AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಲಿವುಡ್​ನ ವಿವಾದಾತ್ಮಕ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ನಿಧನ

Rakesh Master: ತಮ್ಮ ನೃತ್ಯದ ಜೊತೆಗೆ ವಿವಾದಾತ್ಮಕ ಸಂದರ್ಶನಗಳು, ಹೇಳಿಕೆಗಳಿಂದಲೂ ಸುದ್ದಿಯಾಗಿದ್ದ ಟಾಲಿವುಡ್​ನ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ನಿಧನ ಹೊಂದಿದ್ದಾರೆ.

ಟಾಲಿವುಡ್​ನ ವಿವಾದಾತ್ಮಕ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ನಿಧನ
ರಾಕೇಶ್ ಮಾಸ್ಟರ್
ಮಂಜುನಾಥ ಸಿ.
|

Updated on:Jun 18, 2023 | 7:16 PM

Share

ತಮ್ಮ ನೃತ್ಯದ ಜೊತೆಗೆ ವಿವಾದಾತ್ಮಕ (Controversy) ಹೇಳಿಕೆಗಳಿಂದಲೂ ಹೆಚ್ಚು ಸುದ್ದಿಯಾಗಿದ್ದ ಡ್ಯಾನ್ಸ್ ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್ ಇಂದು (ಜೂನ್ 18) ನಿಧನ ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದ ರಾಕೇಶ್ ಮಾಸ್ಟರ್ ಇಂದು ವಿಜಯನಗರದಿಂದ ಹೈದರಾಬಾದ್​ಗೆ ಬರುವ ವೇಳೆಯಲ್ಲಿ ಸನ್​ಸ್ಟ್ರೋಕ್​ನಿಂದ ಅವರಿಗೆ ರಕ್ತಸ್ರಾವ ಆದ ಕಾರಣ ಅವರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ವೇಳೆ ರಾಕೇಶ್ ನಿಧನ ಹೊಂದಿದ್ದಾರೆ. ಅವರಿ ಗೆ 55 ವರ್ಷ ವಯಸ್ಸಾಗಿತ್ತು.

ಕಳೆದ ಕೆಲ ವರ್ಷಗಳಿಂದ ತೀವ್ರ ಕುಡಿತದ ದಾಸರಾಗಿದ್ದ ರಾಕೇಶ್​ಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಅದರ ನಡುವೆ ಕೆಲಸವಿಲ್ಲದೆ, ಹಣವಿಲ್ಲದೆ ಬಡತನವೂ ಅವರನ್ನು ಬಾಧಿಸುತ್ತಿತ್ತು. ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ರಾಕೇಶ್​ಗೆ ಅವರ ಮದ್ಯದ ವ್ಯಸನದಿಂದಲೇ ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣದಿಂದ ಕುಡಿತ ಇನ್ನೂ ಹೆಚ್ಚು ಮಾಡಿದ್ದರು ರಾಕೇಶ್.

ಕುಡಿದು ಯೂಟ್ಯೂಬ್ ಸಂದರ್ಶನಗಳನ್ನು ಸಹ ನೀಡಿದ್ದ ರಾಕೇಶ್, ತೆಲುಗು ಚಿತ್ರರಂಗದ ಗಣ್ಯ ನಟ-ನಟಿಯರ ವಿರುದ್ಧ ತೀರ ಕೀಳು ಹೇಳಿಕೆಗಳನ್ನು ಸಹ ಸಂದರ್ಶನಗಳಲ್ಲಿ ನೀಡಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೆ ಗುರಿಯಾಗಿದ್ದರು. ಲೈವ್ ಸಂದರ್ಶನದಲ್ಲಿ ನಿರೂಪಕರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ಹೊಡೆಯುವುದು ಸಹ ಮಾಡಿದ್ದರು. ಕೆಲವು ನೃತ್ಯ ನಿರ್ದೇಶಕರುಗಳ ಹೆಸರು ಹೇಳಿ ಅವರಿಂದಲೇ ತಮ್ಮ ವೃತ್ತಿ ಜೀವನ ಹಾಳಾಯ್ತು ಎಂದು ಆರೋಪ ಮಾಡಿದ್ದರು. ಶ್ರೀಕೃಷ್ಣನ ಬಗ್ಗೆ ಸಂದರ್ಶನವೊಂದರಲ್ಲಿ ನೀಚವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಇವರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಸ್ವಂತ ಯೂಟ್ಯೂಬ್ ಚಾನೆಲ್ ತೆರೆದು ನಟರ ಮೇಲೆ ತಮ್ಮ ಕೀಳು ಆರೋಪಗಳನ್ನು ಮುಂದುವರೆಸಿದ್ದರು.

ಇದನ್ನೂ ಓದಿ:RGV: ಆರ್​ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ

1968 ರಲ್ಲಿ ತಿರುಪತಿಯಲ್ಲಿ ಜನಿಸಿದ ರಾಕೇಶ್ ಮೂಲ ಹೆಸರು ಎಸ್.ರಾಮಾರಾವು. ಆರಂಭದಲ್ಲಿ ನೂಕು ರಾಜು ಹೆಸರಿನ ನೃತ್ಯ ನಿರ್ದೇಶಕರ ಬಳಿ ಕೆಲಸ ಮಾಡಿದ ರಾಕೇಶ್ ಆ ನಂತರ ಸ್ವತಂತ್ರ್ಯ ನೃತ್ಯ ನಿರ್ದೇಶಕರಾದರು. ಸೀತಯ್ಯ, ಲಾಹಿರಿ ಲಾಹಿರಿ ಲಾಹಿರಿ ಲೋ, ದೇವದಾಸು, ಅಮ್ಮೋ ಪೋಲಿಸೋಳ್ಳು ಸೇರಿದಂತೆ ಇನ್ನೂ ಕೆಲವು ತೆಲುಗು ಸಿನಿಮಾಗಳಿಗೆ ರಾಕೇಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈಗ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನೃತ್ಯ ನಿರ್ದೇಶಕರಾಗಿರುವ ಶೇಖರ್ ಮಾಸ್ಟರ್, ಜಾನಿ ಮಾಸ್ಟರ್ ಅವರುಗಳಿಗೆ ತರಬೇತಿ ಕೊಟ್ಟಿದ್ದು ಇದೇ ರಾಕೇಶ್ ಮಾಸ್ಟರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Sun, 18 June 23

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!