ಬಂದ ‘ಸಾಹೋ’ ಫ್ಲಾಪ್ ಆಯಿತು. ‘ಆರ್​ಆರ್​ಆರ್​’ ಬಳಿಕ ರಾಮ್ ಚರಣ್ ಅವರು ‘ಆಚಾರ್ಯ’ ಮೂಲಕ ಸೋಲು ಕಂಡರು. ಜೂನಿಯರ್​ ಎನ್​ಟಿಆರ್ ‘ಆರ್​ಆರ್​ಆರ್​’ ಬಳಿಕ ಮಾಡಿದ ‘ದೇವರ’ ಸಾಧಾರಣ ಯಶಸ್ಸು ಕಂಡಿತು.

ಇದನ್ನೂ ಓದಿ: ‘ಆ ನಟನ ಜೊತೆ ಸಿನಿಮಾ ಮಾಡೋ ಅವಕಾಶ ತಪ್ಪಿತ್ತು’: ನಿರ್ದೇಶಕ ರಾಜಮೌಳಿ ಬೇಸರ

ಹೀಗಾಗಿ, ಇದು ಶಾಪ ಎಂದು ಅನೇಕರು ಪರಿಗಣಿಸುತ್ತಾರೆ. ಈಗ ಈ ಶಾಪ ಡೇವಿಡ್ ವಾರ್ನರ್​ಗೂ ತಟ್ಟಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ರಾಜಮೌಳಿ ಹಾಗೂ ವಾರ್ನರ್ ಕ್ರೆಡ್ ಜಾಹೀರಾತಿನಲ್ಲಿ ಒಟ್ಟಾಗಿ ನಟಿಸಿದ್ದರು. ರಾಜಮೌಳಿ ಅವರು ವಾರ್ನರ್ ಜೊತೆ ಸಿನಿಮಾ ಮಾಡುವ ರೀತಿಯಲ್ಲಿ ಜಾಹೀರಾತು ಮೂಡಿ ಬಂದಿತ್ತು.

ಈ ಜಾಹೀರಾತು ಈಗ ಮತ್ತೆ ವೈರಲ್ ಆಗಿದೆ. ರಾಜಮೌಳಿ ಅವರ ಜೊತೆ ವಾರ್ನರ್ ಕೆಲಸ ಮಾಡಿದ ಕಾರಣಕ್ಕೆ ಅವರು ಅನ್​ಸೋಲ್ಡ್ ಆಗಿ ಉಳಿದರು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ‘ರಾಜಮೌಳಿ ಶಾಪ ನಿಜ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೀಮ್​ಗಳು ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Wed, 27 November 24

Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?