Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟಿಎಸ್ ಅನ್ನು ಭೇಟಿಯಾಗಲು ಮನೆ ಬಿಟ್ಟು ಹೊರಟ ಮೂವರು ಬಾಲಕಿಯರು, ಮುಂದಾಗಿದ್ದೇನು?

BTS: ದಕ್ಷಿಣ ಕೊರಿಯಾದ ಜನಪ್ರಿಯ ಸಂಗೀತ ಬ್ಯಾಂಡ್ ಬಿಟಿಎಸ್ ಅನ್ನು ಭೇಟಿ ಆಗಲು ಮೂವರು ಬಾಲಕಿಯರು 14 ಸಾವಿರ ಹಣ ಇಟ್ಟುಕೊಂಡು ಮನೆ ಬಿಟ್ಟು ಹೋಗಿದ್ದರು. ಮುಂದೇನಾಯ್ತು?

ಬಿಟಿಎಸ್ ಅನ್ನು ಭೇಟಿಯಾಗಲು ಮನೆ ಬಿಟ್ಟು ಹೊರಟ ಮೂವರು ಬಾಲಕಿಯರು, ಮುಂದಾಗಿದ್ದೇನು?
Follow us
ಮಂಜುನಾಥ ಸಿ.
|

Updated on: Jan 09, 2024 | 2:23 PM

ಬಿಟಿಎಸ್ (BTS) ಜಗದ್ವಿಖ್ಯಾತ ಸಂಗೀತ ಬ್ಯಾಂಡ್. ಏಳು ಮಂದಿ ಯುವಕರ ಈ ಬ್ಯಾಂಡ್​ಗೆ ಜಗತ್ತಿನಾದ್ಯಂತ ನೂರಾರು ಕೋಟಿ ಅಭಿಮಾನಿಗಳಿದ್ದಾರೆ. ಭಾರತದಲ್ಲಿಯೂ ಸಹ ಬಿಟಿಎಸ್​ನ ಕ್ರೇಜ್ ಭಾರಿ ದೊಡ್ಡ ಮಟ್ಟದಲ್ಲಿಯೇ ಇದೆ. ಅವರ ಶೋಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರಯಾಣ ಮಾಡುವ ಅಭಿಮಾನಿಗಳೂ ಇದ್ದಾರೆ. ಬಿಟಿಎಸ್​ನ ಅಭಿಮಾನಿಗಳಲ್ಲಿ ಯುವತಿಯರೇ ಹೆಚ್ಚು. ಬಿಟಿಎಸ್ ಬ್ಯಾಂಡ್ ಅನ್ನು ಖುದ್ದಾಗಿ ಭೇಟಿ ಆಗುವ ಕನಸು ಕಾಣುತ್ತಿರುವ ಕೋಟ್ಯಂತರ ಮಂದಿ ಹೆಂಗೆಳೆಯರು ಭಾರತದಲ್ಲಿದ್ದಾರೆ. ಆದರೆ ತಮಿಳುನಾಡಿನ ಮೂವರು ಬಾಲಕಿಯರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮೆಚ್ಚಿನ ಬಿಟಿಎಸ್ ಅನ್ನು ಭೇಟಿ ಮಾಡಲು ಮನೆ ಬಿಟ್ಟು ತೆರಳಿದ್ದಾರೆ.

ತಮಿಳುನಾಡಿನ ಕರೂರು ಜಿಲ್ಲೆಯ ಶಾಲೆಯೊಂದರಲ್ಲಿ ಎಂಟನೇ ತರಗತಿ ಓದುತ್ತಿರುವ ಮೂವರು ಬಾಲಕಿಯರಿಗೆ ಬಿಟಿಎಸ್ ಎಂದರೆ ಪಂಚ ಪ್ರಾಣ. ಅವರ ಹಾಡುಗಳು, ಡ್ಯಾನ್ಸ್ ನೋಡುತ್ತಾ ಅಭಿಮಾನ ಬೆಳೆಸಿಕೊಂಡ ಈ ಬಾಲಕಿಯರು, ಬಿಟಿಎಸ್ ಅನ್ನು ಭೇಟಿ ಆಗಲೆಂದು ಒಟ್ಟಿಗೆ ಮನೆ ಬಿಟ್ಟು ತೆರಳಿದ್ದರು. 14 ಸಾವಿರ ರೂಪಾಯಿ ಹಣ ಒಟ್ಟು ಮಾಡಿಕೊಂಡ ಈ ಬಾಲಕಿಯರು, ಅಷ್ಟು ಕಡಿಮೆ ಮೊತ್ತದಲ್ಲಿ ದಕ್ಷಿಣ ಕೊರಯಾದ ಸಿಯೋಲ್​ಗೆ ತೆರಳುವ ಯೋಜನೆ ಹಾಕಿಕೊಂಡು, ಸಮುದ್ರ ದಾರಿಯ ಮೂಲಕ ದಕ್ಷಿಣ ಕೊರಿಯಾಕ್ಕೆ ಹೋಗುವ ಪ್ಲಾನ್ ಮಾಡಿದರು.

ಬಳಿಕ ತಮಿಳುನಾಡಿನ ಕರೂರಿನ ಸಮೀಪದ ಇರೋಡಿನಿಂದ ಚೆನ್ನೈಗೆ ಹೋಗಿ ಅಲ್ಲಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ ಹೋಗಿ ಅಲ್ಲಿಂದ ದಕ್ಷಿಣ ಕೊರಿಯಾದ ಸಿಯೋಲ್​ಗೆ ಹೋಗುವ ಶಿಫ್​ ಅನ್ನು ಏರುವ ಯೋಜನೆ ಮಾಡಿಕೊಂಡು, ಜನವರಿ 4ರಂದು ಮನೆ ಬಿಟ್ಟು ಮೊದಲು ಬಸ್ ಏರಿ ಚೆನ್ನೈಗೆ ಬಂದಿದ್ದಾರೆ ಮೂವರು ಬಾಲಕಿಯರು. ಅಲ್ಲಿ ಹೇಗೋ ಮಾಡಿ ಹೋಟೆಲ್ ರೂಂ ಮಾಡಿಕೊಂಡು ರಾತ್ರಿ ಕಳೆದಿದ್ದಾರೆ. ಮನೆಯಿಂದ ಹೊರಡುವಾಗ ಇದ್ದ ಉತ್ಸಾಹ ಚೆನ್ನೈ ತಲುಪಿ ಅಲ್ಲಿ ಒಂದು ರಾತ್ರಿ ಕಳೆಯುವಷ್ಟರಲ್ಲಿ ಕಮರಿ ಹೋಗಿದೆ. ಹಾಗಾಗಿ ಬೆಳಿಗ್ಗೆ ಎದ್ದು ಮರಳಿ ಊರಿಗೆ ಹೋಗಲೆಂದು ರೈಲು ಹತ್ತಿದ್ದಾರೆ. ಆದರೆ ರೈಲು ಕಟ್ಪಾಡಿ ಸ್ಟೇಷನ್​ಗೆ ಬಂದಾಗ ತಿಂಡಿ ತಿನ್ನಲೆಂದು ಕೆಳಗೆ ಇಳಿದಾಗ ರೈಲು ತಪ್ಪಿ ಹೋಗಿದೆ.

ಇದನ್ನೂ ಓದಿ:ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್​ಆರ್​ಕೆ ಲೆಜೆಂಡ್ ಎಂದ ನಿರ್ದೇಶಕಿ

ಕಟ್ಪಾಡಿಯಲ್ಲಿ ಮೂವರು ಬಾಲಕಿಯರು ದಿಕ್ಕು ದೋಚದಂತೆ ಅತ್ತ-ಇತ್ತ ಸುಳಿದಾಡುತ್ತಿರುವಾಗ ರೈಲ್ವೆ ಸಿಬ್ಬಂದಿ ಆ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆ ಬಾಲಕಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಅವರನ್ನು ವೆಲ್ಲೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಶಕ್ಕೆ ನೀಡಿದ್ದಾರೆ. ಮೂವರು ಬಾಲಕಿಯರಿಂದ ಅವರ ಪೋಷಕರ ವಿಳಾಸ, ಫೋನ್ ನಂಬರ್ ಇತರೆ ಮಾಹಿತಿಗಳನ್ನು ಪಡೆದುಕೊಂಡ ಇಲಾಖೆ ಸಿಬ್ಬಂದಿ ಅವರಿಗೆ ಉಳಿದುಕೊಳ್ಳಲು, ಆಹಾರಕ್ಕೆ ವ್ಯವಸ್ಥೆ ಮಾಡಿ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮೂವರು ಬಾಲಕಿಯರಿಗೆ ಕೌನ್ಸಲಿಂಗ್ ಮಾಡಿ, ಅವರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಸಹ ಮಾಡಲಾಗಿದೆ. ಬಳಿಕ ಅವರ ಪೋಷಕರಿಗೆ ಬಾಲಕಿಯರನ್ನು ಒಪ್ಪಿಸಲಾಗಿದೆ.

ಮೂವರು ಬಾಲಕಿಯರಿಗೆ ಬಿಟಿಎಸ್ ಎಂದರೆ ಬಹಳ ಇಷ್ಟವಂತೆ. ಅವರು ಧರಿಸುವ ಮಾದರಿಯದ್ದೇ ಶೂಗಳನ್ನು ಧರಿಸುವುದು, ಅವರ ಚಿತ್ರಗಳನ್ನು ಸಂಗ್ರಹಿಸುವುದು ಮಾಡುತ್ತಿದ್ದರಂತೆ. ಅವರ ರೀತಿಯ ಬಟ್ಟೆಗಳನ್ನು ಧರಿಸುತ್ತಿದ್ದರಂತೆ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..