AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಥಗ್ ಲೈಫ್’ ಬಿಡುಗಡೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ

Kamal Haasan: ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆ, ಸುಪ್ರೀಂ ಕೋರ್ಟ್ ಬಿಡುಗಡೆಗೆ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಚಿತ್ರಮಂದಿರಗಳ ಭದ್ರತೆ ಒದಗಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆದರೆ, ಹಂಚಿಕೆದಾರರು ಹಿಂದೆ ಸರಿದಿರುವುದರಿಂದ ಚಿತ್ರದ ಬಿಡುಗಡೆ ಪ್ರಶ್ನಾರ್ಹವಾಗಿದೆ.

‘ಥಗ್ ಲೈಫ್’ ಬಿಡುಗಡೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ
ಥಗ್ ಲೈಫ್
ರಾಜೇಶ್ ದುಗ್ಗುಮನೆ
|

Updated on:Jun 19, 2025 | 2:56 PM

Share

ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ (Thug Life Movie) ಬಿಡುಗಡೆಯಾದರೆ ಥಿಯೇಟರ್​ಗಳನ್ನು ಸುಟ್ಟು ಹಾಕೋದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಸಿನಿಮಾ ನಿರ್ಮಾಪಕ ಕಮಲ್ ಹಾಸನ್ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುವಾಗಲೇ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅವರ ಪರವಾಗಿ ತೀರ್ಪು ಬಂದಿದೆ. ಚಿತ್ರ ಬಿಡುಗಡೆಗೆ ಪೂರ್ಣ ಪ್ರಮಾಣದಲ್ಲಿ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆಯನ್ನ ನೀಡಿದೆ.

ಚಿತ್ರ ಬಿಡುಗಡೆ ವೇಳೆ ಗಲಾಟೆ, ಪ್ರತಿಭಟನೆ ಆಗಬಹುದು ಎಂಬುದು ‘ಥಗ್ ಲೈಫ್’ ಚಿತ್ರದ ಆತಂಕ. ಇದೇ ಆತಂಕದಲ್ಲಿ ತಂಡ ಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾ ಪ್ರದರ್ಶನ ವೇಳೆ ಪ್ರತಿಭಟನೆ ಹಾಗೂ ಗಲಾಟೆ ಆದರೆ, ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಈಗ ಈ ಚಿತ್ರದ ಹಂಚಿಕೆಗೆ ಯಾರು ಮುಂದೆ ಬರುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:

ಇದನ್ನೂ ಓದಿ
Image
ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
Image
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
Image
ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿಲ್ಲ..

ರಾಜ್ಯ ಸರ್ಕಾರದ ಪರ ವಕೀಲರು ಕೋರ್ಟ್​ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಥಗ್​ಲೈಫ್ ಸಿನಿಮಾ ಬಿಡುಗಡೆ ಮಾಡಲು ನಿಷೇಧ ಹೇರಿಲ್ಲ. ಚಿತ್ರ ಬಿಡುಗಡೆ ವೇಳೆ ಭದ್ರತೆಯನ್ನು ನೀಡಲು ಸಿದ್ಧವಿದ್ದೇವೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ‘ಚಿತ್ರ ಬಿಡುಗಡೆಯಾದರೆ ಸಿನಿಮಾ ಮಂದಿರಕ್ಕೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ. ಈ ಭಯದಲ್ಲಿ ನಿರ್ಮಾಪಕರು ಸಿನಿಮಾನ ಹೇಗೆ ಬಿಡುಗಡೆ ಮಾಡುತ್ತಾರೆ? ಚಿತ್ರ ಬಿಡುಗಡೆ ವೇಳೆ ಭದ್ರತೆ ನೀಡುವುದು ರಾಜ್ಯದ ಕರ್ತವ್ಯ’ ಎಂದು ಕೋರ್ಟ್ ಹೇಳಿದೆ.

ಹಂಚಿಕೆದಾರರೇ ಇಲ್ಲ..

ಸದ್ಯ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ಕಮಲ್ ಹಾಸನ್ ಅವರು ರೆಡಿ ಇದ್ದಾರೆ. ಆದರೆ, ಈಗಾಗಲೇ ಸಿನಿಮಾದ ಹಂಚಿಕೆ ಜವಾಬ್ದಾರಿ ತೆಗೆದುಕೊಂಡಿದ್ದ ವೆಂಕಟೇಶ್ ಅವರು ಸಿನಿಮಾ ಹಂಚಿಕೆಯಿಂದ ಹಿಂದೆ ಸರಿದಾಗಿದೆ. ಈಗ ಆ ಜಾಗಕ್ಕೆ ಯಾರು ಬರುತ್ತಾರೆ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:54 pm, Thu, 19 June 25