
ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಬಹುನಿರೀಕ್ಷಿತ ಮತ್ತು ಚರ್ಚೆಗೆ ಗ್ರಾಸವಾದ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಶೀಘ್ರದಲ್ಲೇ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಇದು ಈ ಕಾರ್ಯಕ್ರಮದ ಮೂರನೇ ಸೀಸನ್ ಆಗಿದ್ದು, ನಟ ಸಲ್ಮಾನ್ ಖಾನ್ ಇದರ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಕಪಿಲ್ ಒಂದೇ ವೇದಿಕೆಗೆ ಬಂದ ನಂತರ ಸಾಕಷ್ಟು ಮಜಾ ಇರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಸಂಚಿಕೆಯ ಪ್ರೋಮೋವನ್ನು ನೋಡುವ ಮೂಲಕ ಇದನ್ನು ಊಹಿಸಬಹುದು. ಕಪಿಲ್ ಕಾರ್ಯಕ್ರಮದ ಮೊದಲ ಸಂಚಿಕೆಯ ಪ್ರೋಮೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆಹ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ. ಈ ಸಂಚಿಕೆಯಲ್ಲಿ, ಸಲ್ಮಾನ್, ಆಮಿರ್ ಖಾನ್ ಅವರ ಸಂಬಂಧವನ್ನು ಸಹ ಅಪಹಾಸ್ಯ ಮಾಡಲಿದ್ದಾರೆ.
ಸಲ್ಮಾನ್ ಅವರ ‘ಸಿಕಂದರ್’ ಚಿತ್ರ ಕೆಲವು ದಿನಗಳ ಹಿಂದೆ ಬಿಡುಗಡೆಯಾಯಿತು. ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಗಳಿಕೆ ಮಾಡಲಿಲ್ಲ. ಈಗ ಕಪಿಲ್ ಅವರ ಶೋನಲ್ಲಿ, ಅವರು ‘ಸಿಕಂದರ್’ ಚಿತ್ರದ ಕಳಪೆ ಗಳಿಕೆಯ ಬಗ್ಗೆ ಗೇಲಿ ಮಾಡುವುದನ್ನು ಕಾಣಬಹುದು. ಸಲ್ಮಾನ್ ಅವರಂತೆಯೇ ಕಾಣುವ ವ್ಯಕ್ತಿ ಈ ಶೋಗೆ ಬರುತ್ತಾರೆ. ಈ ವ್ಯಕ್ತಿ ‘ತೇರೆ ನಾಮ್’ ಚಿತ್ರದಲ್ಲಿ ಸಲ್ಮಾನ್ ಅವರಂತೆಯೇ ಕಾಣಿಸಿಕೊಳ್ಳುತ್ತಾರೆ. ಅವರನ್ನು ನೋಡಿದ ಸಲ್ಮಾನ್, ‘ಕೆಲಸ ಚೆನ್ನಾಗಿ ನಡೆಯುತ್ತಿದೆಯೇ? ಸಿಕಂದರ್ ಯಾವುದೇ ವ್ಯತ್ಯಾಸವನ್ನುಂಟು ಮಾಡಿಲ್ಲವೇ?’ ಎಂದು ಕೇಳುತ್ತಾರೆ. ಸಲ್ಮಾನ್ ತಮ್ಮದೇ ಸಿನಿಮಾವನ್ನು ಗೇಲಿ ಮಾಡುತ್ತಾ ಜೋರಾಗಿ ನಗಲು ಪ್ರಾರಂಭಿಸುತ್ತಾರೆ. ಅವರನ್ನು ನೋಡಿದ ಕಪಿಲ್ ಮತ್ತು ಪ್ರೇಕ್ಷಕರು ಕೂಡ ನಗಲು ಪ್ರಾರಂಭಿಸುತ್ತಾರೆ.
ಇದಾದ ನಂತರ, ಕಪಿಲ್ ಅವರ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಮತ್ತು ಅವರ ಗೆಳತಿ ಗೌರಿ ನಡುವಿನ ಸಂಬಂಧದ ಬಗ್ಗೆ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ. ಕಪಿಲ್ ಶರ್ಮಾ ನಗುತ್ತಾ ಸಲ್ಮಾನ್ ಅವರನ್ನು ಕೇಳುತ್ತಾರೆ, ‘ಆಮಿರ್ ಭಾಯ್ ನಿಮ್ಮೆಲ್ಲರಿಗೂ ತನ್ನ ಗೆಳತಿಯನ್ನು ಪರಿಚಯಿಸಿದ್ದಾರೆ. ಅವರು ಮದುವೆ ಆಗೋದನ್ನು ನಿಲ್ಲಿಸುತ್ತಿಲ್ಲ ಮತ್ತು ನೀವು ಮದುವೆಯಾಗುತ್ತಿಲ್ಲ’ ಎಂದರು. ಇದಕ್ಕೆ ಸಲ್ಮಾನ್ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಾರೆ. ‘ಆಮಿರ್ ಕಥೆ ವಿಭಿನ್ನವಾಗಿದೆ. ಅವರು ಪರಿಪೂರ್ಣತಾವಾದಿ. ಅವರು ಮದುವೆಯನ್ನು ಪರಿಪೂರ್ಣವಾಗಿಸದಿದ್ದರೆ..” ಅವರು ಇದನ್ನು ಹೇಳಿದ ತಕ್ಷಣ, ಎಲ್ಲರೂ ಜೋರಾಗಿ ನಗಲು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಸಲ್ಮಾನ್ ಕೂಡ ನಗುತ್ತಾರೆ.
ಇದನ್ನೂ ಓದಿ: ಆಮಿರ್ ಖಾನ್ ಸಿನಿಮಾದ ಗೆಲುವಿಗಾಗಿ ಕೈ ಜೋಡಿಸಲಿದ್ದಾರೆ ಶಾರುಖ್, ಸಲ್ಮಾನ್
ಆಮಿರ್ ಖಾನ್ ಪ್ರಸ್ತುತ ಗೌರಿ ಸ್ಪ್ರಾಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆಮಿರ್ ತಮ್ಮ 60 ನೇ ಹುಟ್ಟುಹಬ್ಬದಂದು ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅವರು ಗೌರಿಯನ್ನು ಸಲ್ಮಾನ್ ಮತ್ತು ಶಾರುಖ್ ಖಾನ್ ಅವರಿಗೆ ಪರಿಚಯಿಸಿದ್ದರು. ಆಮಿರ್ ಈ ಹಿಂದೆ ಎರಡು ಬಾರಿ ವಿವಾಹವಾದರು. ಅವರು ಮೊದಲು ರೀನಾ ದತ್ತಾ ಮತ್ತು ಎರಡನೇ ಬಾರಿಗೆ ಕಿರಣ್ ರಾವ್ ಅವರನ್ನು ವಿವಾಹವಾದರು. ಅವರು ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.