AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ನಟನ ಜೊತೆ ಸಿನಿಮಾ ಮಾಡೋ ಅವಕಾಶ ತಪ್ಪಿತ್ತು’: ನಿರ್ದೇಶಕ ರಾಜಮೌಳಿ ಬೇಸರ

SS Rajamouli: ಎಸ್​ಎಸ್ ರಾಜಮೌಳಿ ಜೊತೆಗೆ ಕೆಲಸ ಮಾಡಲು ದೇಶ, ವಿದೇಶದ ನಟರು ಸಹ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಎಸ್​ಎಸ್ ರಾಜಮೌಳಿ, ‘ನಾನು ಆ ನಟನ ಜೊತೆ ಕೆಲಸ ಮಾಡುವುದು ತಪ್ಪಿಸಿಕೊಂಡೆ’ ಎಂದಿದ್ದಾರೆ. ಯಾರು ಆ ಸ್ಟಾರ್ ನಟ?

‘ಆ ನಟನ ಜೊತೆ ಸಿನಿಮಾ ಮಾಡೋ ಅವಕಾಶ ತಪ್ಪಿತ್ತು’: ನಿರ್ದೇಶಕ ರಾಜಮೌಳಿ ಬೇಸರ
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Nov 08, 2024 | 8:13 PM

Share

ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಮಾಡಿರೋ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕರ ಕನಸು. ಅದರಲ್ಲೂ ಸ್ವತಃ ರಾಜಮೌಳಿ ಅವರೇ ಆಫರ್ ಕೊಟ್ಟರೆ ಅದನ್ನು ರಿಜೆಕ್ಟ್ ಮಾಡುವವರು ಕಡಿಮೆ. ಈಗ ರಾಜಮೌಳಿ ಅವರಿಗೆ ಒಂದು ಕೊರಗು ಕಾಡಿದೆ. ಓರ್ವ ಸ್ಟಾರ್ ಹೀರೋ ಜೊತೆ ಕೆಲಸ ಮಾಡೋ ಅವಕಾಶ ತಪ್ಪಿ ಹೋಯಿತಲ್ಲ ಎಂದು ಮರುಗಿದ್ದಾರೆ. ಅವರು ಬೇರಾರೂ ಅಲ್ಲ ತಮಿಳು ನಟ ಸೂರ್ಯ.

ಸೂರ್ಯ ಅವರು ‘ಕಂಗುವ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ನವೆಂಬರ್ 14ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರೀರಿಲೀಸ್ ಈವೆಂಟ್ ನಡೆದಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ, ನಟ ವಿಶ್ವಕ್ ಸೇನ್, ಸಿದ್ದು ಜೊನ್ನಲಗಡ್ಡ, ನಿರ್ಮಾಪಕ ಅಲ್ಲು ಅರವಿಂದ್ ಬಂದಿದ್ದರು. ಈ ವೇಳೆ ಒಂದು ವಿಚಾರ ರಿವೀಲ್ ಆಗಿದೆ.

ರಾಜಮೌಳಿ ಹಾಗೂ ಸೂರ್ಯ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ‘ಕಂಗುವ’ ಈವೆಂಟ್​​ನಲ್ಲಿ ಸೂರ್ಯ ಈ ಬಗ್ಗೆ ಮಾತನಾಡಿದ್ದರು. ‘ನಾನು ಟ್ರೇನ್ನ ಮಿಸ್ ಮಾಡಿಕೊಂಡೆ. ಆದರೆ, ಇನ್ನೂ ರೈಲ್ವೆ ನಿಲ್ದಾಣದಲ್ಲೇ ಇದ್ದೇನೆ. ಒಂದು ದಿನ ಟ್ರೇನ್ನ ಸಿಗಬಹುದು ಎಂಬುದು ನನ್ನ ಆಸೆ’ ಎಂದರು ಸೂರ್ಯ.

ಇದನ್ನೂ ಓದಿ:ರಾಜಮೌಳಿ ಮುಂದಿನ ಸಿನಿಮಾ ಬಜೆಟ್ ಕೇಳಿದ್ರೆ ನೀವು ಹೌಹಾರ್ತೀರಾ

ರಾಜಮೌಳಿ ಅವರು ಈ ಬಗ್ಗೆ ಸಂತಸ ಹೊರಹಾಕಿದರು. ಸೂರ್ಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸೂರ್ಯ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನನಗೆ ಸ್ಫೂರ್ತಿ. ಅವರು ಗಜಿನಿ ಮಾಡಿ ಇಲ್ಲಿಯವರ ಪ್ರೀತಿಯನ್ನೂ ಪಡೆದರು. ಸೂರ್ಯ ಅವರು ತೆಲುಗು ಚಿತ್ರರಂಗದ ಪ್ರಯಾಣವನ್ನು ಕೇಸ್ ಸ್ಟಡಿ ಮಾಡಬಹುದು’ ಎಂದರು ರಾಜಮೌಳಿ.

ರಾಜಮೌಳಿ ಅವರಿಗೂ ಈ ಬಗ್ಗೆ ಬೇಸರ ಇದೆ. ‘ನಾನು ಸೂರ್ಯ ಜೊತೆ ಕೆಲಸ ಮಾಡೋ ಅವಕಾಶ ಕಳೆದುಕೊಂಡೆ. ನಾನು ಅವರನ್ನು ಸಾಕಷ್ಟು ಪ್ರೀತಿಸುತ್ತೇನೆ. ನನನಗೆ ಅವರ ನಟನೆ ಇಷ್ಟ. ಸೂರ್ಯ ಅವರ ನಿರ್ಧಾರ ನನಗೆ ಇಷ್ಟ. ನೀವು ಕಥೆಯನ್ನು ಆಯ್ಕೆ ಮಾಡುತ್ತೀರಿ, ಕಥೆ ಮಾಡಿದವರನ್ನಲ್ಲ’ ಎಂದರು ರಾಜಮೌಳಿ.

ಇಷ್ಟೆಲ್ಲ ಮಾತುಕತೆ ಆದಮೇಲೆ ಮುಂದಿನ ದಿನಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಬಹುದು ಎಂಬುದು ಅನೇಕರ ಊಹೆ. ‘ಕಂಗುವ’ ಸಿನಿಮಾ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ರಾಜಮೌಳಿ ಅವರು ಮಹೇಶ್ ಬಾಬು ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ