ರಾಜಮೌಳಿ ಮುಂದಿನ ಸಿನಿಮಾ ಬಜೆಟ್ ಕೇಳಿದ್ರೆ ನೀವು ಹೌಹಾರ್ತೀರಾ

ರಾಜಮೌಳಿ ಹಾಗೂ ಮಹೇಶ್ ಬಾಬು ಒಟ್ಟಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾ ಘೋಷಣೆಯಾಗಿ ಈಗಾಗಲೇ ಎರಡು ವರ್ಷವಾಗಿದೆ. ಅಂದಹಾಗೆ ಇದು ಭಾರತದ ಈ ವರೆಗಿನ ಅತಿದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾದ ಬಜೆಟ್ 1000 ಕೋಟಿ.

ರಾಜಮೌಳಿ ಮುಂದಿನ ಸಿನಿಮಾ ಬಜೆಟ್ ಕೇಳಿದ್ರೆ ನೀವು ಹೌಹಾರ್ತೀರಾ
Follow us
| Updated By: ಮಂಜುನಾಥ ಸಿ.

Updated on: Oct 29, 2024 | 6:57 PM

ರಾಜಮೌಳಿ ಅವರು ‘ಆರ್ಆರ್ಆರ್’ ಬಳಿಕ ಒಂದು ದೊಡ್ಡ ಬ್ರೇಕ್ ಪಡೆದರು. ಅವರು ಈಗ ‘SSMB 29’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಜಮೌಳಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಾ ಇದ್ದಾರೆ. ‘ಗುಂಟೂರು ಖಾರಂ’ ಸಿನಿಮಾ ಬಳಿಕ ಮಹೇಶ್ ಬಾಬು ಒಪ್ಪಿಕೊಂಡ ಸಿನಿಮಾ ಇದಾಗಿದೆ. ಈ ಚಿತ್ರಕ್ಕಾಗಿ ಅವರು ಉದ್ದನೆಯ ಕೂದಲನ್ನು ಕೂಡ ಬಿಟ್ಟಿದ್ದಾರೆ. ಈಗ ಚಿತ್ರದ ಬಜೆಟ್ ರಿವೀಲ್ ಆಗಿದ್ದು ಎಲ್ಲರಿಗೂ ಶಾಕ್ ಎನಿಸಿದೆ.

ರಾಜಮೌಳಿ ಒಂದು ಚಿತ್ರ ಆದ ಬಳಿಕ ಮುಂದಿನ ಚಿತ್ರಕ್ಕೆ ಒಂದು ಗ್ಯಾಪ್ ಪಡೆಯುತ್ತಾರೆ. ಇದಕ್ಕೆ ಕಾರಣ ಸ್ಕ್ರಿಪ್ಟ್ ಕೆಲಸ. ರಾಜಮೌಳಿ, ವಿಜಯೇಂದ್ರ ಪ್ರಸಾದ್ ಅವರು ಈಗ ‘SSMB 29’ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೊಡ್ಡ ಬಜೆಟ್ ಹಾಕಲಾಗುತ್ತಿದೆ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.

ಕೆಲವು ವರದಿಗಳ ಪ್ರಕಾರ ಈ ಚಿತ್ರದ ಬಜೆಟ್ 900-1000 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಹೌಹಾರಿದ್ದಾರೆ. ‘ಬಾಹುಬಲಿ 2’ ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತ್ತು. ಈಗ ‘SSMB 29’ ಚಿತ್ರದ ಬಜೆಟ್ ನೋಡಿ ಈ ಚಿತ್ರ ಕೂಡ ಲಾಭ ಕಾಣಬೇಕು ಎಂದರೆ ‘ಬಾಹುಬಲಿ 2’ ರೀತಿಯೇ ಕಲೆಕ್ಷನ್ ಮಾಡುವ ಅವಶ್ಯಕತೆ ಇದೆ.

ಇದನ್ನೂ ಓದಿ:ಹೊಸ ಸಿನಿಮಾದ ಬಗ್ಗೆ ಸುಳಿವು ಬಿಟ್ಟುಕೊಟ್ಟ ರಾಜಮೌಳಿ, ‘ಆರ್​ಆರ್​ಆರ್​’ ಗಿಂತಲೂ ಹೆಚ್ಚು…

ದಕ್ಷಿಣ ಭಾರತದವರಿಗೆ ಸಂಕ್ರಾಂತಿ ಸಖತ್ ವಿಶೇಷ. ಹೀಗಾಗಿ, 2025ರ ಸಂಕ್ರಾಂತಿಯಂದೇ ಸಿನಿಮಾ ಸೆಟ್ಟೇರಿಸುವ ಆಲೋಚನೆಯಲ್ಲಿ ಅವರು ಇದ್ದಾರೆ. ಈ ವಿಚಾರವಾಗಿ ಅವರು ಶೀಘ್ರವೇ ಅಧಿಕೃತ ಘೋಷಣೆ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಮಹೇಶ್ ಬಾಬು ಅವರು ಸದ್ಯಕ್ಕಂತೂ ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ. ಈ ಚಿತ್ರದ ಕೆಲಸಗಳು ಮುಗಿಯೋಕೆ ಇನ್ನು ಎರಡರಿಂದ ಮೂರು ವರ್ಷಗಳಂತೂ ಬೇಕಾಗುತ್ತವೆ. ಅಲ್ಲಿಯವರೆಗೆ ಅವರು ಯಾವುದೇ ಹೊಸ ಸಿನಿಮಾ ಮಾಡಬಾರದು ಎನ್ನುವ ನಿರ್ಧಾರ ಮಾಡಿಯಾಗಿದೆ. ರಾಜಮೌಳಿ ನಿರ್ದೇಶನ ಎಂದರೆ ಅದ್ದೂರಿತನ ಇದ್ದೇ ಇರುತ್ತದೆ. ಅದೇ ರೀತಿ ಹೆಚ್ಚಿನ ಕೆಲಸಗಳು ಕೂಡ ಇರುತ್ತವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್