ದಕ್ಷಿಣದ ಟಾಪ್ ಐದು ಶ್ರೀಮಂತ ಹೀರೋಗಳು ಇವರೇ ನೋಡಿ
ಪ್ರತಿ ಸಿನಿಮಾ ಹಿಟ್ ಆದಾಗ ನಟರ ಸಂಭಾವನೆ ಹೆಚ್ಚುತ್ತದೆ. 2023ನೇ ಸಾಲಿನ ಶ್ರೀಮಂತ ಹೀರೋಗಳ ಬಗ್ಗೆ ಇಲ್ಲಿದೆ ವಿವರ.

ದಕ್ಷಿಣ ಭಾರತದ ಚಿತ್ರರಂಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಭಾರತ ಚಿತ್ರರಂಗ ಎಂದರೆ ಕೇವಲ ಬಾಲಿವುಡ್ (Bollywood) ಮಾತ್ರವಲ್ಲ ಎಂಬುದು ಬಹುತೇಕರಿಗೆ ಗೊತ್ತಾಗಿದೆ. ಬಾಲಿವುಡ್ ಸಿನಿಮಾಗಳು ಕಲೆಕ್ಷನ್ ಮಾಡಲು ಪರದಾಡುತ್ತಿರುವ ಸಮಯದಲ್ಲಿ ದಕ್ಷಿಣದ ಸಿನಿಮಾಗಳು ಅಬ್ಬರಿಸುತ್ತಿವೆ. ‘ಕೆಜಿಎಫ್ 2’, ‘ಆರ್ಆರ್ಆರ್’, ‘ಬಾಹುಬಲಿ’ (Bahubali) ಸಿನಿಮಾಗಳು ವಿದೇಶದಲ್ಲೂ ಸದ್ದು ಮಾಡಿವೆ. ಪ್ರತಿ ಸಿನಿಮಾ ಹಿಟ್ ಆದಾಗ ನಟರ ಸಂಭಾವನೆ ಹೆಚ್ಚುತ್ತದೆ. 2023ನೇ ಸಾಲಿನ ಶ್ರೀಮಂತ ಹೀರೋಗಳ ಬಗ್ಗೆ ಇಲ್ಲಿದೆ ವಿವರ.
ಅಕ್ಕಿನೇನಿ ನಾಗಾರ್ಜುನ
ನಾಗಾರ್ಜುನ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ನಟನೆ ಮಾತ್ರವಲ್ಲದೆ ಬಿಗ್ ಬಾಸ್ ನಿರೂಪಣೆ ಮಾಡಿಯೂ ಫೇಮಸ್ ಆಗಿದ್ದಾರೆ. ಅವರ ನೆಟ್ವರ್ತ್ 3010 ಕೋಟಿ ರೂಪಾಯಿ ಇದೆ.
ರಾಮ್ ಚರಣ್
‘ಆರ್ಆರ್ಆರ್’ ಚಿತ್ರದಿಂದ ರಾಮ್ ಚರಣ್ ಅವರ ಖ್ಯಾತಿ ಹೆಚ್ಚಿದೆ. ಅವರು ಆಸ್ಕರ್ ಕಾರ್ಯಕ್ರಮದಲ್ಲೂ ಮಿಂಚಿದ್ದಾರೆ. ರಾಮ್ ಚರಣ್ ಅವರು ದಕ್ಷಿಣದ ಶ್ರೀಮಂತ ಹೀರೋಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಸ್ವಂತ ವಿಮಾನವನ್ನು ಹೊಂದಿದ್ದಾರೆ. ಇವರ ಒಟ್ಟೂ ಆಸ್ತಿ 1370 ಕೋಟಿ ರೂಪಾಯಿ ಎನ್ನಲಾಗಿದೆ.
ಕಮಲ್ ಹಾಸನ್
ಕಮಲ್ ಹಾಸನ್ ಅವರು ಟ್ಯಾಲೆಂಟೆಡ್ ಹೀರೋ. ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ, ನಿರ್ದೇಶನ, ನಿರ್ಮಾಣ, ಗಾಯನದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ಅವರ ಆಸ್ತಿ 450 ಕೋಟಿ ರೂಪಾಯಿ ಇದೆ.
ದಳಪತಿ ವಿಜಯ್
ದಳಪತಿ ವಿಜಯ್ ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಬಹುಬೇಡಿಕೆಯ ನಟ. ಅವರು ರಾಜಕೀಯಕ್ಕೂ ಬರುತ್ತಾರೆ ಎನ್ನಲಾಗಿದೆ. ಅವರ ಒಟ್ಟೂ ಆಸ್ತಿ 445 ಕೋಟಿ ರೂಪಾಯಿ ಇದೆ ಎಂದು ವರದಿ ಆಗಿದೆ.
ಇದನ್ನೂ ಓದಿ: ದಳಪತಿ ವಿಜಯ್ ರಾಜಕೀಯದ ಎಂಟ್ರಿಗೆ ರಜನಿಕಾಂತ್, ಅಜಿತ್ ಫ್ಯಾನ್ಸ್ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್
ರಜನಿಕಾಂತ್
ರಜನಿಕಾಂತ್ ಅವರು ಕರ್ನಾಟಕದವರು. ಅವರು ಬದುಕು ಕಟ್ಟಿಕೊಂಡಿದ್ದು ತಮಿಳಿನಲ್ಲಿ. ಸೂಪರ್ ಸ್ಟಾರ್ ಎಂದೇ ಅವರು ಫೇಮಸ್. ಅವರ ಒಟ್ಟೂ ಆಸ್ತಿ 430 ಕೋಟಿ ರೂಪಾಯಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ