ಪ್ರಚಾರಕ್ಕಾಗಿ ಕಳ್ಳ ಹಾದಿ ಹಿಡಿದ ‘ವಲಿಮೈ’ ತಂಡ? ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಚರ್ಚೆ

TV9 Digital Desk

| Edited By: Rajesh Duggumane

Updated on: Feb 15, 2022 | 6:04 AM

‘ವಲಿಮೈ’ ಚಿತ್ರದ ಟ್ರೇಲರ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಜಿತ್​ ಮಾಡಿರುವ ಬೈಕ್​ ಸ್ಟಂಟ್ಸ್ ಮೈ ನವಿರೇಳಿಸುವಂತಿದೆ. ಬೈಕ್ ಸ್ಟಂಟ್​ಗಳ ಪೈಕಿ ಅನೇಕ ಸ್ಟಂಟ್​​ಗಳನ್ನು ಡೂಪ್​ ಬಳಸದೇ ಅಜಿತ್​ ಅವರೇ ಮಾಡಿದ್ದಾರೆ.

ಪ್ರಚಾರಕ್ಕಾಗಿ ಕಳ್ಳ ಹಾದಿ ಹಿಡಿದ ‘ವಲಿಮೈ’ ತಂಡ? ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಚರ್ಚೆ
ವಲಿಮೈ

ಅಜಿತ್​ ಕುಮಾರ್​ (Ajith Kumar) ನಟನೆಯ ‘ವಲಿಮೈ’ ಚಿತ್ರ (Valimai Movie) ರಿಲೀಸ್​ಗೆ ರೆಡಿ ಆಗಿದೆ. ಫೆಬ್ರವರಿ 24ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಗೆ ಬರುತ್ತಿದೆ. ಅಜಿತ್ ಈ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಚಿತ್ರದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿದೆ. ಚಿತ್ರದ ಟ್ರೇಲರ್​ ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಈಗ ಸಿನಿಮಾ ತಂಡ ಗಂಭೀರ ಆರೋಪ ಒಂದಕ್ಕೆ ತುತ್ತಾಗಿದೆ. ಪ್ರಚಾರಕ್ಕಾಗಿ ಈ ತಂಡ ಕಳ್ಳ ಹಾದಿ ಹಿಡಿದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.  

‘ವಲಿಮೈ’ ಚಿತ್ರದ ಟ್ರೇಲರ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಜಿತ್​ ಮಾಡಿರುವ ಬೈಕ್​ ಸ್ಟಂಟ್ಸ್ ಮೈ ನವಿರೇಳಿಸುವಂತಿದೆ. ಬೈಕ್ ಸ್ಟಂಟ್​ಗಳ ಪೈಕಿ ಅನೇಕ ಸ್ಟಂಟ್​​ಗಳನ್ನು ಡೂಪ್​ ಬಳಸದೇ ಅಜಿತ್​ ಅವರೇ ಮಾಡಿದ್ದಾರೆ. ಇದಕ್ಕೆ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಚಿತ್ರತಂಡ ಪ್ರೋಮೋ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿತ್ತು. ಈ ವಿಡಿಯೋಗೆ ಜನ ಮನ್ನಣೆ ಸಿಕ್ಕಿತ್ತು. ಇದುವೇ ಈಗ ಚಿತ್ರತಂಡಕ್ಕೆ ಸಮಸ್ಯೆ ತಂದೊಡ್ಡಿದೆ.

ಇತ್ತೀಚೆಗೆ ರಿಲೀಸ್​ ಆದ ಗ್ಲಿಂಪ್ಸ್​ ವಿಡಿಯೋ ಒಂದೇ ಗಂಟೆಯಲ್ಲಿ 30 ಸಾವಿರ ಲೈಕ್ಸ್​ ಹಾಗೂ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಬಾಟ್​​ಗಳನ್ನು ಬಳಸಿ ಚಿತ್ರತಂಡ ಈ ರೀತಿಯ ಲೈಕ್ಸ್​ ಪಡೆದುಕೊಂಡಿದೆ ಎಂದು ‘ದಳಪತಿ’ ವಿಜಯ್​ ಅಭಿಮಾನಿಗಳು ಗಂಭೀರ ಆರೋಪವನ್ನು ಮಾಡಿದ್ದಾರೆ! ಈ ವಿಚಾರ ಅಜಿತ್ ಅಭಿಮಾನಿಗಳ ಸಿಟ್ಟನ್ನು ಕೆರಳಿಸಿದೆ. ಅವರು ವಿಜಯ್​ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದಾರೆ.

ಅಜಿತ್​ ಹಾಗೂ ವಿಜಯ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ ಈ ಮೊದಲೂ ಕೂಡ ಅನೇಕ ಬಾರಿ ಈ ಅಭಿಮಾನಿಗಳು ಕಿತ್ತಾಡಿಕೊಂಡಿದ್ದಿದೆ. ಈಗ ‘ವಲಿಮೈ’ ಚಿತ್ರದ ವಿಚಾರ ಇಟ್ಟುಕೊಂಡು ಜಗಳ ಮಾಡಿಕೊಂಡಿದ್ದಾರೆ. ValimaiPaidLikesExposed ಎನ್ನುವ ಹ್ಯಾಶ್​ಟ್ಯಾಗ್​ ಟ್ರೆಂಡ್ ಆಗಿದೆ.

ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಬಂಡವಾಳ ಹೂಡಿದ್ದಾರೆ. ​ಎಚ್​. ವಿನೋದ್​ ನಿರ್ದೇಶನ ಮಾಡಿದ್ದು, ಆ್ಯಕ್ಷನ್​ ಅವತಾರದಲ್ಲಿ ಅಜಿತ್​ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ರಿಲೀಸ್​ ದಿನಾಂಕದ ಬಗ್ಗೆ ಟ್ವೀಟ್​ ಮಾಡಿದ್ದ ಬೋನಿ ಕಪೂರ್​ ನಿರೀಕ್ಷೆ ಹೆಚ್ಚಿಸಿದ್ದರು. ‘ಪದಗಳಿಗಿಂತಲೂ ಕೆಲಸ ಹೆಚ್ಚು ಮಾತನಾಡುತ್ತದೆ. ಕಾಯುವಿಕೆಗೆ ಈಗ ತೆರೆಬಿದ್ದಿದೆ. ಫೆ.24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಫೀಲ್​ ದ ಪವರ್​’ ಎಂದು ಬೋನಿ ಕಪೂರ್​ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: Valimai: ಬೈಕ್​ ಸ್ಟಂಟ್​ ಮಾಡುತ್ತ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ಅಜಿತ್​; ಹೇಗಿದೆ ಗೊತ್ತಾ ‘ವಲಿಮೈ’ ಝಲಕ್​​?

ರಿಲೀಸ್ ಡೇಟ್​​ ಘೋಷಿಸಿಕೊಂಡ ಅಜಿತ್​ ‘ವಲಿಮೈ’ ಚಿತ್ರ; ಕನ್ನಡ ಸಿನಿಮಾಗಳು ನೀಡಲಿವೆ ಪೈಪೋಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada