Allu Arjun: ‘ಪುಷ್ಪ 2’ ಪೋಸ್ಟರ್​ ರೀತಿ ವೇಷ ಧರಿಸಿ ಬಂದ ಸಂಸದ; ಅಲ್ಲು ಅರ್ಜುನ್​ ಅಭಿಮಾನಿಗಳಲ್ಲಿ ಹೆಚ್ಚಿತು ಕ್ರೇಜ್​

ಗಂಗಮ್ಮ ಜಾತ್ರೆಯಲ್ಲಿ ಈ ರೀತಿ ವೇಷ ಹಾಕಿಕೊಂಡು ಪೂಜೆ ಸಲ್ಲಿಸುವ ಪದ್ಧತಿ ಇದೆ. ಸಂಸದ ಗುರುಮೂರ್ತಿ ಅವರು ಈಗ ಯಥಾವತ್ತು ಅಲ್ಲು ಅರ್ಜುನ್​ ರೀತಿ ವೇಷ ಧರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ.

Allu Arjun: ‘ಪುಷ್ಪ 2’ ಪೋಸ್ಟರ್​ ರೀತಿ ವೇಷ ಧರಿಸಿ ಬಂದ ಸಂಸದ; ಅಲ್ಲು ಅರ್ಜುನ್​ ಅಭಿಮಾನಿಗಳಲ್ಲಿ ಹೆಚ್ಚಿತು ಕ್ರೇಜ್​
ಪುಷ್ಪ 2 ವೈರಲ್ ಲುಕ್

Updated on: May 17, 2023 | 5:57 PM

ನಟ ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ’ ಸಿನಿಮಾದಿಂದ ಭರ್ಜರಿ ಗೆಲುವು ಕಂಡರು. ಈಗ ಅವರು ‘ಪುಷ್ಪ 2’ (Pushpa 2 Movie) ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿತ್ತು. ಡಿಫರೆಂಟ್​ ಗೆಟಪ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. ಅಭಿಮಾನಿಗಳ ವಲಯದಲ್ಲಿ ಆ ಪೋಸ್ಟರ್​ ವೈರಲ್​ ಆಗಿದೆ. ಅಲ್ಲದೇ ಅನೇಕರು ಅದೇ ರೀತಿ ವೇಷ ಧರಿಸಿಕೊಂಡು ರೀಲ್ಸ್​ ಮಾಡಿ ಗಮನ ಸೆಳೆದಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಖ್ಯಾತನಾಮರು ಕೂಡ ಇದೇ ಟ್ರೆಂಡ್​ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್​ ಉದಾಹರಣೆ ಇಲ್ಲದೆ. ತಿರುಪತಿ ಸಂಸದ (Tirupati MP) ಗುರುಮೂರ್ತಿ ಅವರು ‘ಪುಷ್ಪ 2’ ರೀತಿ ವೇಷ ಧರಿಸಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ.

ತಿರುಪತಿ ಗಂಗಮ್ಮ ಜಾತ್ರೆಯಲ್ಲಿ ಈ ರೀತಿ ವೇಷ ಧರಿಸಿಕೊಂಡು ಪೂಜೆ ಸಲ್ಲಿಸುವ ಪದ್ಧತಿ ಇದೆ. ಅದನ್ನೇ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಕಾಪಿ ಮಾಡಿದ್ದಾರೆ. ವಿಶೇಷ ಎಂದರೆ ತಿರುಪತಿ ಸಂಸದ ಗುರುಮೂರ್ತಿ ಅವರು ಈಗ ಯಥಾವತ್ತು ಅಲ್ಲು ಅರ್ಜುನ್​ ರೀತಿ ವೇಷ ಧರಿಸಿಕೊಂಡು ಗಂಗಮ್ಮ ಜಾತ್ರೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ‘ಪುಷ್ಪ 2’ ಸಿನಿಮಾದ ಕ್ರೇಜ್​ ಹೆಚ್ಚುವಂತಾಗಿದೆ.

ಇದನ್ನೂ ಓದಿ
‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ
Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​
Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ
Sai Pallavi: ‘ಪುಷ್ಪ 2’ ಸಿನಿಮಾದಲ್ಲಿ ಸಾಯಿ ಪಲ್ಲವಿಗೆ ನೆಗೆಟಿವ್​ ಪಾತ್ರ? ಟಾಲಿವುಡ್​ ಅಂಗಳದಲ್ಲಿ ಗುಸುಗುಸು

ಪುಷ್ಪ 2 ಸಿನಿಮಾದ ಅಲ್ಲು ಅರ್ಜುನ್ ಜೊತೆಗೆ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಜೊತೆಗೆ ತಮಿಳಿನ ವಿಜಯ್ ಸೇತುಪತಿ ಸಹ ಇದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ನಟಿ ಸಾಯಿ ಪಲ್ಲವಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿಯಾಗಿ ನಟಿಸಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪುಷ್ಪ 2 ಆಡಿಯೋ, ಸ್ಯಾಟಲೈಟ್ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ: ಖರೀದಿಸಿದ್ದು ಬಾಲಿವುಡ್​ನ ದೊಡ್ಡ ಕುಳ

‘ಪುಷ್ಪ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್​ ಬಸ್ಟರ್​ ಆಯಿತು. ಈಗ ‘ಪುಷ್ಪ 2’ ಚಿತ್ರ ಕೂಡ ಅದ್ದೂರಿಯಾಗಿ ತಯಾರಾಗುತ್ತಿದೆ. ಬಹುಭಾಷೆಯಲ್ಲಿ ಫಸ್ಟ್​ ಗ್ಲಿಂಪ್ಸ್​ ಅನಾವರಣ ಮಾಡಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ‘ಪುಷ್ಪ 2’ ಸಿನಿಮಾದಿಂದ ದೊಡ್ಡ ಗೆಲುವು ಪಡೆಯಲೇಬೇಕು ಎಂಬ ಗುರಿಯೊಂದಿಗೆ ನಿರ್ದೇಶಕ ಸುಕುಮಾರ್ ಅವರು ಹಲವು ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.