
ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ವರ್ಷ ಆರಂಭದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ವಿಜಯ್ ನಟನೆಯ ‘ವಾರಿಸು’ ಸಿನಿಮಾ ಸೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೇ ಅವರ ಹೊಸ ಸಿನಿಮಾದ (Thalapathy Vijay New Movie) ಕೆಲಸಗಳು ಆರಂಭ ಆಗಿವೆ. ದಳಪತಿ ವಿಜಯ್ ನಟನೆಯ 67ನೇ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮನೆ ಮಾಡಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾವನ್ನು ‘ದಳಪತಿ 67’ (Thalapathy 67) ಎಂದು ಕರೆಯಲಾಗುತ್ತಿತ್ತು. ಈಗ ಈ ಚಿತ್ರದ ಶೀರ್ಷಿಕೆ ಅನೌನ್ಸ್ ಮಾಡುವ ಕ್ಷಣ ಹತ್ತಿರವಾಗಿದೆ. ಇಂದು (ಫೆ.3) ಸಂಜೆ 5 ಗಂಟೆಗೆ ಟೈಟಲ್ ಅನಾವರಣ ಆಗಲಿದೆ.
ದಳಪತಿ ವಿಜಯ್ ಅವರ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ ಎಂಬುದನ್ನು ತಿಳಿಸಲು ರಗಡ್ ಆದಂತಹ ಒಂದು ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದಕ್ಕೆ ಈ ಪೋಸ್ಟರ್ ವಿನ್ಯಾಸವೇ ಸಾಕ್ಷಿ ನೀಡುತ್ತಿದೆ. ಕೈಗೆ ರಕ್ತ ಮೆತ್ತಿಕೊಂಡಂತೆ ಇರುವ ದಳಪತಿ ವಿಜಯ್ ಅವರ ಸ್ಕೆಚ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: Trisha Krishnan: ದಳಪತಿ ಹೊಸ ಚಿತ್ರಕ್ಕೆ ತ್ರಿಷಾ ನಾಯಕಿ; ಇಲ್ಲಿದೆ ‘ದಳಪತಿ 67’ ಮುಹೂರ್ತದ ಫೋಟೋಗಳು
‘ದಳಪತಿ 67’ ಸಿನಿಮಾದಲ್ಲಿ ವಿಜಯ್ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ. ಫೆಬ್ರವರಿ 1ರಂದು ಈ ಸಿನಿಮಾಗೆ ಮುಹೂರ್ತ ನೆರವೇರಿತು. ಈ ವೇಳೆ ಚಿತ್ರತಂಡದ ಹಲವರು ಭಾಗಿ ಆಗಿದ್ದರು. ಈ ಸಿನಿಮಾದಲ್ಲಿ ವಿಜಯ್ ಮತ್ತು ತ್ರಿಷಾ ಜೊತೆ ಸಂಜಯ್ ದತ್, ಗೌತಮ್ ವಾಸುದೇವ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮುಂತಾದವರು ನಟಿಸಲಿದ್ದಾರೆ. ಆ ಕಾರಣದಿಂದಾಗಿ ಹೈಪ್ ಹೆಚ್ಚಾಗಿದೆ.
ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ಕುಟುಂಬದಲ್ಲಿ ಕಲಹ? ‘ವಾರಿಸು’ ರಿಲೀಸ್ ಸಮಯದಲ್ಲಿ ಹಬ್ಬಿದೆ ಡಿವೋರ್ಸ್ ಸುದ್ದಿ
ಲೋಕೇಶ್ ಕನಗರಾಜ್ ಅವರು ದಳಪತಿ ವಿಜಯ್ ಜೊತೆ ಈ ಹಿಂದೆ ‘ಮಾಸ್ಟರ್’ ಸಿನಿಮಾ ಮಾಡಿದ್ದರು. ಅಲ್ಲದೇ ಅವರು ನಿರ್ದೇಶನ ಮಾಡಿದ್ದ ‘ಕೈದಿ’ ಹಾಗೂ ‘ವಿಕ್ರಮ್’ ಸಿನಿಮಾಗಳ ಕಥೆಗೆ ಲಿಂಕ್ ನೀಡಲಾಗಿತ್ತು. ಈಗ ಆ ಚಿತ್ರಗಳ ಜೊತೆಗೆ ‘ದಳಪತಿ 67’ ಕಥೆ ಕೂಡ ಕನೆಕ್ಟ್ ಆಗಲಿದೆ ಎಂದು ಹೇಳಲಾಗುತ್ತಿದೆ.
Naanga summave kaatu kaatunu kaatuvom.. ?#Thalapathy67 TITLE is loading ■■■■■■■□□□ 67%
Revealing at 5 PM Tomorrow ?#Thalapathy @actorvijay sir @Dir_Lokesh @trishtrashers @anirudhofficial @Jagadishbliss#Thalapathy67TitleReveal pic.twitter.com/FU61rBU55g
— Seven Screen Studio (@7screenstudio) February 2, 2023
ಈ ಚಿತ್ರಕ್ಕೆ ‘ಸೆವೆನ್ ಗ್ರೀನ್ ಸ್ಟುಡಿಯೋ’ ಬಂಡವಾಳ ಹೂಡುತ್ತಿದೆ. ಚಿತ್ರೀಕರಣ ಆರಂಭ ಆಗುತ್ತಿದ್ದಂತೆಯೇ ಈ ಸಿನಿಮಾದ ಬಿಸ್ನೆಸ್ ಕೂಡ ಭರ್ಜರಿಯಾಗಿ ನಡೆದಿದೆ. ಇದರ ಕಿರುತೆರೆ ಪ್ರಸಾರ ಹಕ್ಕನ್ನು ಸನ್ ಟಿವಿ ಖರೀದಿಸಿದೆ. ಒಟಿಟಿ ಹಕ್ಕುಗಳು ನೆಟ್ಫ್ಲಿಕ್ಸ್ ಪಾಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:05 am, Fri, 3 February 23